ಅನುಷ್ಕಾ ಶೆಟ್ಟಿಯ ಆ ಒಂದು ವಿಶ್ ಗೆ ಕನ್ನಡಿಗರು ಫುಲ್ ಫಿದಾ!

ನಟಿ ಅನುಷ್ಕಾ ಶೆಟ್ಟಿ ತಮ್ಮ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಕನ್ನಡದಲ್ಲಿ ಶುಭ ಕೋರುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಮಂಗಳೂರು ಮೂಲದ ನಟಿ ಅನುಷ್ಕಾ ಶೆಟ್ಟಿ ಸದ್ಯ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇವರಿಗೆ ಕನ್ನಡದ ಮೇಲೆ ಒಲವು ಎಷ್ಟಿದೆ ಅಂದ್ರೆ, ಇವರ ಕನ್ನಡಾಭಿಮಾನಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಇವರು ತಮ್ಮ ತಂದೆ ತಾಯಿಯ ಹುಟ್ಟುಹಬ್ಬ, ವಾರ್ಷಿಕೋತ್ಸವ ಹಾಗೂ ಯಾರಿಗೆ ಶುಭಾಶಯ ತಿಳಿಸಬೇಕೆಂದಿದ್ದರೂ ಕನ್ನಡದಲ್ಲಿಯೇ ಶುಭ ಕೋರುತ್ತಾರೆ. ಇಂದು ಅವರ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವಾಗಿದ್ದು, ಅನುಷ್ಕಾ ತಮ್ಮ ತಂದೆ-ತಾಯಿಗೆ ಕನ್ನಡದಲ್ಲೇ ಪ್ರೀತಿಯಿಂದ ಶುಭ ಕೋರಿದ್ದಾರೆ.

 

Add Comment