BIG BREAKING -ಪಿಒಕೆ ಬಿಟ್ಟು ತೊಲಗಿ, ಪಾಕ್ ಗೆ ಭಾರತ ತಾಕೀತು

1 Star2 Stars3 Stars4 Stars5 Stars (No Ratings Yet)
Loading...

ಪಾಕ್ ಆಕ್ರಮಿತ ಕಾಶ್ಮೀರ ನಿಮ್ಮದಲ್ಲ, ಅದರ ತಂಟೆಗೆ ಬಂದರೆ ಜೋಕೆ. ಹೀಗಂತ ಭಾರತ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ ಆಕ್ರಮಿತ ಜಾಗವನ್ನು ಬಿಟ್ಟು ತೊಲಗುವಂತೆ ತಾಕೀತು ಮಾಡಿದೆ.

ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿವೆ. ಭಾರತದ ಸಂವಿಧಾನದಲ್ಲೇ ಅದು ನಮ್ಮ ಅವಿಭಾಜ್ಯ ಅಂಗವೆಂದು ಉಲ್ಲೇಖವಾಗಿದೆ. ಈ ವಿಚಾರದಲ್ಲಿ ಯಾವುದೇ ತಂತ್ರಗಾರಿಕೆಗೆ ಮುಂದಾದ್ರೆ ಪರಿಣಾಮ ಎದುರಿಸಬೇಕಾದೀತು ಅಂತ ಮೋದಿ ಸರಕಾರ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಸರ್ಕಾರ ಅಥವಾ ಅದರ ನ್ಯಾಯಾಂಗಕ್ಕೆ ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೆ ಯಾವುದೇ ಹಕ್ಕಿಲ್ಲ. ಭಾರತವು ಅಂತಹ ಕ್ರಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಪಾಕಿಸ್ತಾನ ತಾನು ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದದ ಭೂಪ್ರದೇಶದಲ್ಲಿ ಬದಲಾವಣೆಗಳನ್ನು ತರುವ ಪ್ರಯತ್ನಗಳನ್ನು ಮುಂದುವರೆಸಿದೆ.

ಗಿಲ್ಗಿಟ್ -ಬಾಲ್ಟಿಸ್ತಾನ ಪ್ರಾಂತ್ಯದಲ್ಲಿ ಚುನಾವಣೆ ನಡೆಸಲು ಪಾಕ್ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ನಡೆ ಖಂಡಿಸಿರುವ ಭಾರತ, ವಾಸ್ತವವಾಗಿ ಈ ಪ್ರದೇಶಗಳು ಭಾರತಕ್ಕೆ ಸೇರಿವೆ. ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿರುವ ಈ ಪ್ರದೇಶದಲ್ಲಿ ಚುನಾವಣೆ ನಡೆಸಬಾರದು. ಈ ಮೂಲಕ ಯಾವುದೇ ದಾಖಲಾತಿಗಳ ತಿದ್ದುಪಡಿಗೆ ಮುಂದಾದರೆ ಭಾರತ ಸಹಿಸಲ್ಲ. ತಕ್ಷಣವೇ, ಅಲ್ಲಿನ ಜನರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು, ಪಿಒಕೆ ಖಾಲಿ ಮಾಡಬೇಕೆಂದು ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ತಾಕೀತು ಪಾತ್ರ ರವಾನಿಸಿದೆ.

Add Comment