ವಿಜಯ್ ಹಜಾರೆ ಕ್ರಿಕೆಟ್ ಟ್ರೋಫಿ: ರೈಲ್ವೇಸ್ ವಿರುದ್ಧ 10 ವಿಕೆಟ್ ಗಳಿಂದ ಗೆದ್ದು ನಾಕೌಟ್ ಪ್ರವೇಶಿಸಿದ ಕರ್ನಾಟಕ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ವಿಜಯ್ ಹಜಾರೆ ಕ್ರಿಕಟ್ ಟ್ರೋಫಿಯ ‘ಸಿ’ ಗುಂಪಿನ ಮಹತ್ವದ ಕಡೆಯ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ರೈಲ್ವೇಸ್ ತಂಡವನ್ನು 10 ವಿಕೆಟ್ ಗಳಿಂದ ಸುಲಭ ಜಯ ಗಳಿಸಿ ನೌಕೌಟ್ ಹಂತ ತಲುಪಿದೆ.
ಟಾಸ್ ಗೆದ್ದ ಕರ್ನಾಟಕದ ನಾಯಕ ಆರ್.ಸಮರ್ಥ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
27 ರನ್ ಗೆ 2 ವಿಕೆಟ್ ಕಳೆದುಕೊಂಡ ರೈಲ್ವೇಸ್ ಗೆ ಪ್ರಥಮ್ ಸಿಂಗ್ ಭರ್ಜರಿ 129 ರನ್ ನೆರವಾಗಿ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 284 ರನ್ ಪೇರಿಸಿತು. ರೈಲ್ವೇಸ್ ಪರ ಎ.ಘೋಷ್ 36, ಅಮಿತ್ ಮಿಶ್ರಾ 25 ರನ್ ಹಾಗೂ ಪ್ರಥಮ್ ಸಿಂಗ್ 20 ರನ್ ಗಳಿಸಿ ಪ್ರಥಮ್ ಸಿಂಗ್ ಗೆ ಸಾಥ್ ನೀಡಿದರು.
ಕರ್ನಾಟಕ ಪರ ಬೌಲಿಂಗ್ ನಲ್ಲಿ ಸ್ಪಿನ್ನರ್ ಗಳಾದ ಶ್ರೇಯಸ್ ಗೋಪಾಲ್ 3 ವಿಕೆಟ್ ಹಾಗೂ ಜೆ.ಸುಜಿತ್ 2 ವಿಕೆಟ್ ಗಳಿಸಿದರು. ಉಳಿದಂತೆ ಅಭಿಮನ್ಯು ಮಿಥುನ್-ಪ್ರಸಿದ್ಧ ಕೃಷ್ಣ-ವೈಶಾಕ್ ತಲಾ 1 ವಿಕೆಟ್ ಕಿತ್ತರು.
ಬ್ಯಾಟಿಂಗ್ ಪಿಚ್ ನಲ್ಲಿ ಕರ್ನಾಟಕದ ಓಪನರ್ ಗಳಾದ ನಾಯಕ ಆರ್.ಸಮರ್ಥ್ ಅಜೇಯ ಬಿರುಸಿನ 130 ರನ್(118 ಎಸೆತ,17 ಬೌಂಡರಿ) ಹಾಗೂ ದೇವದತ್ ಪಡಿಕ್ಕಲ್ ಅಜೇಯ ಮಿಂಚಿನ 145 ರನ್(125 ಎಸೆತ, 9 ಬೌಂಡರಿ, 9 ಸಿಕ್ಸರ್) ಅವರ ದಾಖಲೆಯ ಬ್ಯಾಟಿಂಗ್ ನಿಂದ ರೈಲ್ವೇಸ್ ಈ ಪಂದ್ಯದಲ್ಲೂ ಸೋಲಿಗೆ ಶರಣಾಯಿತು. ಅಂತಿಮವಾಗಿ ಕರ್ನಾಟಕ ಕೇವಲ 40.3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 285 ರನ್ ಚಚ್ಚಿ 10 ವಿಕೆಟ್ ಗಳ ಸುಲಭ ಜಯ ಗಳಿಸಿ ನಾಕೌಟ್ ಗೆ ನೇರ ಪ್ರವೇಶ ಪಡೆಯಿತು.
ಈ ಮೂಲಕ ಮೊದಲ ಪಂದ್ಯದಲ್ಲಿ ಉತ್ತರಪ್ರದೇಶದ ವಿರುದ್ಧ ಸೋತ ಬಳಿಕ ಸತತ 3 ಪಂದ್ಯ ಜಯಿಸಿದ್ದರೂ ಕರ್ನಾಟಕ ಕಡೆಯ ರೈಲ್ವೇಸ್ ವಿರುದ್ಧ ಜಯ ಗಳಿಸಲೇಬೇಕಾದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ ಈ ಬಾರಿಯೂ ವಿಜಯ್ ಹಜಾರೆ ಟ್ರೋಫಿಯನ್ನು ಗೆಲ್ಲುವ ಗುರಿಯೊಂದಿಗೆ ನಾಕೌಟ್ ಪ್ರವೇಶಿಸಿತು.
ಅಜೇಯ ಶತಕ ಗಳಿಸಿದ ಕರ್ನಾಟಕದ ನಾಯಕ
ಆರ್.ಸಮರ್ಥ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
KTVKANNADA ಬೆಂಗಳೂರು

Add Comment