ಶುಭ ಪೂಂಜಾ ಬಿಗ್ ಬಾಸ್ ಗೆ ಹೋಗಲು ಕಾರಣವಾದ್ರೂ ಏನು?

8ನೇ ಆವೃತ್ತಿಯ ಬಿಗ್ ಬಾಸ್ ಶೋ ನಿನ್ನೆಯಿಂದ ಪ್ರಾರಂಭವಾಗಿದ್ದು, ಎಲ್ಲರ ಗಮನ ಸೆಳೆದಿದೆ. ಇನ್ನು ಈ ಸೀಸನ್ ನಲ್ಲಿ ನಟಿ ಸುಭ ಪೂಂಜಾ ಸ್ಪರ್ಧಿಯಾಗಿದ್ದು, ಬಿಗ್ ಬಾಸ್ ಮನೆ ಸೇರಿದ್ದಾರೆ. ಆದರೆ ನಟಿ ಶುಭ ಪೂಂಜಾ ಬಿಗ್ ಬಾಸ್ ಗೆ ಆಯ್ಕೆಯಾದ ಬಗ್ಗೆ ತಿಳಿಸಿದ್ದಾರೆ.

ಈಗಾಗಲೇ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ನ 7 ಆವೃತ್ತಿಗಳು ಮುಗಿದಿದ್ದು, ಈ 7 ಆವೃತ್ತಿಗಳಲ್ಲೂ ಶುಭ ಪೂಂಜಾ ಆಯ್ಕೆಯಾಗಿದ್ದರಂತೆ. ಆದರೆ ಈ 7 ಬಾರಿಯೂ ಬಿಗ್ ಬಾಸ್ ಗೆ ಕಾಲಿಡಲು ಒಪ್ಪದಿದ್ದ ಶುಭ, 8ನೇ ಆವೃತ್ತಿಗೆ ಬರಲು ಕಾರಣ ತಿಳಿಸಿದ್ದಾರೆ. ನೀನು ಸದಾ ಒಂದೇ ರೀತಿಯ ಪಾತ್ರಗಳನ್ನ ಮಾಡೋದೇಕೆ?. ಹೊಸತನವನ್ನ ಬರಮಾಡಿಕೊಳ್ಳಬೇಕು. ಕಂಫರ್ಟ್ ಝೋನ್ ನಿಂದ ಹೊರ ಬರಬೇಕು. ಇವಾಗ ಬಿಗ್ ಬಾಸ್ ಹೋಗಿಲ್ಲ ಅಂದ್ರೆ ಹೇಗೆ? ಮದುವೆ ಆದ್ಮೇಲೆ ಸಾಧ್ಯ ಆಗಲ್ಲ. ಹಾಗಾಗಿ ಬಿಗ್ ಬಾಸ್ ಗೆ ಹೋಗುವಂತೆ ಭಾವಿ ಪತಿ ಸುಮಂತ್ ಬಿಲ್ಲವ ಹೇಳಿದ್ದರಿಂದ ಹೋಗ್ತಿದ್ದೀನಿ ಎಂದು ಶುಭಾ ತಿಳಿಸಿದರು.

Add Comment