BIG BREAKING- ಇನ್ನೂ ಹೆಚ್ಚು ದಿನ ಲಾಕ್‌ಡೌನ್?- ಏನು ಹೇಳುತ್ತೆ ಕೇಂದ್ರ?

1 Star2 Stars3 Stars4 Stars5 Stars (No Ratings Yet)
Loading...

ದೆಹಲಿ : ಸಾರ್ವಜನಿಕರೇ ಎಚ್ಚರ, ಎಚ್ಚರ.. ಹೀಗೇ ಕಳ್ಳಾಟ ಆಡಿಕೊಂಡು ರೋಡ್ ರೋಡ್ ಅಳೆಯುತ್ತಿದ್ರೆ, ಸಂಕಷ್ಟದ ದಿನಗಳು ಇನ್ನೂ ಹೆಚ್ಚಾಗಲಿವೆ. ಹೌದು, ಈಗ ವಿಧಿಸಲಾಗಿರೋ ೨೧ ದಿನಗಳ ಲಾಕ್‌ಡೌನ್ ಮತ್ತಷ್ಟು ದಿನ ಹೆಚ್ಚಿದರೂ ಅಚ್ಚರಿಯೇನಿಲ್ಲ.

ನಿನ್ನೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ನಡೆಸಿರೋ ಕೇಂದ್ರ ಗೃಹ ಇಲಾಖೆ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಿದೆ. ಲಾಕ್‌ಡೌನ್ ಘೋಷಿಸಿ ವಾರವಾಗುತ್ತಾ ಬಂದರೂ ೧೦೦ % ಪರಿಣಾಮ ಬೀರಿಲ್ಲ, ಹಬ್ಬಗಳ ನೆಪದಲ್ಲಿ ಎಲ್ಲಾ ರಾಜ್ಯಸರಕಾರಗಳೂ ನಿಯಮ ಸಡಿಲಿಸಿ ಅಪಾಯಕ್ಕೆ ಆಹ್ವಾನ ಕೊಟ್ಟಿವೆ. ದೆಹಲಿ ಮತ್ತು ಕೇರಳ ರಾಜ್ಯಗಳು ವಲಸಿಗ ಕಾರ್ಮಿಕರ ಸಮಸ್ಯೆ ಪರಿಹರಿಸಲು ವಿಫಲವಾಗಿದ್ದು ಅಕ್ಷಮ್ಯ ಎಂದು ಕೇಂದ್ರ ಕಿಡಿಕಾರಿದೆ. ಹೀಗೇ ಆದರೆ, ೧೫ ದಿನಗಳಲ್ಲಿ ವೈರಸ್ ಕಂಟ್ರೋಲ್ ಮಾಡುವುದು ಕಷ್ಟ, ಲಾಕ್‌ಡೌನ್ ಅವಧಿ ವಿಸ್ತರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸೋದು ಬೇಡ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ, ಇದೀಗ ಲಾಕ್‌ಡೌನ್ ೨೧ ದಿನಗಳಿಗೆ ಸೀಮಿತವಾಗಲ್ಲ, ಮತ್ತಷ್ಟು ದಿನ ವಿಸ್ತರಣೆಯಾಗಬಹುದು ಅನ್ನೋ ವದಂತಿಗಳು ಹಬ್ಬತೊಡಗಿವೆ.

ಇದಕ್ಕೆ ಸ್ಪಷ್ಟನೆ ನೀಡಿರೋ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೋಬಾ, ಸರಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ. ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಆಡಳಿತದೊಂದಿಗೆ ಸಹಕರಿಸಬೇಕೆಂದು ವಿನಂತಿ ಮಾಡಿದ್ದಾರೆ. ಲಾಕ್ ಡೌನ್ ಅವಧಿ ೨೧ದಿನಕ್ಕೂ ಹೆಚ್ಚು ಕಾಲ ವಿಸ್ತರಣೆಯಾಗುತ್ತೆ ಎನ್ನುವ ವರದಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಗೋಬಾ ಸ್ಪಷ್ಟನೆ ನೀಡಿದ್ದಾರೆ.

ಆದರೆ ಸಾರ್ವಜನಿಕರು ತಮ್ಮ ಹಾಗೂ ದೇಶದ ಹಿತದೃಷ್ಟಿಯಿಂದ ಸಂಪೂರ್ಣ ಲಾಕ್‌ಡೌನ್ ಆಚರಿಸಬೇಕು. ಮನೆಯಿಂದ ಹೊರಬರೋ ಕಲ್ಪನೆಯನ್ನೇ ಮರೆತುಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕರೇ, ಈಗಲೇ ಬದುಕು ಬೀದಿಗೆ ಬಿದ್ದಿದೆ. ಇನ್ನು ೧೫ ದಿನ ಹೇಗಾದ್ರೂ ತಡ್ಕೊಳ್ಳಿ. ಪ್ರಪಂಚವೇನೂ ಮುಳುಗಿ ಹೋಗಲ್ಲ. ದಯವಿಟ್ಟು ಮನೆಯಲ್ಲಿಯೇ ಇರಿ, ಮತ್ತೆ ಲಾಕ್‌ಡೌನ್ ವಿಸ್ತರಿಸಿಕೊಂಡು ಹೆಚ್ಚಿನ ಸಂಕಷ್ಟ ಮೈಮೇಲೆ ಎಳೆದುಕೊಳ್ಳಬೇಡಿ. ಇದು ಕೆಟಿವಿಯ ಕಳಕಳಿಯ ವಿನಂತಿ

Add Comment