ನಕಲಿ ಸಿಡಿ ತಯಾರಿಸಿ ಯುವತಿಗೆ 5 ಕೋಟಿ ಕೊಟ್ಟವರನ್ನು ಜೈಲಿಗೆ ಕಳುಹಿಸುತ್ತೇನೆ-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಪಥ

ಬೆಂಗಳೂರಿನ ಸದಾಶಿವನಗರದಲ್ಲಿ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ವಿರುದ್ಧ ನಕಲಿ ಸೆಕ್ಸ್‌ ಸಿಡಿ ತಯಾರಿಸಲು ಒಬ್ಬ ಮಹಾನ್ ನಾಯಕರು ಮೂರು ತಿಂಗಳ ಹಿಂದೆ ಪ್ಲಾನ್ ಮಾಡಿದ್ದರು. ಈ ವಿಷಯವನ್ನು ನನಗೆ ಆಗ ನನ್ನ ಸಹೋದರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಮಾಜಿ ಶಾಸಕ ನಾಗರಾಜು ತಿಳಿಸಿದ್ದರು. ಆದರೆ ನಾನು ಆಗ ಈ ವಿಷಯವನ್ನು ನಿರ್ಲಕ್ಷಿಸಿದ್ದೆ ಎಂದರು.
ಇದೇ ವೇಳೆ ಈ ನಕಲಿ ಸಿಡಿ ತಯಾರಿಸಲು ಸಿಟಿಯಲ್ಲಿರುವ ಯುವತಿಗೆ 5 ಕೋಟಿ ರೂಪಾಯಿ ಹಣ ನೀಡಲಾಗಿದೆ ಮತ್ತು ಈ ನಕಲಿ ಸಿಡಿಯನ್ನು ಯಶವಂತಪುರ ಮತ್ತು ಓರಿಯನ್ ಮಾಲ್ ನಲ್ಲಿ ಚಿತ್ರೀಕರಿಸಲಾಗಿದೆ.‌ ‌ಮೂರು ತಿಂಗಳಲ ಹಿಂದೆಯೇ ಒಬ್ಬ ಮಹಾನ್ ನಾಯಕರು ನಾನು ಮೂರು ತಿಂಗಳಿಗಿಂತ ಹೆಚ್ಚಿಗೆ ಸಚಿವ ಸ್ಥಾನದಲ್ಲಿ ಇರಲ್ಲ ಎಂದು ಸವಾಲು ಹಾಕಿದ್ದರು. ಆದರೆ ನಾನು ಇಲ್ಲಿ ಅವರ ಹೆಸರು ಹೇಳಲ್ಲ ಎಂದರು.
ಇದೇ ವೇಳೆ ಈ ನಕಲಿ ಸಿಡಿ ತಯಾರಿಸಲು ಇಬ್ಬರು ಮತ್ತು ನಾಲ್ವರು ಸೇರಿ ನನಗೆ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಆದರೆ ನಾನು ರಾಜಮನೆತನದ ಕುಟುಂಬದವನು‌. ಇಂತದ್ದೆನ್ನೆಲ್ಲಾ ಧೈರ್ಯವಾಗಿ ಎದುರಿಸುತ್ತೇನೆ. ಆದರೆ ನಾನು ಮುಂದೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೊ ಗೊತ್ತಿಲ್ಲ. ಆದರೆ ಸಿಡಿ ತಯಾರಿಸಿರುವವರನ್ನು ಎಷ್ಟೇ ಖರ್ಚಾದರೂ ಸರಿ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಪರೋಕ್ಷವಾಗಿ ಸಿಡಿ ಬಿಡುಗಡೆ ಮಾಡಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ‌ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರಿಗೆ ಎಚ್ಚರಿಸಿದರು.
KTVKANNADA
ಬೆಂಗಳೂರು

Add Comment