ಇಂಗ್ಲೆಂಡ್ ವಿರುದ್ಧ 3-1ರಿಂದ ಟೆಸ್ಟ್ ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ ಭಾರತ

ಗುಜರಾತಿನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಪ್ತವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ನಲ್ಲಿ ಆತಿಥೇಯ ಭಾರತ ಇನಿಂಗ್ಸ್ ಹಾಗೂ 25 ರನ್ ಗಳಿಂದ ಭಾರೀ ಗೆಲುವು ಪಡೆದು ಟೆಸ್ಟ್ ಸರಣಿಯನ್ನು 3-1 ರಿಂದ ಜಯಿಸಿದೆ.
ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿದ ಸಾಧನೆಯನ್ನು ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ತೋರ್ಪಡಿಸಿದೆ.
ಕೇವಲ 2 ದಿನಗಳಿಗೆ ಅಂತ್ಯಗೊಂಡ 3ನೇ ಟೆಸ್ಟ್ ನಲ್ಲಿ
ಭಾರತ ಗೆದ್ದ ರೀತಿ 4ನೇ ಟೆಸ್ಟ್ ಪಂದ್ಯದಲ್ಲೂ ಸಹ ಕೇವಲ 3ನೇ ದಿನದ ಮಧ್ಯಾಹ್ನ ಮುಗಿದು ಸಂಜೆಯಾಗುವಷ್ಟರಲ್ಲಿ ಭಾರತ ಸುಲಭ ಜಯ ಪಡೆದದ್ದು ಕೆಲವು ಕ್ರಿಕೆಟ್ ಪಿಚ್ ತಜ್ಞರ ತೀವ್ರ ಟೀಕೆಗಳಿಗೂ ಕಾರಣವಾಗಿದೆ.‌
ಆದಾಗ್ಯೂ ನಿನ್ನೆ 2ನೇ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದ ಭಾರತ ಮೊದಲ ಇನಿಂಗ್ಸ್ ನಲ್ಲಿ 365 ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅಜೇಯ 96 ರನ್ ಮತ್ತು ಸ್ಪಿನ್ ಬೌಲರ್ ಆದ ಅಕ್ಸರ್ ಪಟೇಲ್ ಬ್ಯಾಟಿಂಗ್ ನಲ್ಲೂ ಮಿಂಚಿ 8ನೇ ವಿಕೆಟ್ ಗೆ ಮಹತ್ವದ 106 ರನ್ ಸೇರಿಸಿ ಪಂದ್ಯವನ್ನು ಭಾರತದತ್ತ ವಾಲಿಸಿದರು‌. ಕಡೆಯ 3 ವಿಕೆಟ್ ಗಳೂ 365 ರನ್ ಗೆ ಪತನವಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ 160 ರನ್ ಲೀಡ್ ಪಡೆಯಿತು.
ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 54.5 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟ್ ಆಗಿ ಇನಿಂಗ್ಸ್ ಮತ್ತು 25 ರನ್ ಗಳ ಹೀನಾಯ ಸೋಲು ಕಂಡಿತು.
ಇಂಗ್ಲೆಂಡ್ ಪರ ನಾಯಕ ಜೋ ರೂಟ್ 30 ರನ್ ಹಾಗೂ ಡೇನಿಯಲ್ ಲಾರೆನ್ಸ್ 50 ರನ್ ಗಳಿಸಿದರೂ ಅದು ಸೋಲನ್ನು ತಪ್ಪಿಸಲಿಲ್ಲ.
ಭಾರತದ ಪರ ಹಿರಿಯ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಸ್ಥಳೀಯ ಯುವಸ್ಪಿನ್ನರ್ ಅಕ್ಸರ್ ಪಟೇಲ್ ತಲಾ 5 ವಿಕೆಟ್ ಗಳಿಸಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ಕೊಡಿಸಿದರು.
ಒಟ್ಟಾರೆ ಮೊದಲ ಟೆಸ್ಟ್ ನಲ್ಲಿ ಹೀನಾಯ ಸೋಲು ಕಂಡರೂ ಆತಿಥೇಯ ಭಾರತ ತವರಿನ ಚೆನ್ನೈ ಮತ್ತು ಅಹಮದಾಬಾದ್ ಗಳ ಸ್ಪಿನ್ ಪಿಚ್ ಲಾಭ ಪಡೆದು ಉಳಿದ ಮೂರೂ ಟೆಸ್ಟ್ ಗಳಲ್ಲೂ ಸುಲಭ ಜಯ ಗಳಿಸಿ 4 ಟೆಸ್ಟ್ ಪಂದ್ಯಗಳ ಸರಣಿಯನ್ನು 3-1 ರಿಂದ ಜಯಿಸಿತು.
ಕೊನೆಯಲ್ಲಿ ಮಹತ್ವದ ಶತಕ ಬಾರಿಸಿ ಭಾರತವನ್ನು ಮೊದಲ ಇನಿಂಗ್ಸ್ ನಲ್ಲಿ ಕುಸಿತದಿಂದ ಮೇಲೆತ್ತಿ ಜಯಕ್ಕೆ ಕಾರಣವಾದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಆದರೆ 4 ಟೆಸ್ಟ್ ಗಳಲ್ಲೂ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಕಾಡಿ ಜೊತೆಗೆ 3ನೇ ಟೆಸ್ಟ್ ನಲ್ಲಿ ಶತಕ ಬಾರಿಸಿ ಸರಣಿ ಜಯಕ್ಕೆ ಕಾರಣರಾದ ಅನುಭವಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರಿಗೆ ಸಹಜವಾಗಿ ಸರಣಿ ಸರ್ವೋತ್ತಮ ಆಟಗಾರ ಪ್ರಶಸ್ತಿ ದೊರೆಯಿತು.
ಈ ಮೂಲಕ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಪೈನಲ್ ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
KTVKANNADA ಅಹಮದಾಬಾ

Add Comment