BREAKING NEWS- ಮತ್ತೊಂದು ಜಾಗತಿಕ ಒಕ್ಕೂಟಕ್ಕೆ ಭಾರತ ಎಂಟ್ರಿ ?

1 Star2 Stars3 Stars4 Stars5 Stars (1 votes, average: 1.00 out of 5)
Loading...

ವಿಶ್ವಮಟ್ಟದಲ್ಲಿ ಭಾರತದ ಮಾನ್ಯತೆ ಮತ್ತಷ್ಟು ಹೆಚ್ಚಾಗಲಿದೆ. ಬಲಾಢ್ಯ ಆರ್ಥಿಕ, ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತ ಈಗ ಜಗತ್ತಿನ ದಿಕ್ಕು-ದಿಶೆಗಳನ್ನು ನಿರ್ಧರಿಸುವ ಆಯಕಟ್ಟಿನ ಜಾಗಗಳಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದೆ. ಇದೀಗ ಜಗತ್ತಿನ ಬಲಾಢ್ಯ ಆರ್ಥಿಕ ಶಕ್ತಿಗಳ ಗುಂಪೆಂದು ಗುರುತಿಸಲ್ಪಡುವ ಜಿ-೭ ಒಕ್ಕೂಟದಲ್ಲಿ ಶಾಶ್ವತ ಸ್ಥಾನ ಗಳಿಸುವ ಸೂಚನೆಗಳು ಲಭ್ಯವಾಗಿವೆ.

ಭಾರತಕ್ಕೆ ಪರಮಾಪ್ತ ಸ್ಥಾನಮಾನ ಕೊಟ್ಟಿರುವ ಅಮೇರಿಕ, ಇದೀಗ ಚೀನಾವನ್ನು ಬಗ್ಗು ಬಡಿಯಲು ಭಾರತಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದೆ. ಅಲ್ಲದೆ, ಮಹತ್ವದ ನಿರ್ಧಾರವೊಂದರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕಾಗಿ ಜಾಗತಿಕ ಸಭೆಯೊಂದನ್ನೇ ಮುಂದೂಡಿದ್ದಾರೆ. ಇದೆ ಜುಲೈ ತಿಂಗಳಿನಲ್ಲಿ ಅಮೇರಿಕಾದಲ್ಲಿ ಜಿ-೭ ರಾಷ್ಟ್ರಗಳ ಶೃಂಗ ಸಭೆ ನಡೆಯಬೇಕಿತ್ತು. ಆದರೆ ಅದನ್ನೀಗ ಟ್ರಂಪ್ ಸೆಪ್ಟೆಂಬರ್ ಅಥವಾ ಪ್ರಧಾನಿ ಮೋದಿ ಸಮಯ ನಿಗದಿಪಡಿಸುವವರೆಗೆ ಮುಂದೂಡಿದ್ದಾರೆ. ವಿಶ್ವದ ಮೊದಲ ಖಾಸಗಿ ಗಗನಯಾನಕ್ಕೆ ಸಾಕ್ಷಿಯಾಗಿ ಹಿಂದಿರುಗುವ ವೇಳೆ ಮಾತನಾಡಿದ ಟ್ರಂಪ್, ಜಿ-೭ ಸಭೆಯನ್ನು ಸೆಪ್ಟೆಂಬರ್ ಅಥವಾ ಅನಿರ್ದಿಷ್ಟಾವಧಿ ವರೆಗೆ ಮುಂದೂಡಿರುವುದಾಗಿ ಘೋಷಿಸಿದ್ದಾರೆ.

ಭಾರತದ ಪಾಲ್ಗೊಳ್ಳುವಿಕೆಯಿಲ್ಲದೆ ಜಿ-೭ ಸಭೆಗೆ ಅರ್ಥವಿರುವುದಿಲ್ಲ. ಭಾರತ, ಆಸ್ಟ್ರೇಲಿಯಾ ಮತ್ತು ರಷ್ಯಾಗಳು ಪಾಲ್ಗೊಳ್ಳದಿದ್ದರೆ ನೀತಿ ನಿರೂಪಣೆ ಸಾಧ್ಯವಿಲ್ಲ. ಹೀಗಾಗಿ ಭಾರತ ಆಹ್ವಾನಿತ ರಾಷ್ಟ್ರವಾಗಿ ಪಾಲ್ಗೊಳ್ಳಬೇಕು. ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಭಾರತ, ಶೀಘ್ರವೇ ಕೊರೊನ ಮುಕ್ತವಾಗಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಥವಾ ಆ ಬಳಿಕ ಭಾರತದ ಲಭ್ಯತೆ ನೋಡಿಕೊಂಡು ಸಭೆ ಆಯೋಜಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಮತ್ತೊಂದು ಮಹತ್ವದ ಹೇಳಿಕೆ ನೀಡಿರುವ ಟ್ರಂಪ್, ಜಿ-೭ ಒಕ್ಕೂಟ ಪುನರ್ ರಚಿಸುವ ಅವಶ್ಯಕೆತೆ ಇದೆ. ಈಗ ಜಗತ್ತಿನ ಆರ್ಥಿಕ ಸ್ಥಿತಿ ಬದಲಾಗಿದೆ.ಹೊಸ ದೇಶಗಳು ಶಕ್ತಿಶಾಲಿಯಾಗಿ ಹೊರಹೊಮ್ಮಿವೆ. ಭಾರತದಂತಹ ರಾಷ್ಟ್ರಗಳು ಈ ಒಕ್ಕೂಟದಲ್ಲಿ ಶಾಶ್ವತ ಸ್ಥಾನ ಪಡೆಯುವ ಅಗತ್ಯವಿದೆ ಎಂದು ಟಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ.

ಜಿ-೭ ಶೃಂಗ ಸಭೆಯಲ್ಲಿ ಭಾರತ ಪಾಲ್ಗೊಳ್ಳುವುದು ಇದೆ ಮೊದಲ ಬಾರಿಯೇನಲ್ಲ. ಆದರೆ ಭಾರತದ ಪಾಲ್ಗೊಳ್ಳುವಿಕೆಗಾಗಿಯೇ ಸಭೆ ಮುಂದೂಡಲ್ಪಡುತ್ತಿರುವುದು ಇದೆ ಮೊದಲ ಬಾರಿಯಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.

Add Comment