ಜ.26ರ ದೆಹಲಿ ಹಿಂಸಾಚಾರಕ್ಕೆ ಟೂಲ್ ಕಿಟ್: ಆರೋಪಿ ದಿಶಾ ರವಿ ನ್ಯಾಯಾಂಗ ಬಂಧನ 3 ದಿನಗಳಿಗೆ ವಿಸ್ತರಣೆ

ದೆಹಲಿಯಲ್ಲಿ ಈ ಬಾರಿಯ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೃಷಿ ಕಾಯ್ದೆ ವಿರುದ್ಧದ ರೈತರ ಹೋರಾಟದ ವೇಳೆ ಪೊಲೀಸರ ಮೇಲೆಯೇ ಹೀನಾಯ ಹಿಂಸಾಚಾರ ನಡೆಸಿದ್ದ ಕೃತ್ಯಕ್ಕೆ ಕಾರಣವಾದ ಟೂಲ್ ಕಿಟ್ ಆರೋಪದಲ್ಲಿ ದೆಹಲಿ ಪೊಲೀಸರಿಂದ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿಯ ಪಾಟಿಯಾಲ ಕೋರ್ಟ್ ಮತ್ತೆ 3 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ಶುಕ್ರವಾರ ಬೆಂಗಳೂರಿನ 21 ವರ್ಷದ ದಿಶಾ ರವಿ ಅವರ 5 ದಿನಗಳ ನ್ಯಾಯಾಂಗ ಬಂಧನ ಅಂತ್ಯಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಪಾಟಿಯಾಲ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು.
ಆದರೆ ದೆಹಲಿ ಪೊಲೀಸರ ಪರ ವಕೀಲರು ದಿಶಾ ರವಿ ಅವರಿಗೆ ಜಾಮೀನು ನೀಡಿದರೆ ವಿಚಾರಣೆಗೆ ತೊಡಕಾಗುತ್ತದೆ ಎಂದು ಬಲವಾಗಿ ನ್ಯಾಯಾಧೀಶರ ಮುಂದೆ ವಾದಿಸಿದರು.
ಬಳಿಕ ನ್ಯಾಯಾಧೀಶರು ದಿಶಾ ರವಿಯ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 3 ದಿನಗಳಿಗೆ ವಿಸ್ತರಿಸಿ ಆದೇಶಿಸಿದರು.
ಜ.26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನದಂದು 3 ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟದ ಹೆಸರಿನಲ್ಲಿ ಖುದ್ದು ದೆಹಲಿ ಪೊಲೀಸರ ಮೇಲೆಯೇ ಭಾರೀ ಹಿಂಸಾಚಾರ ನಡೆದು ಸುಮಾರು 380ಕ್ಕೂ ಹೆಚ್ಚಿನ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿತ್ತು. ಕೆಲವು ಪೊಲೀಸರು ಮಾರಣಾಂತಿಕವಾಗಿ ಹಲ್ಲೆಗೀಡಾಗಿದ್ದರು. ಇದಕ್ಕೆಲ್ಲಾ
ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥೆನ್ಬರ್ಗ್ ಅವರ ರೈತ ಪರ ಹೋರಾಟದ ಪೋಸ್ಟ್ ಕಾರಣ ಎನ್ನಲಾಗಿದೆ,ಇದಕ್ಕಾಗಿ ಜ.26ಕ್ಕೂ ಮುನ್ನ ಟೂಲ್ ಕಿಟ್ ರಚಿಸಲು ಖಲಿಸ್ತಾನ್ ಸಂಘಟನೆಯ ಮುಖ್ಯಸ್ಥ ಮೊ ಧಲಿವಾಲ್, ದಿಶಾ ರವಿ, ನಿಕಿತಾ ಜಾಕೋಬ್, ಶಂತನು ಸೇರಿದಂತೆ ಹಲವರು ಜೂಮ್ ಮೀಟಿಂಗ್ ನಡೆಸಿದ್ದರು ಎಂದು ದೆಹಲಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕಾಗಿ ಟೂಲ್ ಕಿಟ್ ರಚಿಸಲು ಮಾಡಿದ್ದ ವಾಟ್ಸಪ್ ಗ್ರೂಪನ್ನು ಡಿಲೀಟ್ ಮಾಡಿ ಆರೋಪಿಗಳು ಸೇಫ್ ಆಗಲು ಮುಂದಾಗಿದ್ದರು ಎಂದು ದೆಹಲಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆದರೆ ಇದಕ್ಕೆಲ್ಲಾ ತನ್ನ ಸಹಪಾಠಿಗಳೇ ಕಾರಣ ಎಂದು ನೆಪ ಹೇಳಿ ನ್ಯಾಯಾಂಗ ಬಂಧನದಲ್ಲಿ ವಿಚಾರಣೆಗೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಸಹಕರಿಸುತ್ತಿಲ್ಲ ಎಂದು ದೆಹಲಿ ಪೊಲೀಸರ ಪರ ವಕೀಲರು ವಾದಿಸಿದ ಕಾರಣ ದಿಶಾ ರವಿಗೆ ಇನ್ನೂ 3 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿಯನ್ನು ದೆಹಲಿಯ ಪಾಟಿಯಾಲ ಕೋರ್ಟ್ ವಿಸ್ತರಿಸಿದೆ.
. KTVKANNADA ನವದೆಹಲಿ

Add Comment