ಅರಸೀಕೆರೆಯಲ್ಲಿ 809ನೇ ಉರುಸ್ ಹಬ್ಬ   –  ಬಂಧುಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ

ಸೂಫಿ ಸಂತರಾದ ಹಜರತ್ ಖಾಜಾ ಗರೀಬ್ ನವಾಜ್ ಅಜ್ಮೀರ್ ದರ್ಗಾ ರವರ 809 ನೇ ಉರುಸ್ ಪ್ರಯುಕ್ತ ಸಾರ್ವಜನಿಕ ಬಂಧುಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಗರಿಬ್ ನವಜ ಕಮಿಟಿಯ( ರಿ ) ವತಿಯಿಂದ ಏರ್ಪಡಿಸಲಾಗಿತ್ತು . ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಜಿ ಬಿ ಶಶಿಧರ್ G ಮಾತನಾಡಿ ಅಜ್ಮೀರ್ ದರ್ಗಾಭಾರತ ದೇಶದ ಪ್ರಸಿದ್ಧ ಸೂಫಿಸಂತರ ದರ್ಗಾ ಪ್ರತಿದಿನ ಸಾವಿರಾರು ಭಕ್ತಾದಿಗಳು ಜಾತಿ ಭೇದವಿಲ್ಲದೆ ಎಲ್ಲಾಧರ್ಮದ ಜನರು ಹೋಗಿ ಬರುತ್ತಾರೆ ನಮ್ಮ ಅರಸೀಕೆರ ಹಬ್ಬವನ್ನು ಎಲ್ಲಾ ಬಾಂಧವರು ಆಚರಿಸಲಾಗುತ್ತದೆ ಎಂದು ತಿಳಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಿಟಿಯ ಅಧ್ಯಕ್ಷರಾದ ಅಥಾವುಲ್ಲಾ ಮಾತನಾಡಿ ಕಳೆದ ಎರಡು ವರ್ಷಗಳಿಂದ ಎಸ್ಎಲ್ಎನ್ ಲೇಔಟ್ ನಲ್ಲಿ ಆಚರಿಸುತ್ತ ಬಂದಿದ್ದೇವೆ ಎಂದು ತಿಳಿಸಿದರು. ಎಸ್ ಎಲ್ ಎನ್ ಲೇಔಟ್ ಮಾಲೀಕರಾದ ಗೋವಿಂದ್ ರಾಜು ರವರಿಗೆ ಅಭಿನಂದಿಸಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರುಗಳಾದ ಮಾಜಿ ಪುರಸಭೆ ಅಧ್ಯಕ್ಷರು ಕೆಸಿ ಯೋಗೇಶ್, ಸಮಾಜಸೇವಕರಾದ ಟಿ ಆರ್ ನಾಗರಾಜ್ , ಮಾಜಿ ನಗರಸಭಾ ಅಧ್ಯಕ್ಷರು ಹಾಲಿ ಸದಸ್ಯರು ಎಂ ಸಮಿಉಲ್ಲಾ ಉದ್ಯಮಿಗಳಾದ ಈಕೆ ರಿಯಾಜ್ ಅರಸೀಕೆರೆ ನಗರ ಪೋಲಿಸ್ ಇನ್ಸ್ಪೆಕ್ಟರ್ ಸೋಮೇಗೌಡ ಕರವೇ ತಾಲೂಕು ಅಧ್ಯಕ್ಷರಾದ ಹೇಮಂತ್ ಕುಮಾರ್ ಸಾರ್ವಜನಿಕ ಬಂಧುಗಳು ರೈತಬಾಂಧವರು ಅಲ್ಲಿನ ನಿವಾಸಿಗಳು ಉಪಸ್ಥಿತರಿದ್ದರು.

ಎಸ್ಎಲ್ಎನ್ ಯೋಗೇಶ್ ಕೆ ಟಿವಿ ನ್ಯೂಸ್ ಅರಸೀಕೆರೆ

ಕೆ.ಟಿವಿ ನ್ಯೂಸ್ ಕನ್ನಡ

Add Comment