ಕೊರೊನಾ ಸಂಕಷ್ಟದಲ್ಲೂ ಬಜೆಟ್ ನಲ್ಲಿ ಬಿಎಂಟಿಸಿ ದರ ಏರಿಸಿದರೆ ಬಿಜೆಪಿ ಫಿನಿಶ್!

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ‌ ತಳಕಚ್ಚಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ 2021-22ನೇ ವರ್ಷದ ಬಜೆಟ್ಟನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಮಂಡಿಸಲಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ 2ನೇ ಅಲೆ ನಿಧಾನವಾಗೇ ಏಳಿರುವ ಸಮಯದಲ್ಲೇ ಬಜೆಟ್ ಗೆ ಅನುದಾನದ ಕೊರತೆ ಎದುರಾಗಿದೆ‌. ರಾಜ್ಯದ ಬಡವರು,ಮಧ್ಯಮವರ್ಗದವರೇ ಹೆಚ್ಚಿರುವ ರಾಜಧಾನಿ ಬೆಂಗಳೂರಿನಲ್ಲಿ ಈಗ ಬಜೆಟ್ ನಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾ 18 ರಿಂದ 20 ರಷ್ಟು ದರ ಏರಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಶಿಫಾರಸ್ಸು ಮಾಡಿದ್ದಾರೆ.
ಆದರೆ ಶಿಖಾ ಅವರ ಈ ಭ್ರಷ್ಟಾಚಾರದ ದಂಧೆಯ ಶಿಫಾರಸ್ಸನ್ನು ಸಿಎಂ ಯಡಿಯೂರಪ್ಪ ಅವರು ತಮ್ಮ ಬಜೆಟ್ ನಲ್ಲಿ ಜಾರಿಗೊಳಿಸಿದರೆ ಸಾಕು ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಸಾವಿರ ಕೋಟಿ ರೂ. ಖರ್ಚು‌ ಮಾಡಿದರೂ 50 ಕಾರ್ಪೊರೇಟರ್ ಗಳನ್ನು ಗೆಲ್ಲಲು ಅಸಾಧ್ಯ ಎಂದು ಬೆಂಗಳೂರಿಗರು ಬಂಡಾಯ ಎದ್ದಿದ್ದಾರೆ. ಏಕೆಂದರೆ ಕೊರೊನಾ ಸೋಂಕಿನ ಕಾಲದಲ್ಲೂ ಕೆಲಸ ಮಾಡಿದ್ದ ಬಿಎಂಟಿಸಿ ನೌಕರರಿಗೆ 6ನೇ ವೇತನ ಆಯೋಗ ಜಾರಿಗೆ ಸೌಲಭ್ಯ ಹಾಗೂ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾರಿಗೆ ಇಲಾಖೆ ಮುಂದಾಗಿಲ್ಲ. ಇದರಿಂದ ರಾಜ್ಯಸರ್ಕಾರದ ವಿರುದ್ಧ ಜಾತಿ,ಮತ ಎಂಬ ಬೇಧ-ಭಾವವಿಲ್ಲದೇ ಸಮಸ್ತ ಬೆಂಗಳೂರಿನ ಜನರು ಕೊರೊನಾ ಸೋಂಕಿನ ಆರ್ಥಿಕ ಸಂಕಷ್ಟದಲ್ಲೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಕೊಂಚ ಮಟ್ಟಿಗೆ ಏರಿಸುವ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಇಂದು ಬಜೆಟ್ ನಲ್ಲಿ ಮಂಡಿಸಿದರೆ ಸಾಕು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಲೀಸಾಗಿ ಸೋತು, ಕಾಂಗ್ರೆಸ್ ಇಲ್ಲವೇ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ತಜ್ಞರು KTVKANNADaಕ್ಕೆ ತಿಳಿಸಿದ್ದಾರೆ.
ಏಕೆಂದರೆ ಈಗ ರಾಜ್ಯದ ಸಚಿವರು,ಸಂಸದರು ಕಾರು ಕೊಳ್ಳಲು ನೀಡುತ್ತಿದ್ದ 22 ಲಕ್ಷ ರೂ. ಅನುದಾನವನ್ನು ಸಿಎಂ ಯಡಿಯೂರಪ್ಪ 23 ಲಕ್ಷ ರೂ.ಗಳಿಗೆ ಏರಿಸಿದ್ದಾರೆ! ಆದರೆ ಜನಸಾಮಾನ್ಯರು ಕೊರೊನಾ ಸೋಂಕಿನ ಆರ್ಥಿಕ ಸಂಕಷ್ಟದಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲೂ ಪ್ರಯಾಣ ದರ ಏರಿಸಲು ಭ್ರಷ್ಟ ಬಿಎಂಟಿಸಿ ವ್ಯವಸ್ಥಾಪಕಿ ನಿರ್ದೇಶಕಿ ಶಿಖಾ ಶಿಫಾರಸ್ಸು ಮಾಡಿದ್ದಾರೆ.
ಇದಕ್ಕೆ ಬಿಎಂಟಿಸಿ ನೌಕರರೂ ಸಹ ವಿರೋಧಿಸಿ ಮಾರ್ಚ್ 16 ರಿಂದ ಮತ್ತೆ ಸಾರಿಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಅತ್ತ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೊರೊನಾ ಸೋಂಕಿನ ಸಂಕಷ್ಟ ಕಾಲದಲ್ಲೂ ದೇಶಾದ್ಯಂತ ಪೆಟ್ರೋಲ್,ಡೀಸೆಲ್,ಗ್ಯಾಸ್ ಬೆಲೆಯನ್ನು ಗಗನಕ್ಕೇರಿಸಿದೆ. ಆದರೆ ಸೌದಿ ಅರೇಬಿಯಾದಿಂದ ಕೊರೊನಾ ಸೋಂಕಿನ ಕಾಲದಲ್ಲಿ ಆಮದು ಮಾಡಿಕೊಂಡಿದ್ದ ಅಪಾರ ಪ್ರಮಾಣದ ತೈಲವನ್ನು ಬ್ಯಾಂಕ್ ನಲ್ಲಿ ಬಚ್ಚಿಟ್ಟಂತೆ ಮೋದಿ ಸರ್ಕಾರ ಬಚ್ಚಿಟ್ಟು ಈಗ ದಾಖಲೆಯ ಭ್ರಷ್ಟಾಚಾರ ನಡೆಸಿ ತೈಲ ಬೆಲೆ,ಗ್ಯಾಸ್ ಬೆಲೆಯೇರಿಸಿದೆ‌. ಹಿಂದಿನ ಯುಪಿಎ ಸರ್ಕಾರದಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ದರ ಕೊಂಚ ಏರಿದಾಗ ದೇಶದಲ್ಲೂ ತೈಲ ಬೆಲೆ ಏರಿಸಲಾಗುತ್ತಿತ್ತು. ಆಗ ಬಿಜೆಪಿಯ ರಾಷ್ಟ್ರೀಯ ನಾಯಕರು ರೋಡಿಗಿಳಿದು ತೈಲ ಬೆಲೆ ಹೆಚ್ಚಳದ ವಿರುದ್ಧ ಪ್ರತಿಭಟಿಸುತ್ತಿದ್ದರು.
ಆದರೆ ಈಗ ಕೊರೊನಾ ಸೋಂಕಿನ 2ನೇ ಅಲೆ ಏಳುತ್ತಿರುವಾಗಲೇ ತೈಲ ಬೆಲೆಯನ್ನು ಗಗನಕ್ಕೇರಿಸಲಾಗಿದೆ. ಸಾಲದ್ದಕ್ಕೆ ಎಲ್ಲಾ ರೀತಿಯ ಅಡುಗೆ ಎಣ್ಣೆಗಳ ಬೆಲೆಯನ್ನು ಬಡವರು,ಮಧ್ಯಮ ವರ್ಗದವರು ಕೊಳ್ಳದಂತೆ ಗಗನಕ್ಕೇರಿಸಲಾಗಿದೆ‌.
ಇದರಿಂದ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗುವುದು 100% ನಿಶ್ಚಿತ!
ಜೊತೆಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ದರವನ್ನು ಕೊಂಚ. ಏರಿಸಿದರೆ ಸಾಕು ಯಡಿಯೂರಪ್ಪ ಅವರೇ ಬಿಜೆಪಿಯ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸರ್ವೇ ಆಧಾರದ ಮೇಲೆ KTVKANNADA ರಾಜ್ಯದ ಜನರೇ ಹೆಚ್ಚಾಗಿ ವಾಸಿಸುವ ಬೆಂಗಳೂರಿನ ಅಭಿಪ್ರಾಯವನ್ನು ತಿಳಿಸುತ್ತಿದೆ!
KTVKANNADA ಬೆಂಗಳೂರು

Add Comment