BIG BREAKING- ಎಲ್ಲರ ಆಟ ಮುಗಿಯಿತು- ಯಡಿಯೂರಪ್ಪಗೆ ಮೋದಿ ಇಂಜೆಕ್ಷನ್ -100% ಲಾಕ್‍ಡೌನ್

1 Star2 Stars3 Stars4 Stars5 Stars (No Ratings Yet)
Loading...

 

ಬೆಂಗಳೂರು : ರಾಜ್ಯದ ಪುಂಡ ಪೋಕರಿಗಳು, ಮಾತುಕೇಳದ ಶಿಕ್ಷಿತ ಅವಿದ್ಯಾವಂತರು, ಮಾಡಿದ ಆಟಾಟೋಪಕ್ಕೆ ಸಿಎಂ ಯಡಿಯೂರಪ್ಪ ತಲೆತಗ್ಗಿಸಬೇಕಾಗಿದೆ. ರಾಜ್ಯದ ಜನತೆ ಉಪವಾಸದಿಂದ ಸಾಯೋದು ಬೇಡ, ಅಂತ ಅಗತ್ಯ ವಸ್ತುಗಳ ಖರೀದಿಗೆ ಯಡಿಯೂರಪ್ಪ ಅವಕಾಶ ಕಲ್ಪಿಸಿದ್ದರು. ಆದರೆ, ಇದೇ ನೆಪದಲ್ಲಿ ಜನ ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದರು. ಇದರಿಂದ ಲಾಕ್‍ಡೌನ್ ನಗೆಪಾಟಲಿಗೀಡಾಗಿತ್ತು. ಇದರಿಂದ ಬೇಸರಗೊಂಡ ಮೋದಿಯವರು ಬೆಳಗ್ಗೆ 9 ಗಂಟೆಗೆ ಕರೆ ಮಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇರೀತಿ ಕರ್ನಾಟಕದ ಜನರ ಆಡ್ತಿದ್ದರೆ, ಯಾರೂ ಕರ್ನಾಟಕವನ್ನು ಕಾಪಾಡಲಾಗದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಇದರಿಂದ ಎಚ್ಚೆತ್ತ ಸಿಎಂ ಕರ್ನಾಟಕವನ್ನು 100% ಲಾಕ್‍ಡೌನ್ ಮಾಡಲು ಆದೇಶ ನೀಡಿದ್ದಾರೆ. ಇನ್ಮೇಲೆ ಯಾರೂ ಮನೆಯಿಂದ ಹೊರಬರುವಂತಿಲ್ಲ. ಮನೆಯಿಂದ ಹೊರಬಂದು ವಾಹನಗಳಲ್ಲಿ ಓಡಾಡಿದರೆ, ತಕ್ಷಣವೇ ಲೈಸೆನ್ಸ್ ರದ್ದುಪಡಿಸಲು ಆದೇಶಿಸಿದ್ದಾರೆ. ಅಲ್ಲದೆ, ದಿನಸಿ, ಹಾಲು ತರಕಾರಿ ನೆಪದಲ್ಲೂ ಯಾರೂ ಓಡಾಡುವಂತಿಲ್ಲ. ನಾಳೆ ಬೆಳಗ್ಗಿನಿಂದಲೇ ನಿಮ್ಮ ಮನೆಮನೆಗೆ ದಿನಸಿ, ತರಕಾರಿ, ಹಾಲು ಬಂದು ಬೀಳಲಿದೆ. ಗ್ರಾಮ ಪಂಚಾಯತ್, ಪುರಸಭೆ, ನಗರಸಭೆ, ಕಾರ್ಪೋರೇಷನ್‍ಗಳ ಮೂಲಕ ದಿನಸಿ ತರಕಾರಿ ಹಾಲು ಸರಬರಾಜು ಮಾಡಲು ಸಿಎಂ ಆದೇಶಿಸಿದ್ದಾರೆ. ಹೀಗಾಗಿ ಇನ್ಯಾರೂ ಹೊರಬರುವಂತಿಲ್ಲ.

ಈ ಮಧ್ಯೆ ಸಂಪುಟಸಭೆ ನಡೆಸಿದ ಸಿಎಂ ಜಿಲ್ಲಾಡಳಿತಕ್ಕೂ ಕಠಿಣ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲಾಕೇಂದ್ರದಲ್ಲಿದ್ದುಕೊಂಡೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ರೈತರ ಬೆಳೆಗಳನ್ನು ನೇರವಾಗಿ ಸರಕಾರಿ ಗೋಡೌನ್‍ಗಳಿಗೆ ತಂದು ಅಲ್ಲಿಂದ ಚಿಲ್ಲರೆ ಅಂಗಡಿಗಳಿಗೆ ತಲುಪಿಸಲು ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಕೂಡಾ ಮುಚ್ಚಲು ಆದೇಶಿಸಿದ್ದು, ಪ್ಯಾಕೆಟ್ ಮಾಡಿ ವಿತರಿಸಲು ಆದೇಶಿಸಿದ್ದಾರೆ.

ಟ್ರ್ಯಾಕ್ಟರ್, ಟಿಲ್ಲರ್ ಸಾಲದ ಮೇಲಿನ ಬಡ್ಡಿ ಮನ್ನಾ ಅವಧಿ ವಿತರಿಸಿದ್ದಾರೆ.

Add Comment