ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ಸ್ವದೇಶಿ ಲಸಿಕೆಗಳು ಬಳಕೆಗೆ ಲಭ್ಯವಾಗಿವೆ. ಆದರೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಮತ್ತೆ ಮೊದಲಿನಂತೆ ಕೊರೊನಾ ವೈರಸ್ ರೂಪಾಂತರಗೊಂಡು ಪಕ್ಕದ ನಮ್ಮ ಕರ್ನಾಟಕಕ್ಕೂ ಭೀತಿ ಹುಟ್ಟಿಸಿದೆ.
ಈ ಮಧ್ಯೆ ಕರ್ನಾಟಕ ಸರ್ಕಾರ ಕೊಡಗು,ದಕ್ಷಿಣ ಕನ್ನಡ,ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೊರೊನಾ ಹೈಅಲರ್ಟ್ ಘೋಷಿಸಿದೆ.
ಕಾರಣ ಮಹಾರಾಷ್ಟ್ರದಲ್ಲಿ ಈಗ ಪ್ರತಿದಿನ 6 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮಹಾರಾಷ್ಟ್ರ ಈಗ ದೇಶದಲ್ಲೇ ಮೊದಲಿನಂತೆ ನಂ.1 ಕೊರೊನಾ ಹಾಟ್ ಸ್ಪಾಟ್ ರಾಜ್ಯವೆನಿಸಿದೆ. ಆದ್ದರಿಂದ ಮರಾಠಿಗರ ಹಾವಳಿ ಹೆಚ್ಚಾಗಿರುವ ಕಾಶ್ಮೀರದಂತೆ ವಿವಾದಕ್ಕೀಡಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಹೈಅಲರ್ಟ್ ಘೋಷಿಸಲಾಗಿದೆ. ಇಷ್ಟಾದರೂ ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರಕ್ಕೆ ಹೋಗಿಬರುವ ವಾಹನಗಳಿಗೆ ಯಾವುದೇ ಅಡೆತಡೆ ಎದುರಾಗಿಲ್ಲ. ಮಹಾರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲಿ ದಾಳಿಯಿಟ್ಟಿರುವ ರೂಪಾಂತರ ಕೊರೊನಾ ಸೋಂಕಿನಂತೆ ರೂಪಾಂತರ ಕೊರೊನಾ ದಾಳಿಯಿಟ್ಟಿರುವ ಆತಂಕ ಕೇಂದ್ರಸರ್ಕಾರದ ಆರೋಗ್ಯ ಇಲಾಖೆ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಕಾಡುತ್ತಿದೆ.
ಏತನ್ಮಧ್ಯೆ ಕೇರಳ ರಾಜ್ಯದಲ್ಲೂ ಸಹ ಕೊರೊನಾ ಸೋಂಕು ಮಿತಿಮೀರಿದೆ. ದೇಶದಲ್ಲಿ ಮೊದಲೆರಡು ಕೊರೊನಾ ಹಾಟ್ ಸ್ಪಾಟ್ ರಾಜ್ಯಗಳಾಗಿ ಮಹಾರಾಷ್ಟ್ರ ಮತ್ತು ಕೇರಳ ಹೊರಹೊಮ್ಮಿವೆ. ಇದರಿಂದ ಕೇರಳ ಆಸುಪಾಸಿನಲ್ಲಿರುವ ದಕ್ಷಿಣಕನ್ನಡ,ಮಡಿಕೇರಿ,ಮೈಸೂರು ಜಿಲ್ಲೆಗಳಲ್ಲಿ ಕೊರೊನಾ ಹೈಅಲರ್ಟ್ ಘೋಷಿಸಲಾಗಿದೆ. ಈ 4 ಜಿಲ್ಲೆಗಳಿಗೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿ ತರಲೇಬೇಕು, ಕೊರೊನಾ ನೆಗೆಟಿವ್ ವರದಿ ತರದೇ ಕರ್ನಾಟಕ ಒಳಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ಈ ನಾಲ್ಕೂ ಜಿಲ್ಲಾಡಳಿತಗಳಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.
ಆದರೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಶುಕ್ರವಾರದ ಹೇಳಿಕೆಯನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಮತ್ತೆ ಮೊದಲು ವಿಧಿಸಲಾಗಿದ್ದ ಕೊರೊನಾ ಲಾಕ್ ಡೌನ್ ಹೇರುವುದನ್ನೂ ಈಗ ಸರ್ಕಾರದ ಮಟ್ಟದ ಅಧಿಕಾರಿಗಳೂ ತಳ್ಳಿಹಾಕುವಂತಿಲ್ಲ!
KTKANNADA ಬೆಂಗಳೂರು