ಕರೋನಾ – ಬಿಜೆಪಿ ಮಾಡ್ತಿರೋ ಈ ಕೆಲ್ಸ ಯಾರಿಗಾದ್ರೂ ಗೊತ್ತಾ ?

1 Star2 Stars3 Stars4 Stars5 Stars (No Ratings Yet)
Loading...

 

ದೆಹಲಿ : ಬಿಜೆಪಿಗೆ ವೋಟ್ ಹಾಕಿ ಏನು ಪ್ರಯೋಜನ ಅಂತ ಕೇಳ್ತಿದ್ದವರು, ಈ ಸುದ್ದಿಯನ್ನು ಓದಲೇ ಬೇಕು. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ, ಯಾವ ರಾಜಕೀಯ ಪಕ್ಷವೂ ಮಾಡದ ಕೆಲಸವೊಂದನ್ನು ಬಿಜೆಪಿ ಮಾಡ್ತಿದೆ.

ಪಕ್ಷದ ಸಮಾವೇಶ, ಸಮಾರಂಭ, ರ್ಯಾಲಿ. ಮತದಾನದ ವೇಳೆ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಬಾಡೂಟ ಹಾಕ್ಸೋದು, ಊಟ ಹಾಕ್ಸೋದು, ಬಿರಿಯಾನಿ ತಿನ್ನಿಸೋದನ್ನು ನೋಡಿರ್ತೀರಿ. ಆದ್ರೆ, ಚುನಾವಣೆಗಳಿಲ್ಲದ ವೇಳೆ ಯಾರಾದ್ರೂ ಊಟ ಹಾಕ್ಸೋದು ನೋಡಿದ್ದೀರಾ?

ಪ್ರಧಾನಿ ಮೋದಿ 21 ದಿನಗಳ ಕಾಲ ಇಡೀ ದೇಶಕ್ಕೇ ಲಾಕ್‍ಡೌನ್ ಘೋಷಿಸಿದ್ದಾರೆ. ಮೋದಿ ವಾಪಸ್ ಕಚೇರಿಗೆ ತಲುಪೋ ಮುನ್ನವೇ ಅಮಿತ್ ಶಾ -ಈಗಿನ ಅಧ್ಯಕ್ಷ ಜಯಪ್ರಕಾಶ್ ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಭೆ ನಡೆಸಿದ್ದಾರೆ. ನಿರ್ಗತಿಕರ ಕಥೆ ಏನು ಅಂತ ಉಳಿದವರು ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ಪೋಸ್ಟ್ ಬರೆಯುವ ಮುನ್ನವೇ, ನಿರ್ಗತಿಕರಿಗೆ, ಕಾರ್ಮಿಕರಿಗೆ, ಕೂಲಿಯಾಳುಗಳಿಗೆ ಏನು ಮಾಡಬೇಕು ಅನ್ನೋದನ್ನು ಬಿಜೆಪಿ ತೀರ್ಮಾನಿಸಿಯಾಗಿತ್ತು. ತಕ್ಷಣವೇ ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳನ್ನು ವಿಡಿಯೋ ಕಾನ್ಫರೆನ್ಸ್ಗೆ ಕರೆಸಿಕೊಂಡ ವರಿಷ್ಟರು, ಸ್ಪಷ್ಟ ಸೂಚನೆ ಕೊಟ್ಟುಬಿಟ್ಟರು. ಅದೇನೆಂದರೆ 5 ಕೋಟಿ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ 21 ದಿನಗಳ ಕಾಲ ಮಹಾಭೋಜನ ವ್ಯವಸ್ಥೆ.

ಕಳೆದ ಮೂರು ದಿನಗಳಿಂದ ಬಿಜೆಪಿ ಕಾರ್ಯಕರ್ತರು ಮೂರು ಹೊತ್ತು ದೇಶದ 5 ಕೋಟಿ ನಿರ್ಗತಿಕರಿಗೆ, ಬಡವರಿಗೆ, ಶ್ರಮಿಕರಿಗೆ ಊಟ ತಿಂಡಿ ಪೂರೈಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ಬಡಾವಣೆಯಲ್ಲಿ ಕಮ್ಯುನಿಟಿ ಕಿಚನ್ ಸ್ಥಾಪಿಸಲಾಗಿದೆ. ಸಂಸದರ ನೇತೃತ್ವದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಕೊರೋನಾ ಕಂಟ್ರೋಲ್ ರೂಂ ತೆರೆಯಲಾಗಿದೆ. ಪ್ರತಿ ಕಾರ್ಯಕರ್ತನಿಗೂ ಕನಿಷ್ಟ 5 ಜನರಿಗೆ ಆಹಾರ ವಿತರಿಸಲು ಸೂಚಿಸಲಾಗಿದೆ.

ಈ ಮಹಾ ಕಾರ್ಯದಲ್ಲಿ ಸಂಸದರು, ಶಾಸಕರು ಜನಪ್ರತಿನಿಧಿಗಳು ಭಾರೀ ಮೊತ್ತದ ಅನುದಾನದೊಂದಿಗೆ ಕೈ ಜೋಡಿಸಿದ್ದಾರೆ. ಪ್ರತಿ ದಿನವೂ ನಡ್ಡಾ ಅಥವಾ ಸಂತೋಷ್ ಅವರು ಪ್ರತಿ ಸಂಸದರ ಕಂಟ್ರೋಲ್ ರೂಂ ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಸಲಹೆ ಸೂಚನೆಗಳನ್ನು ನೋಡುತ್ತಿದ್ದಾರೆ.

ಮುಂದಿನ 18 ದಿನಗಳ ಕಾಲವೂ ಈ ಅನ್ನದಾಸೋಹ ನಡೆಯಲಿದೆ. ನೀಟಾಗಿ ಪ್ಯಾಕ್ ಮಾಡಿದ ಆಹಾರ ಪೊಟ್ಟಣಗಳು ಬಡವರ ಹೊಟ್ಟೆ ತುಂಬಿಸಲಿವೆ. ಯಾರಿಗೆಲ್ಲಾ ಆಹಾರ ತಯಾರಿಸಿಕೊಳ್ಳುವುದು ಸಾಧ್ಯವಿಲ್ಲವೋ ಅವರಿಗೆಲ್ಲಾ ಬಿಜೆಪಿ ಕಮ್ಯುನಿಟಿ ಕಿಚನ್ ಗಳಿಂದ ಆಹಾರ ಸಪ್ಲೈ ಆಗ್ತಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ, ಕಷ್ಟ ಕಾಲದಲ್ಲಿ ರಾಜಕೀಯ ಪಕ್ಷವೊಂದು ಈ ಪರಿ ಸ್ಪಂದಿಸುತ್ತಿರುವುದು ಇದೇ ಮೊದಲು.

Add Comment