ಸಿರವಾರ: ಬಡಮಕ್ಕಳಿಗೆ ಉಚಿತ ಬಟ್ಟೆ ವಿತರಿಸ ಜನ್ಮದಿನ ಆಚರಿಸಿಕೊಂಡ ಕೆ.ಮಂಜೂರ್ ಪಾಷಾ

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಮಾಜಿ ಜಿ.ಪಂ.ಸದಸ್ಯರಾದ ಕೆ.ಅಸ್ಲಾಂ ಪಾಷ ಅವರ ಸಹೋದರ ಕೆ.ಮಂಜೂರ್ ಪಾಷ ಅವರು ಬಡ ಮಕ್ಕಳಿಗೆ ಚಾಕಲೇಟ್ ಜೊತೆ ಬಟ್ಟೆ ವಿತರಣೆ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ಸಿರವಾರ ಪಟ್ಟಣದ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ತೀರಾ ನಿರ್ಗತಿಕರಾದ 50 ಬಡಮಕ್ಕಳಿಗೆ ಬಟ್ಟೆ ವಿತರಣೆ ಮಾಡಿ ಕೆ.ಮಂಜೂರ್ ಪಾಷ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ವೇಳೆ ಮೆಥೋಡಿಸ್ಟ್ ಚರ್ಚ್ ಸಭಾ ಪಾಲಕರಾದ ರೆ|| ಸಂಸೋನ್ ಡ್ಯಾನಿಯಲ್ ಅವರು ಮಂಜೂರ್ ಪಾಷ ಅವರಿಗಾಗಿ ವಿಶೇಷ ಪ್ರಾರ್ಥನೆ ಮಾಡಿ ಆಶೀರ್ವದಿಸಿ ನಂತರ ಮಾತನಾಡಿ “ಹುಟ್ಟುಹಬ್ಬಗಳನ್ನು ಬಹುತೇಕ ಜನರು ಆಡಂಬರಕ್ಕಾಗಿ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮಂಜೂರ್ ಪಾಷ ಅವರು ಬಡ ಮಕ್ಕಳಿಗೆ ಬಟ್ಟೆ ವಿತರಿಸಿ ಹುಟ್ಟು ಹಬ್ಬದ ನಿಜವಾದ ಸಂತೋಷವನ್ನು ಕಂಡುಕೊಂಡಿದ್ದಾರೆ” ಎಂದು ಗುಣಗಾನ ಮಾಡಿದರು.
ಸ್ಥಿತಿವಂತರು ಆಡಂಬರದಿಂದ ಹುಟ್ಟುಹಬ್ಬಗಳನ್ನು ಆಚರಣೆ ಮಾಡಿಕೊಳ್ಳದೇ ಮಂಜೂರ್ ಪಾಷ ಅವರಂತೆ ಬಡವರಿಗೆ, ಅನಾಥರಿಗೆ, ನಿರ್ಗತಿಕರಿಗೆ ಸಹಕಾರಿಯಾಗಬೇಕು ಅದರಲ್ಲಿ ಸಂತೋಷ ಹೊಂದಿಕೊಳ್ಳಬೇಕೆಂದ ಅವರು ಮಂಜೂರ್ ಪಾಷ ಅವರ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ದೇವಪುತ್ರ, ಜೆ.ಅಬ್ರಹಾಂ ಹೊನ್ನಟಿಗಿ, ಡಿ.ಜಯಪ್ಪ, ಶಾಂತಕುಮಾರ್ ದೊಡ್ಡಮನೆ, ರಾಜು ಗಿಂಡಿ, ಚನ್ನಪ್ಪ ಬೂದಿನಾಳ, ಹುಸೇನಿ ಜಿಂದಾವಲಿ, ರಫೀ, ಹನುಮೇಶ ಶಾಖಾಪೂರು, ರಾಮು ಸೇರಿದಂತೆ ಚಿಕ್ಕ ಮಕ್ಕಳು ಇದ್ದರು.
ರಾಜು ಕಟ್ಟಮನಿ KTVKANNADA ಸಿರವಾರ

Add Comment