ಪಂಚಮಸಾಲಿ ಸೇರಿದಂತೆ ಇತರೆ ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ ನೀಡುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ರಾಜ್ಯಸರ್ಕಾರ ಆದೇಶ

ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟಿರುವ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2A ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಯಮೃತ್ಯುಂಜಯ ಶ್ರೀಗಳು ಕಳೆದ ಜನವರಿ 14 ರಿಂದ ಸತತವಾಗಿ 700 ಕಿಲೋಮೀಟರ್ ಪಾದಯಾತ್ರೆ ನಡೆಸಿ ಹರಿಹರ ಮಾರ್ಗವಾಗಿ ಬೆಂಗಳೂರು ತಲುಪಿದ್ದರು. ಅದರಲ್ಲೂ ನಿನ್ನೆ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು ‌10 ಸಾವಿರದಷ್ಟು ಪಂಚಮಸಾಲಿ ಲಿಂಗಾಯತ ಸಮಾಜದವರು ರಾಜ್ಯಸರ್ಕಾರ ಈ ಕೂಡಲೇ ತಮ್ಮ ಸಮಾಜಕ್ಕೆ 2A ಮೀಸಲಾತಿ ನೀಡಬೇಕೆಂದು ಒತ್ತಾಯಿಸುವ ಬೃಹತ್ ಸಮಾವೇಶವನ್ನು ನಡೆಸಿದರು. ಈ ಸಮಾವೇಶದಲ್ಲಿ ಭಾನುವಾರ ಮಧ್ಯಾಹ್ನ ರೊಟ್ಟಿ,ಪಲ್ಲೆ,ಚಟ್ನಿ ಪುಡಿ ಪುಗಸಟ್ಟೆ ಕೊಡುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಇತರೆ ಸಮಾಜದವರೂ ಸೇರಿದಂತೆ ಕೆಲವು ಒಳಪಂಗಡಗಳ ಲಿಂಗಾಯತ ಸಮಾಜದವರು ಅರಮನೆ ಮೈದಾನಕ್ಕೆ ನುಗ್ಗಿ ಭರ್ಜರಿ ಉತ್ತರಕರ್ನಾಟಕ ಊಟ ತಿಂದು ತೇಗಿದ್ದಾರೆ. ಅಷ್ಟರಲ್ಲಾಗಲೇ ಬಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಜಯಮೃತ್ಯುಂಜಯ ಶ್ರೀಗಳನ್ನು ವಿಧಾನಸೌಧಕ್ಕೆ ಪಾದಯಾತ್ರೆ ನಡೆಸುವುದನ್ನು ತಪ್ಪಿಸಿದರು. ಆದರೆ ಕೊನೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಜಯಮೃತ್ಯುಂಜಯ ಶ್ರೀಗಳ ಕಿವಿಯಲ್ಲಿ ಏನೋ ಪಿಸುಗುಟ್ಟಿ ಮತ್ತೆ ಪಾದಯಾತ್ರೆ ನಡೆಸುತ್ತೇನೆಂದು ಹೇಳುವಂತೆ ಮಾಡಿದರು.‌ ಹೀಗೆ ಮತ್ತೆ ವಿಧಾನಸೌಧಕ್ಕೆ ಜಯಮೃತ್ಯುಂಜಯ ಶ್ರೀಗಳು ಪಾದಯಾತ್ರೆ ನಡೆಸುವಂತೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರೇರೇಪಿಸಿ ಪಂಚಮಸಾಲಿ ಲಿಂಗಾಯತ ಸಮಾಜವನ್ನು ರಾಜ್ತ ಬಿಜೆಪಿ ಸರಕಾರದ ವಿರುದ್ಧ ಎತ್ತಿಕಟ್ಟಲು ಹವಣಿಸಿದ್ದಾರೆ. ಜೊತೆಗೆ ಬಿಜೆಪಿಯ ವಿಜಯಪುರ ಕ್ಷೇತ್ರದ ಹಿರಿಯ ಶಾಸಕ,ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಸಹ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಸಮಾವೇಶವನ್ನು ರಾಜಕೀಯ ದಾಳವನ್ನಾಗಿ ಬಳಸಲು ತಮ್ಮ ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಂಡರಷ್ಟೇ. ಆದರೆ ನಿಜಕ್ಕೂ ನಮ್ಮ ಸಿಎಂ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜದ ಜೊತೆಗೆ ಹಲವಾರು ಹಿಂದುಳಿದ ಲಿಂಗಾಯತ ಒಳಪಂಗಡಗಳನ್ನು ಸೇರಿಸಿ 2A ವರ್ಗದ ಮೀಸಲಾತಿ ನೀಡಬೇಕೆಂದು ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದ್ದಾರೆ‌. ಆದರೆ ತಮ್ಮದೇ ಕಾಂಗ್ರೆಸ್ ಸರ್ಕಾರಗಳು ರಾಜ್ಯದಲ್ಲಿ ಹಲವು ದಶಕಗಳವರೆಗೆ ಅಧಿಕಾರದಲ್ಲಿದ್ದರೂ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ತಂದೆ ಕಾಶಪ್ಪನವರ್ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸಲಾಗಲಿಲ್ಲ ಎಂದು ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 1 ಗಂಟೆಯಿಂದ ಸುಮಾರು 30 ನಿಮಿಷಗಳ ಕಾಲ ಪಂಚಮಸಾಲಿ ಲಿಂಗಾಯತ ಸಮಾಜದ ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು.
ಈಗಾಗಲೇ ನಮ್ಮ ಸಿಎಂ ಯಡಿಯೂರಪ್ಪ ಅವರು ನಮ್ಮ ಪಂಚಮಸಾಲಿ ಸಮಾಜ ಸೇರಿದಂತೆ ಇತರೆ ಹಿಂದುಳಿದ ಲಿಂಗಾಯತ ಒಳಪಂಗಡಗಳಿಗೆ 2A ಮೀಸಲಾತಿ ನೀಡುವ ಬಗ್ಗೆ ಸಂವಿಧಾನದ ನಿಯಮಗಳಡಿ ಹಿಂದುಳಿದ ಆಯೋಗಕ್ಕೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಆದೇಶಿಸಿದ್ದಾರೆ. ಆದರೆ ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮಾಜವನ್ನು ತಮ್ಮ ರಾಜಕೀಯ ದಾಳವನ್ನಾಗಿ ಬಳಸಲು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ನಮ್ಮದೇ ಬಿಜೆಪಿ ಶಾಸಕ ವಿಜಯಾನಂದ ಕಾಶಪ್ಪನವರ್ ಯತ್ನಿಸಿದರು. ಆದರೆ 2016ರಲ್ಲೇ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡಬೇಕೆಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಆದರೆ ಈಗ ಜಯಮೃತ್ಯುಂಜಯ ಶ್ರೀಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಹೋರಾಟದ ಹಾದಿಯನ್ನೇ ದಿಕ್ಕುತಪ್ಪಿಸಲು ಶಾಸಕರಾದ ವಿಜಯಾನಂದ ಕಾಶಪ್ಪನವರ್ ಮತ್ತು ಯತ್ನಾಳ್ ಯತ್ನಿಸಿದ್ದಾರೆ‌. ಆದರೆ ನಮ್ಮ ಸರ್ಕಾರ ಬಸವಕಲ್ಯಾಣ ಟ್ರಸ್ಟ್ ಸಭೆ ಕರೆದಿಲ್ಲ ಎಂದು ಸುಪ್ರೀಂಕೋರ್ಟಿಗೂ ತಿಳಿಸಿದ್ದೇವೆ ಎಂದು ಸುದ್ದಿಗೋಷ್ಠಯಲ್ಲಿ ಸಚಿವರಾದ ನಿರಾಣಿ ಮತ್ತು ಸಿ.ಸಿ
ಪಾಟೀಲ್ ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಕಳಕಪ್ಪ ಬಂಡಿ,ಬಿಜೆಪಿ ಮುಖಂಡರಾದ ಸಂಗಣ್ಣ ಕರಡಿ,ವಿರೂಪಾಕ್ಷಪ್ಪ ಬಳ್ಳಾರಿ,ಮೋಹನ್ ಲಿಂಬೇಕಾಯಿ ಉಪಸ್ಥಿತರಿದ್ದರು.
KTVKANNADA ಬೆಂಗಳೂರು

Add Comment