ಕಣ್ಣಿಲ್ಲದ ನಂದಿನಿ ಮಾಡಿರೋ ಈ ಕೆಲಸಕ್ಕೆ ಸಾವಿರ ಸಲಾಂ

1 Star2 Stars3 Stars4 Stars5 Stars (No Ratings Yet)
Loading...

ಮುಧೋಳ ಸರ್ಕಾರದಿಂದ ಆಗದೇ ಇರುವ ಸರ್ಕಾರಿ ಯೋಜನೆಗಳಿಂದ ದೂರ ಉಳಿದ ಶೋಷಿತರು ದಲಿತರು ದೇವದಾಸಿಯ ಕುಟುಂಬಗಳನ್ನು ಗುರುತಿಸಿ ಒಂದು ತಿಂಗಳಿಗೆ ಆಗುವಷ್ಟು ದಿನಸಿಯ ಕಿಟ್ಟ್ ಅನ್ನು ಬೆಂಗಳೂರಿನ್ ಆಕ್ಷನೇಡ್ ಸಂಸ್ಥೆಯ ಮುಧೋಳ ತಾಲೂಕ ಮೇಲ್ವಿಚಾರಕರಾದ ಶಿವಾನಂದ ಹಣಮಂತ ಮ್ಯಾಗೇರಿ ಹಾಗೂ ಸಂಸ್ಥೆಯ ರಿಜೀನಲ್ ಮ್ಯಾನೇಜರ್ ನಂದೀನಿ ಮೇಡಂ ಅವರ ಮಾರ್ಗದರ್ಶನದಲ್ಲಿ ಮುಧೋಳ ತಾಲೂಕಿನ ಸೋರಗಾಂವ್. ಬರಗಿ. ಗುಲಗಾಲ ಜಂಬಗಿ. ಒಂಟಗೋಡಿ. ನಾಗರಾಳ. ಮಾಲಾಪೂರ ಸೇರಿದಂತೆ ಶೋಷಿತ ವರ್ಗದ ನೂರಾರು ಕುಟುಂಬಗಳಿಗೆ ನೆರವಾದರು…

ಕಾಣದ ಕೈಗಳಿಂದ ಬಡವರಿಗೆ ಮನೆ ಬಾಗಿಲಿಗೆ ನೆರವಾದ ಯುವಕ ಶಿವಾನಂದ ಮ್ಯಾಗೇರಿ ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಹೆಮ್ಮೆ ಇದೆ ಎಂದು ಹೇಳುತ್ತಾ ನಮ್ಮ ಸಂಸ್ಥೆ 20 ವರ್ಷಗಳಿಂದ ಸಮಾಜಮುಖಿಯಾಗಿ ಸೇವೆ ಮಾಡುತ್ತಾ ಬಂದಿದ್ದು ನೆರೆ ಸಂತ್ರಸ್ತರಿಗೆ ಸಹ ಕಿಟ್ಟ್ ವಿತರಣೆ ಮಾಡಿದ್ದೇವೆ ಸ್ಕೂಲ್ ಮಕ್ಕಳಿಗೆ ಬ್ಯಾಗ್ ವಿತರಣೆ ಸೇರಿದಂತೆ ಬಡವರ ಕಷ್ಟಗಳಿಗೆ ನಮ್ಮ ಸಂಸ್ಥೆಯ ನಂದೀನಿ ಮೇಡಂ ಸಹಾಯ ಮಾಡುತ್ತಲೇ ಬಂದಿದ್ದಾರೆ ಎಂದರು

ಇನ್ನೂ ನಮ್ಮ ಸಂಸ್ಥೆ ಎಂದೆಂದಿಗೂ ಶೋಷಿತರು ವರ್ಗದವರ ಪಾಲಿಗೆ ಆಸರೆಯಾಗಿರುತ್ತದೆ ಎಂದರು ಇನ್ನೂ ಸೊರಗಾಂವ್ ಗ್ರಾಮದಲ್ಲಿ ಕಿಟ್ಟ್ ವಿತರಣೆ ಮಾಡಿದ ಮುಧೋಳ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಕೊರಡ್ಡಿ ಹಾಗೂ ಪಿಡಿಓ ಮತ್ತು ಗ್ರಾಮದ ಮುಖಂಡರು ಈ ಕಾರ್ಯಕ್ರಮ ಭಾಗಿಯಾಗಿದ್ದರು…

Add Comment