ಕೊರೊನ ಟೈಮ್ ನಲ್ಲಿ ಸೇವೆಗೆ ನಿಂತ ‘ಮಗ’ಧೀರ

ಬೆಂಗಳೂರು : ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ರಾಜ್ಯದ ಅನೇಕ ಬಡವರು, ಕೂಲಿ ಕಾರ್ಮಿಕರು ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಜನರು ತಮ್ಮಿಂದಾದ ಸಹಾಯ ಮಾಡುತ್ತಲೇ ಇದ್ದಾರೆ. ಜೊತೆಗೆ ಅದಕ್ಕೆ ಬೇಕಾದಷ್ಟು ಪ್ರಚಾರವನ್ನು ಪಡೆಯುತ್ತಿದ್ದಾರೆ. ೧೦ ಜನರಿಗೆ ಕಿಟ್ ಹಂಚಿ ಟಿವಿಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ, ಇಲ್ಲೊಬ್ಬರು ಪ್ರಚಾರದ ಹಂಗಿಲ್ಲದೆ ತಮ್ಮ ಪಾಡಿಗೆ ಜನಸೇವೆಯಲ್ಲಿ ನಿರತರಾಗಿದ್ದಾರೆ.

ಸಾವಿರಾರು ಕುಟುಂಬಗಳಿಗೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪಿ ನಾಗೇಂದ್ರ, ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಈ ಮೂಲಕ ಮಾನವೀಯತೆಯನ್ನು, ಸಂಕಷ್ಟಕ್ಕೆ ಸಿಲುಕ್ಕಿದ್ದವರಿಗೆ ಸಹಾಯದ ಹಸ್ತವನ್ನು ಚಾಚಿ, ಎಲ್ಲರಿಗೂ ಮಾದರಿಯಾಗಿದ್ದಾರೆ.
ಜೆಡಿಎಸ್ ನ ರಾಜ್ಯ ಕಾರ್ಯದರ್ಶಿಯಾಗಿರುವಂತ ಪಿ ನಾಗೇಂದ್ರ, ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಅನೇಕ ವಾರ್ಡ್ ಗಳಲ್ಲಿ ತಮ್ಮ ಕುಟುಂಬದವರೊಂದಿಗೆ ರೆಡಿ ಮಾಡಿದ್ದಂತ ಅಗತ್ಯ ವಸ್ತುಗಳಾದ ಅಕ್ಕಿ, ತೊಗರಿ ಬೇಳೆ, ಸಕ್ಕರೆ, ಶಾವಿಗೆ, ಅಡುಗೆ ಎಣ್ಣೆಯನ್ನು ವಿತರಣೆ ಮಾಡಿದ್ದಾರೆ. ಈ ಮೂಲಕ ಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ, ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.
ಅಂದಹಾಗೇ ತಮ್ಮ ತಾಯಿ ಅಕ್ಕಮ್ಮನವರ ಸೇವಾರ್ಥವಾಗಿ 500 ಕಡು ಬಡ ಕುಟುಂಬಗಳಿಗೆ ತಿಂಗಳಿಗಾಗುವಷ್ಟು ಅಗತ್ಯ ದಿನಸಿ ವಸ್ತುಗಳನ್ನು ವಿತರಣೆ ಮಾಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಾಗೇಂದ್ರ ಅವರು ತಮ್ಮ ಕಾರಿನಲ್ಲಿ ಎಲ್ಲೆಡೆ ಸಂಚರಿಸಿ ಕಿಟ್ ವಿತರಿಸುತ್ತಿದ್ದಾರೆ.

ಬದುಕಿದರೆ ರಾಜನಂತೆ ಬದುಕು ದಾನ ಮಾಡಿದರೆ ಕರ್ಣನಂತೆ ಮಾಡು ಅನ್ನೋ ತಮ್ಮ ತಾಯಿಯ ಮಾತುಗಳನ್ನು ಅವರು ನೆನೆಸಿಕೊಳ್ಳುತ್ತಲೇ ದಾನ ಕಾರ್ಯಕ್ಕೆ ಇಳಿದಿದ್ದಾರೆ. ಈ ಮೂಲಕ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿ ನಾಗೇಂದ್ರ.ಪಿ ಅವರ ಕಾರ್ಯಕ್ಕೆ ಸರ್ವಜ್ಞ ನಗರದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Add Comment