ಬಡವರ ಮದುವೆ ಕಾರ್ಯಕ್ಕೂ ಶ್ರೀಮಂತರ ಮದುವೆ ಕಾರ್ಯಕ್ಕೂ ಅಜಗಜಾಂತರ ವ್ಯತ್ಯಾಸ-ಶಾಂತಮಲ್ಲ ಶ್ರೀ

ರಾಯಚೂರು ಜಿಲ್ಲೆಯ ಮಾನ್ವಿ ಆಶ್ರಮಗಳಿಗಿಂತಲೂ ಧನ್ಯೊ ಗೃಹಸ್ತಾಶ್ರಮ ಎನ್ನುವ ಶಾಸ್ತ್ರಕ್ಕುನುಗುಣವಾಗಿ ಗೃಹಸ್ತಾಶ್ರಮ ಬಹಳ ಶ್ರೇಷ್ಠವಾಗಿರುವಂತಹುದು. ವಿವಾಹ ಕಾರ್ಯಕ್ರಮದಲ್ಲಿಯೂ ಬಹಳ ಬದಲಾವಣೆಯನ್ನು ಕಾಣುತ್ತೇವೆ, ಬಡವರ ಮದುವೆಗಳಲ್ಲಿ ವರದಕ್ಷಿಣೆಯ ವ್ಯಾಮೋಹ ಇರುವುದಿಲ್ಲ, ಶ್ರೀಮಂತರ ಮದುವೆಗಳಲ್ಲಿ ದುಂದುವೆಚ್ಚ, ವರದಕ್ಷಿಣೆಯ ವ್ಯಾಮೋಹ, ಎಷ್ಟು ಬೇಕು ಅಷ್ಟನ್ನೆ ಖರ್ಚುಮಾಡದೆ ಯಥೇಚ್ಭವಾಗಿ ಹಣವನ್ನು ಖರ್ಚು ಮಾಡುವುದನ್ನು ನಾವು ಕಾಣುತ್ತೇವೆ, ಮದುವೆ ಕಾರ್ಯಗಳಲ್ಲಿ ಯಾರು ಹೊಟ್ಟೆ ತುಂಬಾ ಊಟ ಮಾಡುವರೋ ಅವರಿಗೆ ನೀಡುವುದಿಲ್ಲ, ಯಾರು ಊಟ ಮಾಡುವುದಿಲ್ಲ ಅವರಿಗೆ ನೀಡುವುದು ತಟ್ಟೆಯಲ್ಲಿ ಪ್ರಸಾದ, ಹಾಗೆ ಬಿಡುವುದು ಮದುವೆ ಕಾರ್ಯಕ್ರಮದಲ್ಲಿ ಅರ್ಧದಷ್ಟು ಉಣ್ಣುವ ಪದಾರ್ಥವನ್ನು ಚೆಲ್ಲುವುದನ್ನು ಕಾಣುತ್ತೇವೆ ಹಾಗೂ ಮಠ ಮಂದಿರದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮವು ಯಶಸ್ವಿಯಾಗಿರುವುದು ಮೇಲಿನ ಯಾವ ಅಡೆತಡೆಗಳೂ ಇರುವುದಿಲ್ಲ, ವಿವಾಹ ಕಾರ್ಯಕ್ಕೆ ವಧು-ವರನಿಗೆ ಬೇಕಾಗುವ ಶಾಸ್ತ್ರಸಮ್ಮತ ಸಲಕರಣೆಗಳು ಮಾತ್ರ ಲಭ್ಯ. ಇದರಿಂದ ವಧು-ವರನು ಸಂಪನ್ನಗೊಳ್ಳುವರು ಎಂದು ರಾಯಚೂರು ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ನೂತನ 9 ನವ ದಂಪತಿಗಳಿಗೆ ಸಾರ್ವಜನಿಕರನ್ನುದ್ದೇಶಿಸಿ ತಿಳಿಸಿದರು.
ಅವರು ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ಜೀವೈಕ್ಯ ವಿಜಯರುದ್ರ ಮಹಾಸ್ವಾಮಿಗಳ ಮಠದ 6ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ತ ಅಕ್ಕಮಹಾದೇವಿಯ ಪುರಾಣ ಪ್ರವಚನ ಮಂಗಲ, ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಉಚ್ಚಾಯಿ ಮಹೋತ್ಸವದ ಸಮಾರೋಪ ಸಮಾರಂಭದ ಧರ್ಮ ಸಭೆಯ ಸಾನಿಧ್ಯ ವಹಿಸಿ ಶ್ರೀಮಂತರು ತಮ್ಮ ಮಕ್ಕಳ ಮದುವೆಯ ಜತೆಗೆ ಬಡವರ ನೂರಾರು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಡಿದಾಗ ಸಾಮೂಹಿಕ ವಿವಾಹ ಕಾರ್ಯಕ್ಕೆ ಹೆಚ್ಚಿನ ಮೆರಗು ಬರುವುದು ಎಂದು ಶ್ರೀಗಳು ತಿಳಿಸಿದರು.
ನಂತರ ಭಕ್ತರು ಶ್ರೀಜೀವೈಕ್ಯ ವಿಜಯರುದ್ರ ಮಹಾ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಸಂಜೆ ಹುಚ್ಚಯ್ಯ ಮಹೋತ್ಸವದಲ್ಲಿ ನೂರಾರು ಜನರ ಮಧ್ಯೆ ಡೊಳ್ಳು ವಾದ್ಯ, ಡ್ರಮ್ಸ್ ವಾದ್ಯ,ಕಳಸ ಕನ್ನಡಿ ಗಳೊಂದಿಗೆ ಹರಹರ ಮಹಾದೇವ ಎಂಬ ಜಯಘೋಷಗಳ ನಡುವೆ ಅದ್ದೂರಿ ಉಚ್ಛಾಯ ಮಹೋತ್ಸವ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀಗಳು,ಶಂಕ್ರಯ್ಯ ಸ್ವಾಮಿ ಸುವರ್ಣಗಿರಿ ಮಠ,ಪ್ರಭು ಸ್ವಾಮಿ ಮುಪ್ಪಿನ ದೇವಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮಾಜಿ ಶಾಸಕ ಗಂಗಾಧರ,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಮ ಚಂದ್ರ ನಾಯಕ,ತಿಮ್ಮರೆಡ್ಡಿ ಭೋಗಾವತಿ,ಜಿಲ್ಲಾ ಪಂಚಾಯತ್ ಸದಸ್ಯರಾದ ಶರಣಪ್ಪ ಬಲ್ಲಟಗಿ,
ಶರಣಪ್ಪಗೌಡ ನಕ್ಕುಂದಿ,ರಾಘವೇಂದ್ರ ನಾಯ್ಕ,
ನಾಗರಾಜ್ ಭಗವತಿ ಸೇರಿದಂತೆ ಶ್ರೀಮಠದ ವೇದಮೂರ್ತಿ ಶರಣಯ್ಯ ಸ್ವಾಮಿ,ಸುಗೂರಯ್ಯ ಸ್ವಾಮಿ ಆರ್.ಎಸ್.ಮಠ,ರಾಜಶೇಖರ್ ಪಾಟೀಲ್,ನೀಲಪ್ಪ ಗೌಡ,ಜಾನಕಲ್ ಗ್ರಾಮದ ವಿವಿಧ ಮುಖಂಡರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ವಿವಿಧ ಕ್ಷೇತ್ರದ ಅತಿಥಿಗಳು ಭಾಗವಹಿಸಿದ್ದರು.
ಚನ್ನಬಸವ ಹಿರೇಮಠ
KTVKANNADA
ಮಾನ್ವಿ

Add Comment