ಅರಸೀಕೆರೆ ತಾಲೂಕಿನಲ್ಲಿ ರಾಗಿ ಖರೀದಿ ಅಧಿಕಾರಿ ವಿರುದ್ಧ ಆಕ್ರೋಶ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಣಾವರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ನಾಫೆಡ್ ರಾಗಿ ಖರೀದಿ ಕೇಂದ್ರದ ಅಧಿಕಾರಿ ದಂಡೇ ಗೌಡಗೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ತರಾಟೆ ತೆಗೆದುಕೊಂಡರು ರೈತರಿಂದ ಪ್ರತಿ ಚೀಲಕ್ಕೆ 30ರಿಂದ 40ರೂ ಹಣ ಪಡೆಯುತ್ತಾರೆ ಹಾಗೂ ಪ್ರತಿ ಚೀಲಕ್ಕೆ1 ಕೆಜಿ ರಾಗಿ ಹೆಚ್ಚು ತೂಕ ಪಡೆದುಕೊಳ್ಳುತ್ತಿದ್ದಾರೆ* ಎಂದು ರೈತರು ಶಾಸಕರಿಗೆ ಫೋನ್ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಬಾಣಾವರದ ಕೃಷಿ ಉತ್ಪನ್ನ ಮಾರು ಕಟ್ಟೆಗೆ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ರೈತರಿಂದ ನಲವತ್ತು40 ರೂ ಹಣ ಪಡೆದುಕೊಳ್ಳುವುದು ಹಾಗೂ ತೂಕದಲ್ಲಿ 1ಕೆಜಿ ಜಾಸ್ತಿ ರಾಗಿ ಪಡೆದುಕೊಳ್ಳುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಲಾರಿಗೆ ರಾಗಿ ಲೋಡ್ ಮತ್ತು ಅನ್ ಲೋಡ್ ಮಾಡುವ ಹಮಾಲಿಗಳಿಗೆ ಕೂಲಿ ಕಡಿಮೆ ಇರುವುದರಿಂದ ರೈತರು ನೀಡಿದರೆ ಹತ್ತು 10 ರೂಪಾಯಿ ಪಡೆದುಕೊಳ್ಳಿ.ರೈತರು ಒಪ್ಪದಿದ್ದರೆ ಅದನ್ನು ಕೂಡ ಪಡೆದುಕೊಳ್ಳಬಾರದೆಂದು ಹೇಳಿದರು. ಯಾವುದೇ ಸಮಸ್ಯೆ ಬರದ ಹಾಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಾಣಾವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ಎಂ .ಜಯಣ್ಣ, ಶಾನೇಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜಿ.ಚಂದ್ರಪ್ಪ ರೈತಬಾಂಧವರು ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.

ಎಸ್ಎಲ್ಎನ್ ಯೋಗೇಶ್ ಕೆ ಟಿವಿ ಕನ್ನಡ ನ್ಯೂಸ್ ಅರಸೀಕೆರೆ

ಕೆ.ಟಿವಿ ನ್ಯೂಸ್ ಕನ್ನಡ

Add Comment