BIG BREAKING- ಎಲ್ಲರೂ ಇನ್ ಡೇಂಜರ್ – ನಿಜಾಮುದ್ದೀನ್ ಟು ಕರ್ನಾಟಕ 54 ಮಂದಿ, ನಿಮ್ಮ ಮನೆ ಹತ್ತಿರ ಇದ್ದಾರಾ?

1 Star2 Stars3 Stars4 Stars5 Stars (No Ratings Yet)
Loading...

ಎಲ್ಲರೂ ಇನ್ ಡೇಂಜರ್ – ನಿಜಾಮುದ್ದೀನ್ ಟು ಕರ್ನಾಟಕ ೫೪ ಮಂದಿ, ನಿಮ್ಮ ಮನೆ ಹತ್ತಿರ ಇದ್ದಾರಾ?

ಬೆಂಗಳೂರು : ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಯಾವುದೇ ಹೊಸ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ಬೆಳಗ್ಗೆಯಷ್ಟೇ ನಿಟ್ಟುಸಿರುಬಿಟ್ಟಿದ್ದೆವು. ಆದರೆ, ಈಗ ಅತೀ ದೊಡ್ಡ ಡೇಂಜರ್‌ಗೆ ರಾಜ್ಯ ಸಿಲುಕಿರೋ ಸುದ್ದಿ ಹೊರಬಿದ್ದಿದೆ. ದೇಶದ ವುಹಾನ್ ಎಂದೇ ಗುರುತಿಸಿಕೊಂಡಿರೋ ದೆಹಲಿಯ ನಿಜಾಮುದ್ದೀನ್ ಇಡೀ ದೇಶದ ನಿದ್ದೆಗೆಡಿಸಿದೆ. ೧೦ ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದ ಮಸೀದಿಯ ಧಾರ್ಮಿಕ ಕಾರ್ಯಕ್ರಮವೊಂದು ಭಾರತ, ಮಲೇಷಿಯಾ ಸೇರಿದಂತೆ ಹಲವು ದೇಶಗಳಿಗೆ ಸೋಂಕು ವಾಹಕವಾಗಿ ಮಾರ್ಪಟ್ಟಿದೆ. ಬೆಳಗ್ಗೆ ಸುಮಾರು ೧೨೦೦ ಮಂದಿಯನ್ನು ಪೊಲೀಸರು ಮಸೀದಿಯಿಂದ ಹೊರಗೆಳೆದು ಆಸ್ಪತ್ರೆ ಸೇರಿಸಿದ್ದಾರೆ. ಈ ಪೈಕಿ ೪೦ರಷ್ಟು ಮಂದಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಈ ಕಾರ್ಯಕ್ರಮವೇ ಈಗ ಕರ್ನಾಟಕಕ್ಕೂ ಅಪಾಯದ ಕರೆಗಂಟೆ ಬಾರಿಸಿದೆ. ಸರಿಯಾಗಿ ಈ ಸುದ್ದಿ ಓದಿಕೊಳ್ಳಿ.


ಸಚಿವ ಶ್ರೀರಾಮಲು ಮಾಡಿರೋ ಟ್ವೀಟ್ ಪ್ರಕಾರ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾರ್ಚ್ ೧೩-೧೫ರಂದು ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ೫೪ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇವರು, ಬೆಂಗಳೂರು, ಬೀದರ್, ಗುಲ್ಬರ್ಗಾ, ಬಳ್ಳಾರಿ ಭಾಗದವರಂತೆ. ಹೀಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿದ್ದ ತುಮಕೂರಿನ ಶಿರಾದ ವ್ಯಕ್ತಿಯೊಬ್ಬ ಈಗಾಗಲೇ ಕೊರೋನಾಗೆ ಬಲಿಯಾಗಿದ್ದಾನೆ. ಆತನ ೩ ಪತ್ನಿಯರು ೧೬ ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನು ನಿಗಾದಲ್ಲಿಡಲಾಗಿದೆ. ಈಗ ಬೆಚ್ಚಿಬೀಳೋ ಮಾಹಿತಿಯೊಂದು ಹೊರಬದ್ದಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೯೮ಕ್ಕೆ ಏರಿದ್ದು ನಿನ್ನೆ ಸಂಜೆಯಿAದೀಚೆಗೆ ೧೦ ಹೊಸ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ, ನಿಜಾಮುದ್ದೀನ್ ಪ್ರಕರಣ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ನಿಜಾಮುದ್ದೀನ್ ಕಾರ್ಯಕ್ರಮದಿಂದ ಮರಳಿದವರ ಪೈಕಿ ೧೩ ಮಂದಿಯನ್ನು ಗುರುತು ಹಿಡಿಯಲಾಗಿದೆ. ಉಳಿದ ೪೦ ಜನರೆಲ್ಲಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ನಿಜಾಮುದ್ದೀನ್ ಮಸೀದಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ೧೦ ಮಂದಿ ಈವರೆಗೆ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ೪೦ ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ, ಉಳಿದವರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಈ ಮಧ್ಯೆ ಕರ್ನಾಟಕ್ಕೆ ಬಂದು ಕೈಗೆ ಸಿಗದಿರೋ ೪೦ ಮಂದಿ ಕಳೆದ ೧೫ ದಿನಗಳಲ್ಲಿ ಎಲ್ಲೆಲ್ಲಿ ಓಡಾಡಿದ್ದಾರೆ. ಎಲ್ಲಿ ಯಾರನ್ನು ಭೇಟಿ ಮಾಡಿದ್ದಾರೆ ಎನ್ನುವುದೂ ಗೊತ್ತಾಗಿಲ್ಲ. ೧೫ ದಿನಗಳಿಂದ ಓಡಾಡ್ತಿರೋದ್ರಿಂದ ಸಾಕಷ್ಟು ಜನರನ್ನು ಭೇಟಿ ಮಾಡಿರೋ ಸಾಧ್ಯತೆ ಇದೆ. ಹೀಗಾಗಿ ಅರ್ಧಕ್ಕರ್ಧ ರಾಜ್ಯವೇ ಈಗ ಭೀತಿಗೆ ಸಿಲುಕಿದೆ. ಅವರು ಕುಟುಂಬ ವರ್ಗವಂತೂ ಭಾರೀ ಅಪಾಯದಲ್ಲಿದೆ.

ತಕ್ಷಣವೇ, ದೆಹಲಿಗೆ ಹೋದವರು ಜಿಲ್ಲಾಡಳಿತವನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಿ. ಇಲ್ಲವೇ ಕೆಟಿವಿ ಓದುಗರಿಗೆ ನಿಮ್ಮ ಅಕ್ಕ ಪಕ್ಕ ಯಾರಾದರೂ ದೆಹಲಿಗೆ ಹೋಗಿದ್ದ ಮಾಹಿತಿ ಇದ್ದರೆ ತಕ್ಷಣವೇ ಆಡಳಿತದ ಗಮನಕ್ಕೆ ತಂದು ಪ್ರಾಣ ಉಳಿಸೋ ಕೆಲಸದಲ್ಲಿ, ದೇಶ ಉಳಿಸೋ ಕೆಲಸದಲ್ಲಿ ಕೈ ಜೋಡಿಸಿ. ಏನೇ ಆದರೂ ಮನೆಯಲ್ಲೇ ಇರಿ.

Add Comment