300ಕೆಜಿ ಅಕ್ರಮ ಶ್ರೀಗಂಧ ಪತ್ತೆ – ಹಾಸನ ನಗರದಲ್ಲಿ ನಡೆದ ಘಟನೆ

ಹಾಸನ ನಗರ ಪೊಲೀಸರ ತಂಡ ಕಳುವಾಗಿರುವ ಫಾರ್ಚೂನರ್ ಕಾರೋಂದನ್ನ ಪತ್ತೆ ಮಾಡಲು ಬಲೆ ಬೀಸಿದ್ರು ಆದ್ರೆ ಫಾರ್ಚೂನರ್ ಕಾರು ಜಾಡು ಹಿಡಿದು ಹೋದ ಪೊಲೀಸರಿಗೆ ಶಾಕ್ ಕಾದಿತ್ತು ಹಾಸನದ ಎಸ್ ಬಿ ಐ ಬಡಾವಣೆ ಮನೆಯೊಂದರಲ್ಲಿ 300 ಕೆಜಿಯಷ್ಟು ಅಕ್ರಮ ಶ್ರೀಗಂಧ ದಾಸ್ತಾನು ಮಾಡಿದ್ದು, ಹಾಸನ ನಗರಠಾಣೆ ಸಿಪಿಐ ರೇಣುಕಾ ಪ್ರಸಾದ್ ಹಾಗೂ ಪಿಎಸ್ಐ ಅಭಿಜಿತ್ ತಂಡ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಈ ಕೇಸ್ ಸಂಬಂಧ ಪೊಲೀಸ್ ಪೇದೆಯೊಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಸಿಪಿಐ ರೇಣುಕಾ ಪ್ರಸಾದ್,ಹಾಗೂ ಪಿಎಸ್ಐ ಅಭಿಜಿತ್ ತಂಡ ಕಳ್ಳತನ ಆಗಿದ್ದ ಫಾರ್ಚೂನರ್ ಕಾರೊಂದನ್ನ ಪತ್ತೆ ಹಚ್ಚಲು ಹೋಗಿದ್ದಾರೆ. ಈ ವೇಳೆ ಫಾರ್ಚುನರ್ ಕಾರು ಕದ್ದಿದ್ದ ಮಂಜುನಾಥ್ ಎಂಬಾತ ಕಾರು ಕಳ್ಳತನ ಮಾಡೋದಲ್ಲದೆ ತಾನು ಬಾಡಿಗೆ ಇದ್ದ ಮನೆಯಲ್ಲೇ ಶ್ರೀಗಂಧ ಸ್ಮಗಲಿಂಗ್ ಮಾಡುತ್ತಿದ್ದು ಪತ್ತೆಯಾಗಿದೆ. ಅಷ್ಟೆ ಅಲ್ಲ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಅಂದಾಜು 300 ಕೆಜಿಯಷ್ಟು ಶ್ರೀಗಂಧ ದೊರೆತಿದೆ.
ಎಸ್ಎಲ್ಎನ್ ಯೋಗೇಶ್ ಕೆ ಟಿವಿ ನ್ಯೂಸ್ ಹಾಸನ

ಕೆ ಟಿವಿ ಕನ್ನಡ ನ್ಯೂಸ್

Add Comment