BREAKING NEWS -ಪ್ರತಾಪ್ ಸಿಂಹಗೆ ಕೇಂದ್ರ ಸಚಿವ ಸ್ಥಾನ ?

1 Star2 Stars3 Stars4 Stars5 Stars (No Ratings Yet)
Loading...

ವಿಶ್ವ ಅರೋಗ್ಯ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆಯಾಗುತ್ತಿದ್ದಂತೆಯೇ, ಕರ್ನಾಟಕಕ್ಕೆ ಅದೃಷ್ಟ ಒಲಿಯುವ ಲಕ್ಷಣ ಕಾಣುತ್ತಿದೆ. ವಿಶ್ವ ಅರೋಗ್ಯ ಸಂಸ್ಥೆಗೂ ಕರ್ನಾಟಕಕ್ಕೂ ಏನು ಸಂಭಂದ ಅಂತ ಕೇಳ್ತಿದ್ದೀರಾ? ಇಲ್ಲೇ ಇರುವುದು ಸ್ವಾರಸ್ಯ.

ಕೆಟಿವಿಗೆ ಸಿಕ್ಕ ಖಚಿತ ಮೂಲಗಳ ಪ್ರಕಾರ, ಡಾ. ಹರ್ಷವರ್ಧನ್ ಅವರಿಂದ ತೆರವಾಗಲಿರುವ ಸಚಿವ ಸ್ಥಾನ ಕರ್ನಾಟಕಕ್ಕೆ ಒಲಿಯಲಿದೆ. ಕೇಂದ್ರ ಅರೋಗ್ಯ ಸಚಿವರಾದ ಹರ್ಷವರ್ಧನ್ ಅವರನ್ನು ಭಾರತ ವಿಶ್ವ ಅರೋಗ್ಯ ಸಂಸ್ಥೆಗೆ ಕಳುಹಿಸುತ್ತಿದೆ. ಭಾರತದಲ್ಲಿ ಪೋಲಿಯೋ ಮುಕ್ತ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಹರ್ಷವರ್ಧನ್ ಆ ಹುದ್ದೆಗೆ ಸೂಕ್ತ ವ್ಯಕ್ತಿ ಕೂಡ ಹೌದು. ಶನಿವಾರ ಅವ್ರು ಅರೋಗ್ಯ ಸಂಸ್ಥೆ ಚುನಾವನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ, ಗುರುವಾರ ಅವ್ರು ರಾಜೀನಾಮೆ ನೀಡಲಿದ್ದಾರೆ.

ಭಾರತದಲ್ಲಿ ಕೊರೋನ ಅಟ್ಟಹಾಸ ಇನ್ನೂ ನಿಂತಿಲ್ಲ. ಹೀಗಿರುವರ, ಮಹತ್ವದ ಅರೋಗ್ಯ ಸಚಿವ ಸ್ಥಾನ ಖಾಲಿ ಬಿಡುವಂತಿಲ್ಲ. ಹೀಗಾಗಿ, ತಕ್ಷಣವೇ ಅರೋಗ್ಯ ಸಚಿವರನ್ನು ನೇಮಿಸಲು ಪ್ರಧಾನಿ ಮೋದಿ ತೀರ್ಮಾನಿಸಿದ್ದಾರೆ. ಬಹುತೇಕ ಶುಕ್ರವಾರ ಅಥವಾ ಭಾನುವಾರವೇ ಹೊಸ ಅರೋಗ್ಯ ಸಚಿವರ ನೇಮಕವಾಗಲಿದೆ.

ಕರ್ನಾಟಕಕ್ಕೆ ಅದೃಷ್ಟ?

ಹೌದು, ಅರೋಗ್ಯ ಸಚಿವರಾಗಿ ಕರ್ನಾಟಕದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಆಯ್ಕೆಯಾಗಲಿದೆ ಎನ್ನಲಾಗ್ತಿದೆ. ಮೈಸೂರಿನಲ್ಲಿ ಕೊರೊನ ನಿವಾರಿಸಲು ಸಂಸದರ ಪಾತ್ರವು ದೊಡ್ಡದಾಗಿತ್ತು. ಪ್ರಖರ ಹಿಂದುತ್ವದ ಪ್ರತಿಪಾದಕರು ಆಗಿದ್ದಾರೆ. ವಿದ್ಯಾವಂತ ಹಾಗು ಸಾರ್ವಜನಿಕ ಜೀವನದಲ್ಲಿ ಅನುಭವಿಯಾಗಿರುವ ಸಿಂಹಗೆ ಈ ಹುದ್ದೆ ನೀಡಲು ಮೋದಿ-ಶಾ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಅರೋಗ್ಯ ಸಚಿವ ಸ್ಥಾನ ಸಿಗದಿದ್ದರೂ, ಬೇರೆ ಸಚಿವ ಸ್ಥಾನವಂತೂ ಖಚಿತ ಎನ್ನಲಾಗ್ತಿದೆ. ಸಂಜೆ ವೇಳೆಗೆ ಸ್ಪಷ್ಟ ತೀರ್ಮಾನ ಹೊರಬೀಳಲಿದೆ.

Add Comment