ಬಂಗಾರಪೇಟೆ: ಕಾಡಾನೆಗಳನ್ನು ಓಡಿಸಲು ಸೈರನ್ ದಾನ‌ ಮಾಡಿದ ಜೆಡಿಎಸ್ ನಾಯಕ ಮಲ್ಲೇಶ್ ಬಾಬು

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಮತ್ತು ದೋಣಿಮಡಗು ಪಂಚಾಯಿತಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮಿಳುನಾಡಿನಿಂದ ಬಂದ ಕಾಡಾನೆಗಳ ಹಿಂಡು ರೈತರು ಬೆಳೆದ ಬೆಳೆಗಳನ್ನು,ತರಕಾರಿಗಳನ್ನು ತಿಂದು,ತುಳಿದು ಸತತವಾಗಿ ಹಾಳು ಮಾಡುತ್ತಿವೆ‌. ಇಷ್ಟಾದರೂ ಈ ಬಗ್ಗೆ ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಮತ್ತು ಗ್ರಾಮಸ್ಥರ ನೆರವಿಗೆ ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ ಸ್ಥಳೀಯ ಜೆಡಿಎಸ್ ನಾಯಕರಾದ ಮಲ್ಲೇಶ್ ಬಾಬು ಅವರು ಕಾಡಾನೆಗಳನ್ನು ಓಡಿಸಲು ಸೈರನ್ ಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ತಂದು ಅವನ್ನು ರೈತರಿಗೆ,ಗ್ರಾಮಸ್ಥರಿಗೆ ಉದಾರವಾಗಿ ಹಂಚಿ ಕಾಡಾನೆಗಳಿಂದ ಎಚ್ಚರಿಕೆಯಿಂದ ಇರಿ ಎಂದು ತಿಳಿಹೇಳುವ ಒಳ್ಳೆಯ ಕೆಲಸ ಮಾಡಿದ್ದಾರೆ,
ಮಾಡುತ್ತಿದ್ದಾರೆ. ಇದರಿಂದ ಈಗ ಸ್ಥಳೀಯ ಬಂಗಾರಪೇಟೆ ಕಾಂಗ್ರೆಸ್ ಶಾಸಕರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈಗ ನಾಚಿಕೆಪಡುವಂತಾಗಿದೆ!

ಜಿ.ಆರ್.ಆಕಾಶ್
KTVKANNADA
ಬಂಗಾರಪೇಟೆ

Add Comment