BIG BREAKING- ಏಪ್ರಿಲ್ 14ರ ಬಳಿಕವೂ ಲಾಕ್‍ಡೌನ್ ?- ಸಿಎಂ ಹೇಳಿದ್ದೇನು ?

1 Star2 Stars3 Stars4 Stars5 Stars (No Ratings Yet)
Loading...

 

ಬೆಂಗಳೂರು : ರಾಜ್ಯದ ಜನರೇ ಎಚ್ಚರ ಎಚ್ಚರ. ಇದೀಗ ಖುದ್ದು ಸಿಎಂ ಯಡಿಯೂರಪ್ಪನವರೇ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ರೀತಿ ಮನೆ ಬಿಟ್ಟು ಬೀದಿ ಸುತ್ತಿ ಅಪಾಯಕ್ಕೆ ಎಡೆ ಮಾಡಿಕೊಟ್ಟರೆ, ಏಪ್ರಿಲ್ 14ರ ಬಳಿಕವೂ ಲಾಕ್‍ಡೌನ್ ಮುಂದುವರೆಸುವ ಮುನ್ಸೂಚನೆ ನೀಡಿದ್ದಾರೆ.

ಕೆಲವೇ ನಿಮಿಷಗಳ ಹಿಂದೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಯಡಿಯೂರಪ್ಪ, ಲಾಕ್‍ಡೌನ್ ಅನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಕರೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಲಾಕ್‍ಡೌನ್ ಹೇರಿದ್ದಕ್ಕೆ ಕ್ಷಮೆ ಕೋರಿದ್ದಾರೆ ಅಂದ್ಮೇಲೆ, ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಕೊರೊನಾ ವೈರಸ್ ನಮ್ಮ ತಾಳ್ಮೆ ಪರೀಕ್ಷಿಸಲೆಂದೇ ಬಂದ ಮಹಾಮಾರಿ ಎಂದು ತಿಳಿದುಕೊಳ್ಳಿ. ಇದು ಕುಟುಂಬಸ್ಥರ ಜೊತೆ ಕಾಲಕಳೆಯುವ ಸಮಯ ಎಂದು ಭಾವಿಸಿಕೊಳ್ಳಿ. ಆದರೆ ದಯವಿಟ್ಟು ಹೊರಗೆ ಬರಬೇಡಿ.

ದೇಶದ ಆರ್ಥಿಕ ಪರಿಸ್ಥಿತಿಗೆ ಭಾರೀ ಹೊಡೆತ ಬೀಳಲಿದೆ ಎಂದು ಗೊತ್ತಿದ್ದರೂ ಲಾಕ್‍ಡೌನ್ ಮಾಡಲಾಗಿದೆ ಎಂದರೆ ಅದಕ್ಕೆ ಜನರ ಪ್ರಾಣ ರಕ್ಷಣೆಯೇ ಕಾರಣ. ಭಾರತದಲ್ಲಿ ತೆಗೆದುಕೊಂಡಿರುವ ಕ್ರಮಗಳು ಪರಿಣಾಮ ಬೀರತೊಡಗಿವೆ. ಈ ಹಂತದಲ್ಲಿ ಸಾರ್ವಜನಿಕರು ಸಹನೆ ಕಾಪಾಡಿಕೊಳ್ಳುವುದು ಮುಖ್ಯ. ಜಾಗೃತ ನಾಗರಿಕರು, ಸರ್ಕಾರದ ನಿರ್ಧಾರವನ್ನು ಬೆಂಬಲಿಸಬೇಕಾಗಿದೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲವು ನಗರಗಳಲ್ಲಿ ಜನತೆ ಉಲ್ಲಂಘಿಸುತ್ತಿದ್ದಾರೆ. ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಸ್ತಿದ್ದಾರೆ. 16 ದಿನಗಳ ಕಾಲ ಮನೆಯಲ್ಲಿಯೇ ಇರಿ. ನೀವು ಎಷ್ಟು ಕಟ್ಟುನಿಟ್ಟಿನಿಂದ ಲಾಕ್‍ಡೌನ್ ಪಾಲಿಸುತ್ತೀರೋ ಅಷ್ಟು ಒಳ್ಳೆಯದು. ಲಾಕ್‍ಡೌನ್ ಪರಿಸ್ಥಿತಿ ನಿಮ್ಮ ಶಿಸ್ತು ಪಾಲನೆಯನ್ನು ಅವಲಂಬಿಸಿದೆ ಎಂದು ಸೂಚ್ಯವಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ ಲಾಕ್‍ಡೌನ್ ಕೊನೆಗೊಳ್ಳಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಆದೇಶ ಪಾಲನೆಯಾಗದೆ, ಪರಿಸ್ಥಿತಿ ಕೈ ಮೀರಿದಲ್ಲಿ ಮತ್ತಷ್ಟು ದಿನ ಲಾಕ್‍ಡೌನ್ ಹೇರುವ ಮುನ್ಸೂಚನೆ ಕೊಟ್ಟಿದ್ದಾರೆ.

ಸಾರ್ವಜನಿಕರೇ ಈಗಲಾದರೂ ಎಚ್ಚೆತ್ತುಕೊಂಡು, ಪ್ರಾಣ ಉಳಿಸಿ, ದೇಶ ಉಳಿಸಿ.

Add Comment