ಮಾಗಡಿ ವಿಧಾನಸಭಾ ಕ್ಷೇತ್ರದ ಕಂಚುಗಾರನಹಳ್ಳಿ ಗ್ರಾ.ಪಂ ಸದಸ್ಯರಾಗಿ ಶಿವರಾಮಗೌಡ ಆಯ್ಕೆ

ಮಾಗಡಿ ವಿಧಾನಸಭಾ ಕ್ಷೇತ್ರದ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಶಿವರಾಮ ಗೌಡರು ತಮಗೆ ಮತ ನೀಡಿ ಆಶೀರ್ವದಿಸಿದ ಎಲ್ಲಾ ಮತಬಾಂಧವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ‌.
ಈ ಬಗ್ಗೆ ಕೆಟಿವಿಕನ್ನಡ ನ್ಯೂಸ್ ಚಾನೆಲ್ ನೊಂದಿಗೆ ಮಾತನಾಡಿದ ಅವರು “ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕಳೆದ ಬಾರಿ ನನ್ನ ಪತ್ನಿ ಶೋಭಾ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಈ ಬಾರಿ ನನ್ನನ್ನು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾವಣೆಯಲ್ಲಿ ಮತ ನೀಡಿ ಗ್ರಾಮಸ್ಥರು ಆಯ್ಕೆ ಮಾಡಿದ್ದಾರೆ. ಮುಂದೆ ನಾನು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರು, ಚರಂಡಿ, ರಸ್ತೆ ಸಮಸ್ಯೆಗಳನ್ನು ನಿವಾರಿಸಲು ಮತ್ತು ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ.
ಅದೇ ರೀತಿ ಕಡುಬಡವರಿಗೆ ನಿವೇಶನ ನೀಡುವ ಬಗ್ಗೆ ವಿಶೇಷವಾಗಿ ಗಮನಹರಿಸುತ್ತೇನೆ.
ಮತ್ತೆ ಈಗ ಕೆ.ಜಿ.ಗೊಲ್ಲರಪಾಳ್ಯ ಗ್ರಾಮದಲ್ಲಿ ಕಸ ವಿಲೇವಾರಿ ಸಮಸ್ಯೆ ಹೋಗಲಾಡಿಸಲು ಒಳಚರಂಡಿ ವ್ಯವಸ್ಥೆ,ಸಿಮೆಂಟ್ ರಸ್ತೆ ನಿರ್ಮಿಸಿ ಆ ಭಾಗದ ಗ್ರಾಮಸ್ಥರ ಆರೋಗ್ಯದ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು‌.
ಇದೇ ವೇಳೆ ಈ ಬಾರಿಯ ಶಿವರಾತ್ರಿ ಹಬ್ಬಕ್ಕಾಗಿ
ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಕರಿಕಲ್ಲುದೊಡ್ಡಿ,ಲಿಂಗಪ್ಪನದೊಡ್ಡಿ,ಕೆ.ಜಿ.ಗೊಲ್ಲರಪಾಳ್ಯ
ಹಾಗೂ ಆಪ್ಕೋ ಫ್ಯಾಕ್ಟರಿ ಜನರಿಗೆಲ್ಲಾ ಶುಭಾಶಯ ಹೇಳಿ ಶಿವರಾಮಗೌಡರು ಹಾರೈಸಿದರು.
ಬಿ.ಸೌಮ್ಯ KTVKANNADA ಕಂಚುಗಾರಹಳ್ಳಿ

Add Comment