3ನೇ ಟೆಸ್ಟ್ ನ ಸ್ಪಿನ್ ಪಿಚ್ ನಲ್ಲಿ 2 ದಿನಗಳಲ್ಲೇ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರುವ ಅವಕಾಶ ಹೆಚ್ಚಿಸಿಕೊಂಡ ಭಾರತ

ಸ್ಥಳೀಯ ಗುಜರಾತಿನ ಯುವ ಸ್ಪಿನ್ನರ್ ಅಕ್ಸರ್ ಪಟೇಲ್ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದ ಕಾರಣ ಪ್ರವಾಸೀ ಇಂಗ್ಲೆಂಡ್ ಅಹಮದಾಬಾದ್ ನ ಮೊಟೆರಾ ವಿಶ್ವದ ಬೃಹತ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡೇ ದಿನಗಳಲ್ಲಿ 3ನೇ ಟೆಸ್ಟ್ ನಲ್ಲಿ(ಹಗಲು-ರಾತ್ರಿ ಟೆಸ್ಟ್ ಪಂದ್ಯ) ಹೀನಾಯ ಸೋತು ಆತಿಥೇಯ ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಅನುಕೂಲ ಕಲ್ಪಿಸಿದೆ.
ಮೊದಲ ದಿನದ ಪ್ರಥಮ ಇನಿಂಗ್ಸ್ ನಲ್ಲಿ 34 ಓವರ್ ಗಳಲ್ಲಿ 3 ವಿಕೆಟ್ ಗೆ 99 ರನ್ ಗಳಿಸಿದ್ದ ಭಾರತ 2ನೇ ದಿನದ ಆರಂಭದಲ್ಲೇ ಜೋ ರೂಟ್ ಅವರ ಸ್ಪಿನ್ ಕೈಚಳಕಕ್ಕೆ ಶರಣಾಗಿ 53.2 ಓವರ್ ಗಳಲ್ಲಿ ಕೇವಲ 145 ರನ್ ಗಳಿಗೆ ಆಲೌಟ್ ಆಯಿತು. ಓಪನರ್ ರೋಹಿತ್ ಶರ್ಮಾ 66 ರನ್ ಗಳಿಸಿ ಔಟಾದರು.‌ ಸ್ಪಿನ್ನರ್ ಜೋಫ್ರಾ ಅರ್ಚರ್ 2ನೇ ದಿನ ಮತ್ತೆರಡು ವಿಕೆಟ್ ಗಳಿಸಿ ಒಟ್ಟು 4 ವಿಕೆಟ್ ಗಳಿಸಿದರು. ಆದರೆ ನಾಯಕ ಜೋ ರೂಟ್ ಅದ್ಭುತ ಸ್ಪಿನ್ ಬೌಲಿಂಗ್ ಪ್ರದರ್ಶಿಸಿ 5 ವಿಕೆಟ್ ಗಳಿಸಿದ್ದರಿಂದ ಭಾರತಕ್ಕೆ ಮೊದಲ ಇನಿಂಗ್ಸ್ ನಲ್ಲಿ ಕೇವಲ 33 ರನ್ ಮುನ್ನಡೆ ದೊರೆಯಿತು. ಇದರಿಂದ ಇಂಗ್ಲೆಂಡ್ 2ನೇ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ಸವಾಲಿನ ಗುರಿ ನೀಡಿ ಭಾರತವನ್ನು ಬೇಗನೆ ಆಲೌಟ್ ಮಾಡುವ ಗುರಿ ಹೊಂದಿತ್ತು. ಆದರೆ 2ನೇ ಇನಿಂಗ್ಸ್ ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಅಕ್ಸರ್ ಪಟೇಲ್ ಅವರ ಸ್ಪಿನ್ ಬೌಲಿಂಗ್ ಎದುರಿಸಲಾಗದೆ ಒಬ್ಬೊಬ್ಬರಾಗಿ ಔಟಾದರು.
ಜೊತೆಗೆ ಹಿರಿಯ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಸಹ ಇಂಗ್ಲೆಂಡ್ ನ 3 ವಿಕೆಟ್ ಕಬಳಿಸಿದರು.
ನಾಯಕ ಜೋ ರೂಟ್ 19 ರನ್ ಹಾಗೂ ಆಲ್ ರೌಂಡರ್ ಬೆನ್ ಸ್ಪೋಕ್ಸ್ 25 ರನ್ ಗಳಿಸಿದ್ದನ್ನು ಬಿಟ್ಟರೆ ಯಾವೊಬ್ಬ ಇಂಗ್ಲೆಂಡ್ ಬ್ಯಾಟ್ಸ್ ಮನ್ ಸಹ ಕ್ರೀಸ್ ನಲ್ಲಿ ನಿಂತು ಬ್ಯಾಟಿಂಗ್ ಮಾಡಲು ಸೋತರು.
ಕಡೆಯಲ್ಲಿ ಬೌಲಿಂಗ್ ಗೆ ಇಳಿದ ವೇಗಿ ವಾಷಿಂಗ್ಟನ್ ಸುಂದರ್ ಏಕೈಕ ಇಂಗ್ಲೆಂಡ್ ನ 10ನೇ ವಿಕೆಟ್ ಪಡೆದರು. ಇದರಿಂದ ಇಂಗ್ಲೆಂಡ್ 30.4 ಓವರ್ ಗಳಲ್ಲಿ ಕೇವಲ 81 ರನ್ ಗಳಿಸಿ ಆಲೌಟ್ ಆಯಿತು. ಬಳಿಕ ಭಾರತ 49 ರನ್ ಗಳ ಗೆಲುವಿನ ಗುರಿಯನ್ನು ವಿಕೆಟ್ ಕಳೆದುಕೊಳ್ಳದೆ 7.4 ಓವರ್ ಗಳಲ್ಲಿ ತಲುಪಿ 3ನೇ ಟೆಸ್ಟ್ ನಲ್ಲಿ 10 ವಿಕೆಟ್ ಗಳ ಸುಲಭ ಜಯ ದಾಖಲಿಸಿತು.
ಒಟ್ಟು 11 ವಿಕೆಟ್ ಪಡೆದು ಭಾರತದ ಈ ಸುಲಭ ಗೆಲುವಿಗೆ ಕಾರಣರಾದ ಸ್ಥಳೀಯ ಗುಜರಾತಿನ ಯುವ ಸ್ಪಿನ್ನರ್ ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಮೂಲಕ ಆತಿಥೇಯ ಭಾರತ ತಂಡ 4 ಟೆಸ್ಟ್ ಗಳ ಮಹತ್ವದ ಸರಣಿಯಲ್ಲಿ 3ನೇ ಟೆಸ್ಟ್ ನಲ್ಲಿ ಕೇವಲ ಎರಡೇ ದಿನಗಳಲ್ಲಿ ಜಯ ಸಾಧಿಸಿ 2-1 ರಿಂದ ಮುನ್ನಡೆ ಗಳಿಸಿದೆ.
ಇದರ ಪರಿಣಾಮ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ತಲುಪುವ ಅವಕಾಶವನ್ನು ಭಾರತ ತಂಡ ಹೆಚ್ಚಿಸಿಕೊಂಡಿದೆ. ಆದ್ದರಿಂದ 4ನೇ ಅಂತಿಮ ಟೆಸ್ಟ್ ನಲ್ಲಿ ಡ್ರಾ ಸಾಧಿಸಿದರೂ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಲಿದೆ.
KTVKANNADA ಅಹಮದಾಬಾದ್

Add Comment