ಸರ್ವರಿಗೂ ಸಮಪಾಲು ನೀಡಲು‌ ಸಿಎಂ ಯಡಿಯೂರಪ್ಪರ ಬಜೆಟ್ ಮೀಸಲು

ಕೊರೊನಾ ವೈರಸ್ ಸೋಂಕಿನ ಆರ್ಥಿಕ ಸಂಕಷ್ಟದಲ್ಲೂ 2,46,206 ಕೋಟಿ ರೂ. ಗಾತ್ರದ 2021-22ನೇ ವರ್ಷದ ರಾಜ್ಯಬಜೆಟ್ಟನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮಂಡಿಸಿದರು.
ಯಾವುದೇ ತೆರಿಗೆ ವಿಧಿಸದೆ ಶಿಕ್ಷಣ,ಕೃಷಿ,
ಗ್ರಾಮೀಣಾಭಿವೃದ್ಧಿ,ಆರೋಗ್ಯ,ನೀರಾವರಿ,ಮಹಿಳೆಯರು ಹೀಗೆ ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ಹಂಚಿ ಸಿಎಂ ಯಡಿಯೂರಪ್ಪ ಉತ್ತಮ ಬಜೆಟ್ ನೀಡಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಿಗೆ ಬರೋಬ್ಬರಿ 1,500 ಕೋಟಿ ರೂ. ಅನುದಾನ ನೀಡಿ ಕಾಂಗ್ರೆಸ್ ವೋಟ್ ಬ್ಯಾಂಕಿಗೆ ಕೈ ಫ ಸಿಎಂ ಯಡಿಯೂರಪ್ಪ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ‌. ಅನುದಾನ ನೀಡಿ ಜೆಡಿಎಸ್ ವೋಟ್ ಬ್ಯಾಂಕನ್ನೇ ಕಬಳಿಸಿದ್ದಾರೆ.
ಜೊತೆಗೆ ಸಿಎಂ ಮಹಿಳೆಯರಿಗೆ ಬೆಂಗಳೂರಿ‌ನ ಬಿಎಂಟಿಸಿ ಬಸ್ ಪ್ರಯಾಣಕ್ಕೆ ರಿಯಾಯಿತಿ ಬಸ್ ಪಾಸ್ ನೀಡಿ ಬಿಬಿಎಂಪಿ ಚುನಾವಣೆಯಲ್ಲಿ ಮಹಿಳೆಯರ ಮತಬ್ಯಾಂಕ್ ಭದ್ರಪಡಿಸಿಕೊಂಡಿದ್ದಾರೆ.
ಇನ್ನು ನೀರಾವರಿ ಇಲಾಖೆಯಲ್ಲಿ ಮಧ್ಯಕರ್ನಾಟಕದ ಭಾಗಕ್ಕೆ ಭದ್ರಾ ಮೇಲ್ಸಂಡೆ ಯೋಜನೆಗೆ 21,474 ಕೋಟಿ ರೂ‌‌. ನೀಡಲಾಗಿದೆ. ಜೊತೆಗೆ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅಲ್ಲದೆ ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದ ಹೊಸ ರೈಲ್ವೆ ಯೋಜನೆಗೆ ಅನುದಾನ ನೀಡಲಾಗಿದೆ.
ಜೊತೆಗೆ ಕೃಷ್ಣಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಏತ ನೀರಾವರಿ ಯೋಜನೆ ಕಾಮಗಾರಿಗಳಿಗೂ ಹೆಚ್ಚಿನ ಅನುದಾನ ನೀಡಲಾಗಿದೆ.
ಉಳಿದಂತೆ ಕೃಷಿ,ಆರೋಗ್ಯ,ಗ್ರಾಮೀಣಾಭಿವೃದ್ಧಿ,
ಜಲಸಂಪನ್ಮೂಲ,ಕಂದಾಯ,ನಗರಾಭಿವೃದ್ಧಿ ಮುಂತಾದ ಇಲಾಖೆಗಳಿಗೆ ಆದ್ಯತೆ ನೀಡಿ ಸಾಕಷ್ಟು ಅನುದಾನ ನೀಡಲಾಗಿದೆ.
ಅದರಲ್ಲೂ ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಯೋಜನೆಗೆ ವಿಶೇಷ ಒತ್ತು ನೀಡಲಾಗಿದೆ.
ಒಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್ ಸಂಪೂರ್ಣವಾಗಿ ಸಿಎಂ ಯಡಿಯೂರಪ್ಪನವರ ಇಚ್ಛಾನುಸಾರ ಅನುಷ್ಠಾನಗೊಂಡಿದೇ ಹೊರತು ಹಿಂದಿನಂತೆ ಬಿಜೆಪಿ ಹೈಕಮಾಂಡ್ ನ ಆದೇಶದಂತೆ ಬಜೆಟ್ ಜಾರಿಯಾಗುತ್ತಿಲ್ಲ. ಇದಕ್ಕೆ ಕಾರಣ ಅಲ್ಪಸಂಖ್ಯಾತ ಸಮುದಾಯಕ್ಕೆ ಬರೋಬ್ಬರಿ 1,500 ಕೋಟಿ ರೂ. ಅನುದಾನ ನೀಡಿರುವುದಕ್ಕೆ ಬಿಜೆಪಿ ಹೈಕಮಾಂಡ್ ಸಿಟ್ಟಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.
KTVKANNADA ಬೆಂಗಳೂರು

Add Comment