BIG BREAKING- ಕೊರೋನಾ ಮಧ್ಯೆಯೇ ಘರ್ಜಿಸಿದ ಭಾರತ ಸೇನೆ – ಮುಟ್ಟಿನೋಡುವ ಏಟು ಕೊಟ್ಟ ಮೋದಿ

 

ದೆಹಲಿ : ಭಾರತ ಸರಕಾರ ಕೊರೋನಾ ವಿರುದ್ಧ ಹೋರಾಟದಲ್ಲಿ ಮಗ್ನವಾಗಿದೆ. ಇದೇ ಸರಿಯಾದ ಸಂದರ್ಭ ಎಂದು ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸಿದ್ಧತೆ ನಡೆಸಿತ್ತು. ಅಲ್ಲದೆ ಸುಮಾರು 500ಕ್ಕೂ ಹೆಚ್ಚು ಉಗ್ರರನ್ನು ಒಳನುಗ್ಗಿಸಿ ಕೊರೋನಾ ಸೋಂಕು ಹಬ್ಬಿಸಲು ಸ್ಕೆಚ್ ಹಾಕಿತ್ತು. ಪಾಕಿಸ್ತಾನ ಇಂತಹದ್ದೊಂದು ದುಸ್ಸಾಹಸ ನಡೆಸಿಯೇ ತೀರುತ್ತೆ ಎಂದು ಮೋದಿ –ಶಾ ಯೋಚನೆ ಮಾಡುತ್ತಿದ್ದರು. ಎಲ್ಲರೂ ಶಾ ಏನ್ಮಾಡ್ತಿದ್ದಾರೆ ಅಂತ ಕೇಳ್ತಿದ್ದರು, ಶಾ ಏನು ಮಾಡುತ್ತಿದ್ದರು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ.

ಕೊರೋನಾ ನಿಭಾಯಿಸುವ ಭಾರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೆಗಲಿಗೆ ಹೊರಿಸಿದ ಮೋದಿ ಗಡಿ ಕಾಯುವ ಜವಬ್ದಾರಿಯನ್ನು ಶಾಗೆ ಕೊಟ್ಟಿದ್ದರು. ಶಾ-ಧೋವಲ್ ಸ್ಕೆಚ್ ಗೆ ಈಗ ಪಾಕಿಸ್ತಾನ ಗಡಗಡ ನಡುಗಿದೆ. ಸತತ ನಾಲ್ಕು ದಿನಗಳಿಂದ ಗುಂಡಿನ ದಾಳಿ ನಡೆಸ್ತಿರೋ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಮೋದಿ ಸರಕಾರ ನಿರ್ಧರಿಸಿಬಿಟ್ಟಿತ್ತು. ಅದರಂತೆಯೇ, ನಿನ್ನೆ ಭಾರತೀಯ ಸೇನೆಗೆ ಆದೇಶವನ್ನೂ ಕೊಟ್ಟುಬಿಟ್ಟಿತ್ತು,
ಮೊದಲೇ ಪಾಕ್ ಮೇಲೆ ಮುಗಿ ಬೀಳಲು ಕಾಯುತ್ತಿರೋ ಯೋಧರಿಗೆ ಇಷ್ಟು ಸಿಕ್ಕರೆ ಸಾಕು, ಬಿಡ್ತಾರೆಯೇ. ನಿನ್ನೆ ಏಕಾಏಕಿ ಪಾಕಿಸ್ತಾನ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಗಡಿ ಭಾಗದಲ್ಲಿದ್ದ ಪಾಕ್ ಸೇನೆಯ ಶಸ್ತ್ರಾಸ್ತ್ರ ಸಂಗ್ರಹಾಲಯದ ಮೇಲೆ ಭಯಾನಕ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ, ಪಾಕಿಸ್ತಾನದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಸುಟ್ಟು ಭಸ್ಮವಾಗಿವೆ.
ಆರ್ಟಿಲರಿ ಗನ್ ಗಳ ಮೂಲಕ ಗುರಿನಿರ್ದೇಶಿತ ದಾಳಿ ನಡೆಸಿದ ಭಾರತೀಯ ಸೇನೆ, ಪಾಕ್ ಕಡೆಯಲ್ಲಿ ಅಪಾರ ನಷ್ಟಕ್ಕೆ ಕಾರಣವಾಗಿದೆ. ಒಂದು ಮೂಲಗಳ ಪ್ರಕಾರ ಒಂದು ವಾರದ ಯುದ್ಧಕ್ಕೆ ಸಾಕಾಗುವಷ್ಟು, ಶಸ್ತ್ರಾಸ್ತ್ರಗಳನ್ನು ಭಾರತದ ಯೋಧರು ಒಂದೇ ಏಟಿಗೆ ಭಸ್ಮ ಮಾಡಿದ್ದಾರೆ.

ಗಡಿಯಲ್ಲಿ ಅಪಾರ ಶೌರ್ಯ ಮರೆಯುತ್ತಿರೋ ಯೋಧರಿಗೆ ಸಲಾಂ.

Add Comment