ನಿಕಟಪೂರ್ವ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನಕಲಿ ಸಿಡಿ ಆರೋಪ: ಗೋಕಾಕ್ ತಾಲ್ಲೂಕಿನಾದ್ಯಂತ ಸತತ 4ನೇ ದಿನವೂ ಪ್ರತಿಭಟನೆ

ನಕಲಿ ಸಿಡಿ ತಯಾರಿಸಿ ಸಚಿವ ರಮೇಶ ಜಾರಕಿಹೋಳಿ ರಾಜಿನಾಮೆಗೆ ಕಾರಣರಾದ ದಿನೇಶ ಕಲ್ಲಹಳ್ಳಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಗೋಕಾಕ‌ ತಾಲೂಕಿನಾದ್ಯಾಂತ ನಡೆಸುತ್ತಿರುವ ಪ್ರತಿಭಟನೆ ಸತತ ನಾಲ್ಕನೆಯ ದಿನಕ್ಕೂ ಮುಂದುವರೆದಿದೆ.
ನಕಲಿ ಸಿಡಿ ತಯಾರಿಸಿ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ತೇಜೋವಧೆಗೆ ಹಾಗೂ ರಾಜಿನಾಮೆಗೆ ಕಾರಣಕರ್ತನಾದ ದಿನೇಶ ಕಲ್ಲಹಳ್ಳಿ ವಿರುದ್ಧ ತಾಲ್ಲೂಕಿನ ಮಮದಾಪುರ, ಅಂಕಲಗಿ ಮತ್ತು ಗೋಕಾಕ ನಗರದಲ್ಲಿ ಮುಂದುವರೆದಿದೆ.
ಇಂದು ಗೋಕಾಕ್ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸಾವಿರಾರು ಕಾರ್ಯಕರ್ತರು ಮತ್ತು ರಮೇಶ ಜಾರಕಿಹೊಳಿಯವರ ಅಭಿಮಾನಿಗಳದವರು ದಿನೇಶ ಕಲಹಳ್ಳಿಯ ವಿರುದ್ದ ದಿಕ್ಕಾರ ಕೂಗುತ್ತಾ ಪಾದಯಾತ್ರೆ ಮಾಡುವ ಮೂಲಕ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಇದೇ ವೇಳೆ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿಯೂ ಕೂಡ ರಮೇಶ ಜಾರಕಿಹೋಳಿಯವರ ಅಭಿಮಾನ ಬಳಗದವರು ಗೋಕಾಕ-ಯರಗಟ್ಟಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿ ರಮೇಶ ಜಾರಕಿಹೊಳಿಯವರ ವಿರುದ್ದ ಪೂರ್ವನಿಯೊಜಿತವಾಗಿ ಕೆಲವು ರಾಜಕೀಯ ಮತ್ತು ವಿರೋಧಿಗಳು ಈ ರೀತಿ ಷಡ್ಯಂತ್ರ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ ಕಲಹಳ್ಳಿ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕುವುದರ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ದಿನೇಶ ಕಲ್ಲಹಳ್ಳಿಯ ಅಣುಕು ಶವದ ಮೆರವಣಿಗೆ ಮಾಡುತ್ತಾ ಬಂದು ಬಸವೇಶ್ವರ ವೃತ್ತದಲ್ಲಿ ಬೆಂಕಿ ಹಚ್ಚಿ
ನಕಲಿ ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐ ಅಥವಾ ಸಿಓಡಿಗೆ ವಹಿಸಬೇಕೆಂದು ಆಗ್ರಹಿಸಿದರು.
ನಿನ್ನೆ ದಿನ ನಡೆದ ಘಟನೆಯಿಂದ ಎಚ್ಚೆತ್ತುಕೊಂಡ ರಮೇಶ ಜಾರಕಿಹೊಳಿಯವರ ಆಪ್ತಸಹಾಯಕರು ತುರ್ತು ಪತ್ರಿಕಾಗೋಷ್ಠಿ ಕರೆದು ಪ್ರತಿ ಪ್ರತಿಭಟನೆಯಿಂದ ಏನೂ ಸಾದಿಸಲು ಸಾಧ್ಯವಿಲ್ಲ ಹಾಗೂ ಯಾವುದೇ ಅನಾಹುತ ಮಾಡಿಕೊಳ್ಳದೆ ಪ್ರತಿಭಟನೆ ಶಾಂತಿಯುತವಾಗಲೆಂದು ರಮೇಶ ಜಾರಕಿಹೊಳಿಯವರು ಪೋನ್ ಮುಖಾಂತರ ತಿಳಿಸಿದ್ದಾರೆಂದರು, ಅದೇ ಕಾರಣಕ್ಕಾಗಿ ಇವತ್ತು ನಡೆದ ಪ್ರತಿಭಟನೆ ಶಾಂತಿಯುತವಾಗಿ ನಡೆದು ತಹಸಿಲ್ದಾರ್ ಕಚೇರಿ ಎದುರುಗಡೆಯಲ್ಲಿ ಒಂದು ದಿನದ ಸಾಂಕೇತಿಕ ದರಣಿ ನಡೆಯಿತು.
ಇನ್ನು ಪ್ರತಿ ದಿನದ ಪ್ರತಿಭಟನೆಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಯಾವುದಾದರೂ ಒಂದು ಅನಾಹುತ ಆಗುತ್ತಿದ್ದರಿಂದ ಜಿಲ್ಲಾಡಳಿತದಿಂದ ಇವತ್ತು ಭದ್ರತೆಗಾಗಿ ಮತ್ತಷ್ಟು ಹೆಚ್ಚಿನ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು. ಇಷ್ಟಾದರೂ ಸಹ ಗೋಕಾಕದಲ್ಲಿ ಯಾವಾಗ ಏನಾಗುತ್ತದೆಯೋ ಎಂದು ಜನ ಚಿಂತೆಯಲ್ಲಿದ್ದಾರೆ.
ಮನೋಹರ್ ಮೇಗೇರಿ
KTVKANNADA
ಗೋಕಾಕ

Add Comment