ಕೊರೊನಾ – ಶಾಸಕರಿಗೆ `ಅರ್ಹ’ ದಾರಿ ತೋರಿಸಿದ ಮುನಿರತ್ನ

1 Star2 Stars3 Stars4 Stars5 Stars (No Ratings Yet)
Loading...

ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿನಗರದ ಮಾಜಿ ಶಾಸಕ ಮುನಿರತ್ನ ಒಂದೊಳ್ಳೆ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿರೋ ಮಾಜಿ ಶಾಸಕ ಮುನಿರತ್ನ ಅವರು ತಮ್ಮ ಕ್ಷೇತ್ರದ ಬಡ ಜನರ ನೆರವಿಗೆ ಧಾವಿಸಿದ್ದಾರೆ. ಸುಮಾರು ೫೦ ರಿಂದ ೬೦ ಸಾವಿರ ಜನರಿಗೆ ಪ್ರತಿನಿತ್ಯವೂ ಊಟದ ವ್ಯವಸ್ಥೆ ಮಾಡಿದ್ದಾರೆ. ಯಶವಂತಪುರದಿAದ ಉತ್ತರಹಳ್ಳಿವರೆಗೆ ಹಬ್ಬಿಕೊಂಡಿರೋ ವಿಶಾಲವಾದ ಕ್ಷೇತ್ರದಲ್ಲಿ ಜನಸಂಪರ್ಕಿಸುವುದೇ ಕಷ್ಟ, ಅಂತಹದ್ರಲ್ಲಿ ಮುನಿರತ್ನ ಅವರು ನಿತ್ಯವೂ ೫೦ ಸಾವಿರಕ್ಕೂ ಹೆಚ್ಚು ಬಡಜನರಿಗೆ, ಕಾರ್ಮಿಕರಿಗೆ ಊಟ ಆಹಾರ ತಲುಪಿಸುವ ಭಾರೀ ಸವಾಲಿನ ಕೆಲಸ ಮಾಡ್ತಿದ್ದಾರೆ.

ಆರ್ ಆರ್ ನಗರ ಕ್ಷೇತ್ರದ ಯಶವಂತಪುರದಲ್ಲಿರೋ ಕಲ್ಯಾಣ ಮಂಟಪವೊ0ದರಲ್ಲಿ ಬಾಣಸಿಗರು ಅಡುಗೆ ಮಾಡ್ತಿದ್ದಾರೆ. ಸುಮಾರು ೬೦ ಬಾಣಸಿಗರನ್ನು ಅದಕ್ಕಾಗಿಯೇ ನೇಮಿಸಲಾಗಿದೆ. ಭಾರೀ ಪ್ರಮಾಣದಲ್ಲಿ ಆಹಾರ ತಯಾರಿಸುತ್ತಿದ್ದು, ಪ್ರತಿ ವಾರ್ಡ್ಗಳಿಗೂ ವಾಹನಗಳ ಮೂಲಕ ತಲುಪಿಸಿ ಹಂಚಲಾಗುತ್ತಿದೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸಿದ್ಧಪಡಿಸಿ ಉಣಬಡಿಸಲಾಗುತ್ತಿದೆ. ಚಿತ್ರಾನ್ನ, ಪುಲಿಯೋಗರೆ, ಅನ್ನ ಸಾಂಬಾರ್ ಸಹಿತ ಬೇರೆ ಬೇರೆ ರೀತಿಯ ಆಹಾರಗಳನ್ನು ಸಿದ್ಧಪಡಿಸಲಾಗ್ತಿದೆ. ಈಗಾಗಲೇ ೫ ಸಾವಿರ ಅಕ್ಕಿ ಮೂಟೆಗಳನ್ನು ಸಂಗ್ರಹಿಸಿಡಲಾಗಿದೆ.

ಈ ಮೂಲಕ, ತಾವು ಅರ್ಹ ಜನಪ್ರತಿನಿಧಿ ಎನ್ನುವುದನ್ನು ಮುನಿರತ್ನ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೊರೋನಾದಿಂದ ಲಾಕ್‌ಡೌನ್ ಆಗಿರುವ ಏಪ್ರಿಲ್ ೧೪ರವರೆಗೂ ಮುನಿರತ್ನ ಅವರು ಊಟೋಪಚಾರ ಸರಬರಾಜು ಮಾಡಲಿದ್ದಾರೆ. ಪ್ರತಿ ಮನೆಯಿಂದ ಒಬ್ಬರು ಪಾತ್ರೆ ತಂದು ಆಹಾರ ಸ್ವೀಕರಿಸಿದರೆ, ಸಾಮಾಜಿಕ ಅಂತರವನ್ನು ಕಾಪಾಡಲೂ ಸಹಕಾರಿಯಾಗುತ್ತದೆ ಎಂದು ಮುನಿರತ್ನ ಅವರ ಮನವಿ ಮಾಡಿದ್ದಾರೆ.

Add Comment