ಜಗತ್ತಿನಲ್ಲಿರುವಂತಹ ಎಲ್ಲಾ ಧರ್ಮಗಳೂ ಭಾರತದಲ್ಲಿವೆ-ಮಾದಾರ ಚೆನ್ನಯ್ಯ ಬೃಹನ್ಮಠ ಸ್ವಾಮೀಜಿ

ಜಗತ್ತಿನಲ್ಲಿರುವಂತಹ ಎಲ್ಲಾ ಧರ್ಮಗಳು ಭಾರತದಲ್ಲಿ ಇವೆ ಎಂದು ಚಿತ್ರದುರ್ಗದ ಬೃಹನ್ಮಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಹೇಳಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿ ಚೆಲ್ಲಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀಚಿತ್ರಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯಕ್ಕೆ ಕಳಶ ಸ್ಥಾಪನೆ ಮತ್ತು ಧಾರ್ಮಿಕ ಸಮಾರಂಭದಲ್ಲಿ
ಮಾತನಾಡಿದ ಅವರು “ನಮ್ಮ ದೇಶದಲ್ಲಿ ಮಹಾತ್ಮರು, ಸಾಧು-ಸಂತರು ನೆಲೆಸಿರುವ ಸನಾತನ ಧರ್ಮದಲ್ಲಿ ಮತ್ತು ಧರ್ಮಗಳ ನಡುವೆ ಸೌಹಾರ್ದತೆ ಮೂಡಿಸುವ ಕಾರ್ಯ ಭಾರತಿಯರಿಗೆ ಅಂದಿನ ಕಾಲದಿಂದಲೂ ನಮ್ಮ ದೇಶದ ನೆಲದಲ್ಲಿ ಸಾವಿರಾರು ವರ್ಷಗಳಿಂದ ಹಲವು ಧರ್ಮ ಪಂಥಗಳು ಒಗ್ಗೂಡಿವೆ. ಒಳ್ಳೆಯ ಆಶಯದಿಂದ ಹುಟ್ಟಿದ ಧರ್ಮಸಂಸ್ಕೃತಿಗಳನ್ನು
ಕೆಲ ಮತಾಂಧರು ಕುಕೃತ್ಯಕ್ಕಾಗಿ ದೂಶಿಸದೆ ಧರ್ಮಗಳ ನಡುವೆ ಸೌಹಾರ್ದ ಸೇತುವೆ ಕಟ್ಟಿದ್ದರಿಂದಲೆ ಹಲವು ಸಂಸ್ಕೃತಿ ಧರ್ಮಗಳ ಸಾರದಿಂದ ನಮ್ಮ ದೇಶದಲ್ಲಿ ಆತೀ ಹೆಚ್ಚು ಪ್ರಬುದ್ಧವಾಗಿ ಕಾಣಿಸುತ್ತದೆ. ನಮ್ಮ ದೇಶ ಹೃದಯ ಶ್ರೀಮಂತಿಕೆಯಿಂದ ಹೆಸರಾಗಿದೆ, ಧರ್ಮ-ಭೇದ ಮಾಡುವ ಮೂಲಕ ಜನರ ನಡುವೆ ಕಂದಕ ನಿರ್ಮಿಸುವ ಜನರು ಹಿಂದಿನ ಕಾಲದಲ್ಲೂ ಇದ್ದರು. ಇಂತಹ ಸಂದರ್ಭದಲ್ಲಿ ವಿವೇಕವಂತರು ಧರ್ಮದ ತಿರುಳನ್ನು ಮತಾಂಧರಿಗೆ ತಿಳಿಸಿ ಸರ್ವರ ಮನದಲ್ಲೂ ಸದ್ಭಾವನೆ ಮೂಡಿಸುವಲ್ಲಿ ಹೆಸರಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ “ನಮ್ಮ ತಾಲ್ಲೂಕಿನ ಅನೇಕ ಪುಣ್ಯ ಪುರುಷರು ನೆಲೆಸಿದ ನಾಡಾಗಿದೆ. ತಾಲ್ಲೂಕಿನಲ್ಲಿ ಸುಮಾರು ಸಣ್ಣ ಪುಟ್ಟ ಹಳ್ಳಿಗಳಲ್ಲೂ ಸಹ ಗುಡಿ ಗೋಪುರಗಳು ಕಾಯಕಲ್ಪದಲ್ಲಿ ಕಂಡ ಅದು ನಮ್ಮೆಲ್ಲರ ಪುಣ್ಯ. ಅದರಲ್ಲೂ ನಮ್ಮ ತಾಲ್ಲೂಕನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವುದೇ
ನನ್ನ ಕರ್ತವ್ಯ ಮತ್ತು ನನ್ನ ಜವಾಬ್ದಾರಿಯಾಗಿದೆ
ನನಗೇ ದೇವರುಗಳ ಮೇಲೆ ನಂಬಿಕೆ ಜಾಸ್ತಿ, ಯಾರು ಏನೇ ಅಂದರೂ ನನಗೆ ಚಿಂತೆ ಇಲ್ಲ, ನಾವು ದೇವರ ನಂಬಿ ಬದುಕಿದ್ದೇನೆ ಹಾಗೂ ಬದುಕಿದ್ದೇವೆ, ಇದರಲ್ಲಿ
ಎರಡು ಮಾತಿಲ್ಲ ಇನ್ನು ಎರಡು ತಿಂಗಳಲ್ಲಿ ಗಂಗಾ ಯೋಜನೆ ಮೂಲಕ ಪ್ರತಿ ಮನೆಗೆ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಶ್ರೀಮತಿ ವತ್ಸಲ ಶೇಖರಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಯಮುನಾ ಹರೀಶ್,ಉಪಾಧ್ಯಕ್ಷರಾದ ರಮೇಶ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶಿವಮೂರ್ತಿ ಹಾಗೂ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರುಗಳು, ಊರಿನ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು,ರೈತಬಾಂಧವರು, ಸಾರ್ವಜನಿಕ‌ ಬಂಧುಗಳು,ಸಮಾಜದ ಬಾಂಧವರು ಉಪಸ್ಥಿತರಿದ್ದರು.
SLNಯೋಗೇಶ್
KTVKANNADA
ಅರಸೀಕೆರೆ

Add Comment