ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಎ ಮಂಜು

ರಾಮಮಂದಿರಕ್ಕೆ ಹಣ ಕೇಳುವವರು ಗೂಂಡಾಗಳು ಎನ್ನುವವರು ಚುನಾವಣೆ ಬಂದಾಗ ಒಂದು ಟಿಕೇಟ್ ಗೆ 4-5ಕೋಟಿ ತೆಗೆದುಕೊಳ್ಳುವವರನ್ನ ಏನ್ನನ್ನಬೇಕು ಎಂದು ಮಾಜಿ ಸಚಿವ ಎ.ಮಂಜು ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ರು. ಭಾರತ ಇರೋದೆ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲೆ. ರಾಮಮಂದಿರ ಕಟ್ಟುತ್ತಿರುವುದು ಒಂದು ಮಹತ್ತರ ಕಾರ್ಯ. ಇಂತಹ ಕಾರ್ಯಕ್ಕೆ ದೇಶದ ಜನರು ಹತ್ತು ರೂಪಾಯಿಂದ ತಮ್ಮ ಕೈಲಾದಷ್ಟು ಹಣ ಸಂದಾಯ ಮಾಡಿದ್ದಾರೆ. ಹಣ ಸಂಗ್ರಹಣೆ ಮಾಡುವವರನ್ನು ಪುಂಡ ಪೋಕರಿಗಳು ಎನ್ನುವುದಾದರೆ ಚುನಾವಣೆ ಸಂದರ್ಭದಲ್ಲಿ ಒಂದು ಟಿಕೆಟಿಗೆ ಕೋಟಿ ಕೋಟಿ ಇಸ್ಕೋತರಲ್ಲ ಇವರಿಗೆ ಏನು ಹೇಳಬೇಕು ಎಂದು ತಿರುಗೇಟು ನೀಡಿದರು.
ಎಸ್ಎಲ್ಎನ್ ಯೋಗೇಶ್ ಕೆ ಟಿವಿ ನ್ಯೂಸ್ ಹಾಸನ ಜಿಲ್ಲೆ

ಕೆ.ಟಿವಿ ನ್ಯೂಸ್ ಕನ್ನಡ

Add Comment