ಕೊರೊನಾ ಲಾಕ್‌ಡೌನ್ ಶೂರರಿಗೆ ಕುಂಕುಮ, ಊದುಬತ್ತಿ, ಪೂಜೆ !

1 Star2 Stars3 Stars4 Stars5 Stars (No Ratings Yet)
Loading...

ಕೊರೊನಾ ಲಾಕ್‌ಡೌನ್ ಶೂರರಿಗೆ ಕುಂಕುಮ, ಊದುಬತ್ತಿ, ಪೂಜೆ !

ವಿಜಯಪುರ : ಲಾಕ್‌ಡೌನ್ ವೇಳೆ ಕರ್ನಾಟಕ ಪೊಲೀಸರಿಗೆ ಹೊಸ ಹೊಸ ಐಡಿಯಾಗಳು ಬರುತ್ತಿವೆ. ಜನಮೆಚ್ಚುಗೆಗೂ ಪಾತ್ರರಾಗುತ್ತಿದ್ದಾರೆ. ಮೊನ್ನೆಯಷ್ಟೇ ಲಾಕ್‌ಡೌನ್ ಉಲ್ಲಂಘಿಸಿ ಬೀದಿಗೆ ಇಳಿದವ್ರ ಕೈಗೆ ಕಲಬುರಗಿ ಪೊಲೀಸರು ಪೊರಕೆ ಕೊಟ್ಟಿದ್ದರು. ಇಡೀ ಕಲಬುರಗಿ ನಗರವನ್ನು ಕ್ಲೀನ್ ಮಾಡಿಸಿದ್ದರು. ಇದೀಗ ವಿಜಯಪುರ ಪೊಲೀಸರು ಇನ್ನೂ ಒಂದು ಐಡಿಯಾ ಮಾಡ್ಯಾರೆ.
ಇಡೀ ಭಾರತ ದೇಶವೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿಕೊಂಡು ಮನೆಯಲ್ಲಿ ಸೆಟ್ಲ್ ಆಗಿದೆ. ಆದರೆ ಕೆಲವರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಗುತ್ತಿದ್ದಾರೆ. ಇದೇ ರೀತಿ ಕೊರೊನಾ ಎಮರ್ಜೆನ್ಸಿ ಧಿಕ್ಕರಿಸಿದವರಿಗೆ ವಿಜಯಪುರದ ಗಾಂಧಿ ಚೌಕ್ ಪೊಲೀಸರು ವಿಶಿಷ್ಟ ಪಾಠ ಕಲಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಸುಖಾಸುಮ್ಮನೆ ರಸ್ತೆ ಮೇಲೆ ತಿರುಗಾಡುವವರಿಗೆ ಪೊಲೀಸರು ಪೂಜೆ ಮಾಡುತ್ತಿದ್ದಾರೆ. ಆದರೆ ಇದು ಲಾಠಿ ಪೂಜೆಯಲ್ಲ. ಬದಲಿಗೆ ಹಣೆಗೆ ವಿಭೂತಿ ಹಚ್ಚಿ, ಊದುಬತ್ತಿ ಬೆಳಗಿ ಪೂಜೆ ಮಾಡುತ್ತಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣಾ ಸಿಪಿಐ ರವೀಂದ್ರ ನಾಯ್ಕೊಡಿ ಹಾಗೂ ಸಂಚಾರಿ ಪಿಎಸ್.ಐ ಆರೀಫ್ ಮುಶ್ರಪುರಿ ನೇತೃತ್ವದಲ್ಲಿ ಪೂಜೆ ಕಾರ್ಯ ನಡೆಯುತ್ತಿದೆ.
ನಗರದ ಗೋದಾವರಿ, ಗಾಂಧಿಚೌಕ್ ಬಳಿ ಸೇರಿದಂತೆ ಹಲವೆಡೆ ಈ ಕಾರ್ಯ ನಡೆಯುತ್ತಿದೆ. ಅಲ್ಲದೆ ಲಾಠಿ ಬೀಸಿದರು ಜನರು ಬಗ್ಗದ ಕಾರಣ ಈ ವಿನೂತನ ಶಿಕ್ಷೆಗೆ ಪೊಲೀಸ್ರು ಮುಂದಾಗಿದ್ದಾರೆ.

ಪೂಜೆ ನಂತರ ಮುಂದಿನ ಬಾರಿ ಲಾಕ್‌ಡೌನ್ ಉಲ್ಲಂಘಿಸಿದAತೆ ಎಚ್ಚರಿಕೆ ನೀಡುತ್ತಿದ್ದಾರೆ. ವಿಜಯಪುರ ಪೊಲೀಸರ ವಿನೂತ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾದರೂ ಲಾಕ್‌ಡೌನ್ ಉಲ್ಲಂಘಿಸೋ ಮಹಾಶೂರರಿಗೆ ಏನ್‌ಮಾಡ್ಬೇಕು ಹೇಳಿ?

Add Comment