BIG BREAKING- ಶರ್ಮಿಳಾ ಮಾಂಡ್ರೆಗೆ ಪಾರ್ಟಿ ಕೊಟ್ಟಿದ್ದು ಯಾರು ಗೊತ್ತಾ?

1 Star2 Stars3 Stars4 Stars5 Stars (No Ratings Yet)
Loading...

ಬೆಂಗಳೂರು : ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ಅಪಘಾತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಶುಕ್ರವಾರ ನಸುಕಿನ ಜಾವ ಬೆಂಗಳೂರಿನ ಬೆಂಗಳೂರಿನ ವಸಂತ ನಗರದಲ್ಲಿ ಶರ್ಮಿಳಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಂಡರ್‍ಪಾಸ್‍ನ ಪಿಲ್ಲರ್‍ಗೆ ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಐಷಾರಾಮಿ ಜಾಗ್ವಾರ್ ಕಾರು ಜಖಂ ಆಗಿದೆ. ಅಪಘಾತದಲ್ಲಿ ಶರ್ಮಿಳಾ ಅವರ ಮುಖ ಮತ್ತು ಕೈಗೆ ಗಾಯಗಳಾಗಿವೆ.

ಲಾಕ್‍ಡೌನ್ ಇದ್ದಾಗಲೂ ಮಧ್ಯರಾತ್ರಿ ಕಾರು ಓಡಿಸಿದ್ದೇಕೆ ಎಂದು ತನಿಖೆ ನಡೆಸ್ತಿರೋ ಪೊಲೀಸರು ಇದೀಗ ಬೆಚ್ಚಿಬಿದ್ದಿದ್ದಾರೆ. ಲಾಕ್‍ಡೌನ್ ಉಲ್ಲಂಘಿಸಬೇಡಿ ಎಂದು ಜನರಿಗೆ ಬುದ್ಧಿ ಹೇಳಬೇಕಿರುವವರೇ ರಾಜಾರೋಷವಾಗಿ ಲಾಕ್‍ಡೌನ್ ಉಲ್ಲಂಘಿಸಿದ್ದು ಬೆಳಕಿಗೆ ಬಂದಿದೆ. ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರೋ ಅಪಾರ್ಟ್‍ಮೆಂಟ್ ಒಂದರಲ್ಲಿ, ಮಾಜಿ ಸಚಿವರ ಪುತ್ರರೊಬ್ಬರು ಪಾರ್ಟಿ ಅರೇಂಜ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪಾರ್ಟಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ ಸೇರಿದಂತೆ ನಗರದ ಹಲವು ಪ್ರತಿಷ್ಠಿತ ವ್ಯಕ್ತಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.

ಅಪಘಾತವಾಗುತ್ತಿದ್ದಂತೆಯೇ, ಶರ್ಮಿಳಾ ಮತ್ತು ಅವರ ಸ್ನೇಹಿತ ಲೋಕೇಶ್ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೊರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯ ಮೆಮೋ ಆಧರಿಸಿ, ಆಸ್ಪತ್ರೆಗೆ ಹೋಗಿದ್ದ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಲು ಶರ್ಮಿಳಾ ನಿರಾಕರಿಸಿದ್ದಾರೆ. ಜೆ.ಪಿ.ನಗರ ಬಳಿ ಅಪಘಾತ ನಡೆದಿದೆ ಎಂದು ಮೊದಲು ಹೇಳಿದ್ದಾರೆ. ಅಷ್ಟರಲ್ಲಿ, ಹೆಚ್ಚಿನ ಮಾಹಿತಿ ನಾಳೆ ನೀಡುವುದಾಗಿ ಹೇಳಿದ್ದಾರೆ. ಅಷ್ಟೊತ್ತಿಗಾಗಲೇ, ಆ ಪ್ರಭಾವಿ ಮಾಜಿ ಸಚಿವರ ಪುತ್ರ ಶರ್ಮಿಳಾಗೆ ಕರೆ ಮಾಡಿ ಬೇರೆ ಆಸ್ಪತ್ರೆಗೆ ಶಿಫ್ಟ್ ಆಗಲು ಸೂಚಿಸಿದ್ದಾರೆ.

ಘಟನೆ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಕ್‍ಡೌನ್ ಉಲ್ಲಂಘಿಸಿ ಪಾರ್ಟಿ ಆಯೋಜಿಸಿದ್ದು ಯಾಕೆ? ಶರ್ಮಿಳಾ ಮತ್ತು ಸ್ನೇಹಿತ ಲೋಕೇಶ್ ಪಾನಮತ್ತರಾಗಿದರೇ? ಕೆಎಸ್‍ಪಿ ಪಾಸ್ ಕೊಟ್ಟಿದ್ದು ಯಾರು ಅನ್ನೋ ಪ್ರಶ್ನೆಗಳಿಗೆಲ್ಲಾ ಸಂಜೆ ವೇಳೆಗೆ ಉತ್ತರ ಸಿಗಬಹುದು.

ಪಾಸ್ ವಿತರಿಸಲು ಪೊಲೀಸರು ಆರಂಭಿಸಿದಾಗಲೇ 10ಲಕ್ಷಕ್ಕೂ ಹೆಚ್ಚು ಬೇಡಿಕೆ ಬಂದಿದ್ದವು. ಆಗಲೇ, ಪಾಸ್‍ಗಳನ್ನು ಕಡ್ಲೆಪುರಿ ಹಂಚಿದಂತೆ ಹಂಚಬೇಡಿ, ಮುಂದೆ ತೊಂದರೆಯಾದೀತು, ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಅವ್ರನ್ನು ಕೆಟಿವಿ ಎಚ್ಚರಿಸಿತ್ತು. ಈಗ ಅದು ನಿಜವಾಗಿದೆ. ತುರ್ತು ಸಂದರ್ಭಕ್ಕೆಂದು ಕೊಡಲಾಗಿರೋ ಪಾಸ್‍ಗಳು ಹೇಗೆ ದುರ್ಬಳಕೆಯಾಗುತ್ತಿವೆ ಎನ್ನುವುದಕ್ಕೆ ಶರ್ಮಿಳಾ ಪ್ರಕಣವೇ ಸಾಕ್ಷಿ.

Add Comment