ಹಾಸನ ಜಿಲ್ಲೆಯಲ್ಲಿ ರಸ್ತೆ ಅಪಘಾತ – ರಸ್ತೆಯಲ್ಲಿ ಸಾವನ್ನಪ್ಪಿದ 4 ಜನರು

ಹಾಸನ- ಜಿಲ್ಲೆಯಲ್ಲಿ ಬೆಳಗ್ಗೆ ಸುಮಾರು 4:00 ಗಂಟೆ ಸಮಯದಲ್ಲಿ ಕ್ವಾಲಿಸ್ ಹಾಗೂ ಟಾಟಾ ಸುಮೊ ನಡುವೆ ಡಿಕ್ಕಿ ನಡೆದಿದ್ದು. ಶಾಂತಿಗ್ರಾಮ ಸಮೀಪ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಕ್ವಾಲಿಸ್ ವಾಹನದಲ್ಲಿ 8ಜನ ಹಾಗೂ ಟಾಟಾ ಸುಮಾ ವಾಹನದಲ್ಲಿ 10 ಜನರಿದ್ದು. 4 ಜನರು ಮೃತಪಟ್ಟಿರುತ್ತಾರೆ. ಉಳಿದವರು ಹಾಸನ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ. ಅಪಘಾತವಾದ ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್ ಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್ಎಲ್ಎನ್ ಯೋಗೇಶ್ ಕೆ ಟಿವಿ ನ್ಯೂಸ್ ಹಾಸನ
ಕೆ.ಟಿವಿ ನ್ಯೂಸ್ ಕನ್ನಡ

Add Comment