ಪುದುಚೇರಿಯ ಕಾಂಗ್ರೆಸ್-ಡಿಎಂಕೆ ಸರ್ಕಾರ ಪತನ-ಸಿಎಂ ವಿ.ನಾರಾಯಣಸ್ವಾಮಿ ರಾಜೀನಾಮೆ

ಪುದುಚೇರಿಯ ವಿ.ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್-ಡಿಎಂಕೆ ಸರ್ಕಾರ ಇಂದು ಮಹತ್ವದ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುವ ಮೂಲಕ ಪತನವಾಗಿದೆ.
ಈ ಮೂಲಕ ದಕ್ಷಿಣ ಭಾರತದ ಕಟ್ಟಕಡೆಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನವಾಗಿದೆ.‌
ಇಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದ ಕಾರಣ ಲೆಫ್ಟಿನೆಂಟ್ ಗವರ್ನರ್ ತಮಿಳ್ ಸೈ ಸೌಂದರ್ ರಾಜನ್ ಸಿಎಂ ವಿ‌.ನಾರಾಯಣಸ್ವಾಮಿ ಅವರ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ಆದೇಶಿಸಿದ್ದರು. ಆದರೆ 3 ಎಐಎಡಿಎಂಕೆ ನಾಮನಿರ್ದೇಶಿತ ಸದಸ್ಯರು ಅವಿಶ್ವಾಸ ಗೊತ್ತುವಳಿಯಲ್ಲಿ ಮತ ಹಾಕಿದ್ದರಿಂದ ಕಾಂಗ್ರೆಸ್-ಡಿಎಂಕೆ ಸರ್ಕಾರ ಇದೇ ವರ್ಷದ ಜೂನ್ 8 ಕ್ಕೂ ಮುನ್ನ ಪತನವಾಯಿತು.‌
ಬಳಿಕ ಸಿಎಂ ಸ್ಥಾನಕ್ಕೆ ವಿ.ನಾರಾಯಣಸ್ವಾಮಿ ಅವರು
ಲೆಫ್ಟಿನೆಂಟ್ ಗವರ್ನರ್ ತಮಿಳ್ ಸೈ ಸೌಂದರ್ ರಾಜನ್ ಅವರಿಗೆ ರಾಜೀನಾಮೆ ನೀಡಿದರು.
ಆದಕಾರಣ ಮುಂದಿನ 3 ತಿಂಗಳ ಅವಧಿಗೆ ಲೆಫ್ಟಿನೆಂಟ್ ಗವರ್ನರ್ ತಮಿಳ್ ಸೈ ಸೌಂದರ್ ರಾಜನ್ ಬಿಜೆಪಿ-ಎಐಎಡಿಎಂಕೆ ಸಮ್ಮಿಶ್ರ ಸರ್ಕಾರ ರಚಿಸಲು ಆಹ್ವಾನ ನೀಡುತ್ತಾರೊ ಅಥವಾ 3 ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ಜಾರಿಗೆ ತರುತ್ತಾರೊ? ಎಂಬ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ.
ಈ ಮಧ್ಯೆ ತಮ್ಮ ಸರ್ಕಾರ ಇಂದು ಪತನವಾಗಲು ಹಿಂದಿನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರೇ ನೇರ ಕಾರಣ ಎಂದು ಬಹುಮತ ಗಳಿಸದ ಬಿಜೆಪಿ-ಎಐಎಡಿಎಂಕೆ ಸರ್ಕಾರ ರಚಿಸುವಂತೆ ರಾಜಕೀಯ ಹುನ್ನಾರ ನಡೆಸಿದ್ದಾರೆ ಎಂದು ನಿರ್ಗಮಿತ ಸಿಎಂ ವಿ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
KTVKANNADA ಪುದುಚೇರಿ

Add Comment