ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಬೆಂಡೆಕೆರೆ, ಶ್ರೀ ಓರಂಗಲ್ ತಿಮ್ಮಪ್ಪ ದೇವಾಲಯದ ಆವರಣದಲ್ಲಿ ದೇವಾಲಯದ ಅಭಿವೃದ್ಧಿಯ ಬಗ್ಗೆ ಊರಿನ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಹೇಮಾವತಿ ಡ್ಯಾಮ್ ಇದ್ದರು ಸಹ ರೈತರ ಜಮೀನಿಗೆ ನೀರಿಲ್ಲ ಬಾಯಿಮಾತಿಗೆ ನೀರು ತಂದೆ ಎನ್ನುವ ಶಾಸಕರು ಪತ್ರಿಕಾಗೋಷ್ಠಿಯನ್ನು ಮಾಡುವುದನ್ನು ಬಿಟ್ಟು ಜನರ ಕುಂದುಕೊರತೆಗಳನ್ನು ಅರಿತು ಕೆಲಸ ಮಾಡಬೇಕು ನಾವು ತಂದ ಅನುದಾನವನ್ನು ತಾವೇ ತಂದಿತ್ತು ಎಂದು ಜನರಿಗೆ ಬಿಂಬಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಮುಂಬರುವ ದಿನಗಳಲ್ಲಿ ರೈತರ ಜಮೀನುಗಳಿಗೆ ನೀರು ತರುವ ಕೆಲಸ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಗ್ರಾಮಾಂತರ ಅಧ್ಯಕ್ಷ ಎಂ.ಜಿ ಲೋಕೇಶ್ ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಜಯ್ ವಿಕ್ರಂ, ರಾಜ್ಯ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಬೆಂಡೆಕೆರೆ ನಟರಾಜ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು . ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೆ.ಟಿವಿ ನ್ಯೂಸ್ ಕನ್ನಡ