ಹಾಸನ ಜಿಲ್ಲೆಅರಸೀಕೆರೆ ತಾಲೂಕು ಯೂತ್ ಕಾಂಗ್ರೆಸ್ ಪಕ್ಷ ವತಿಯಿಂದ ಕೇಂದ್ರ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ತೈಲಬೆಲೆ ಏರಿಕೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಹಾಗೂ ಪ್ರತಿದಿನ ಬಳಸುವ ಆಹಾರ ಪದಾರ್ಥಗಳು ಬೆಲೆ ಏರಿಕೆಯಾಗಿರುವುದರಿಂದ ಬಡ ರೈತರ ಕುಟುಂಬ ಸಾರ್ವಜನಿಕ ಕುಟುಂಬ ಹಾಗೂ ಮಧ್ಯಮ ವರ್ಗದ ಜನರ ಕಷ್ಟಗಳನ್ನು ತಿಳಿದುಕೊಳ್ಳದೆ ಇರುವುದರಿಂದ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿರುದ್ಧ ನಗರದ ಪ್ರವಾಸಿ ಮಂದಿರದಿಂದ ಪಿಪಿ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು. ಹಾಸನ ಜಿಲ್ಲಾಯೂತ ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ಮಾತನಾಡಿ ಎಪಿಎಂಸಿ ಕಾಯಿದೆ ತಿದ್ದುಪಡಿ ಮಾಡಿರುವುದು ರೈತರಿಗೆ ಸಂಕಷ್ಟ ಮಾಡುತ್ತದೆ ರೈತನಿಗೆ ಅನಾನುಕೂಲವೇ ಅತಿ ಹೆಚ್ಚಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಿಬಿ ಶಶಿಧರ್ ರವರು ರೈತರ ಜಮೀನುಗಳು ಬಂಡವಾಳ ಶಾಹಿಗಳ ಪಾಲಾ ಆಗುತ್ತಿದೆ , ಸಾರ್ವಜನಿಕರು ಸಂಕಷ್ಟಕ್ಕೆ ಒಳಪಟ್ಟಿರುತ್ತಾರೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪ್ರತಿಭಟನೆ ಮೆರವಣಿಗೆಯ ಹಾಸನ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವಗಲ್ ಮಂಜುನಾಥ್ ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಶೋಕ್ ಜಿಲ್ಲಾ ಪಂಚಾಯತ್ ಸದಸ್ಯರಾದ ಮಾಡಾಳು ಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ರೈತಬಾಂಧವರು ಸಾರ್ವಜನಿಕ ಬಂಧುಗಳು ಭಾಗವಹಿಸಿದ್ದರು
ಎಸ್ಎಲ್ಎನ್ ಯೋಗೇಶ್ ಕೆ ಟಿವಿ ನ್ಯೂಸ್ ಅರಸೀಕೆರೆ
ಕೆ.ಟಿವಿ ನ್ಯೂಸ್ ಕನ್ನಡ