BIG BREAKING -ಕೃಷಿಕರ 50 ವರ್ಷಗಳ ಕನಸು ಈಡೇರಿಸಿದ ಮೋದಿ

1 Star2 Stars3 Stars4 Stars5 Stars (No Ratings Yet)
Loading...

ಭಾರತದ ಅನ್ನದಾತರ ಭಾರೀ ದೊಡ್ಡ ಕನಸೊಂದು ಈಡೇರಿದೆ. ೫ ದಶಕಗಳ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅಸ್ತು ಎಂದಿದ್ದಾರೆ. ಇದರೊಂದಿಗೆ ಮುಂಗಾರು ಆರಂಭಕ್ಕೆ ಮುನ್ನವೇ ಕೃಷಿಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ಹೌದು, ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಮೋದಿಯವರು ರೈತರ ಬಹುದೊಡ್ಡ ಬೇಡಿಕೆಗೆ ಅಸ್ತು ಎಂದಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲು ಮೋದಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಮುಂದೆ ಅಗತ್ಯ ವಸ್ತುಗಳ ಕಾಯ್ದೆ ಕೃಷಿ ಸ್ನೇಹಿಯಾಗಿರಲಿದೆ.

ಬಹುದೊಡ್ಡ ಸುಧಾರಣಾ ಕ್ರಮ ಘೋಷಿಸಿದ ಸರಕಾರ, ಧಾನ್ಯಗಳು, ಖಾದ್ಯ ತೈಲ, ಬೇಳೆಕಾಳುಗಳು, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಅಗತ್ಯ ಸರಕುಗಳ ಕಾಯ್ದೆಯಿಂದ ಹೊರಗಿಡುವುದಾಗಿ ಪ್ರಕಟಿಸಿದೆ. ಇದರೊಂದಿಗೆ ಆಲೂಗಡ್ಡೆ ಈರುಳ್ಳಿ ಮತ್ತು ಧಾನ್ಯ ಬೇಳೆ ಬೆಳೆಗಾರರಿಗೆ ಜಾಕ್ ಪಾಟ್ ಹೊಡೆದಿದೆ.

ಕೇಂದ್ರದ ಈ ತೀರ್ಮಾನದಿಂದಾಗಿ, ರೈತರು ಮಧ್ಯವರ್ತಿಗಳು ಮತ್ತು ಎಪಿಎಂಸಿ ಮರ್ಜಿ ಕಾಯಬೇಕಾಗಿಲ್ಲ. ಈ ವಸ್ತುಗಳನ್ನು ಯಾರು ಹೆಚ್ಚು ಬೆಲೆ ಕೊಡುತ್ತಾರೋ ಅವರಿಗೆ ಮಾರಲು ರೈತರು ಈಗ ಸ್ವತಂತ್ರರಾಗಿದ್ದಾರೆ. ಅಲ್ಲದೆ, ವಿದೇಶಗಳಿಗೆ ನೇರವಾಗಿ ರಫ್ತು ಮಾಡಬಹುದಾಗಿದೆ. ಈ ಎಲ್ಲಾ ವಸ್ತುಗಳು ಅಗತ್ಯ ಸರಕುಗಳು ಕಾಯ್ದೆಯಡಿ ಬರುವುದರಿಂದ, ರೈತರು ತಮ್ಮಿಚ್ಛೆಯಂತೆ ಮಾರುವ ಹಾಗಿರಲಿಲ್ಲ. ಅನಿವಾರ್ಯವಾಗಿ ಸರಕಾರಿ ಗೋದಾಮುಗಳಿಗೆ ಹಾಕಬೇಕಿತ್ತು. ಅಷ್ಟೇ ಅಲ್ಲ, ಹೆಚ್ಚು ಫಸಲು ಬಂದಿದ್ದರೂ ತುರ್ತು ಸಂದರ್ಭಗಳಿಗಾಗಿ ಕಾಯ್ದಿರಿಸಲು ಎಪಿಎಂಸಿಗಳಿಗೆ ನೀಡಬೇಕಿತ್ತು.

ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಮುಂದಾಗಿರುವುದರಂದ, ತುರ್ತು ಪರಿಸ್ಥಿತಿ ಹೊರತುಪಡಿಸಿ, ಸಾಮಾನ್ಯ ಕಾಲದಲ್ಲಿ ರೈತರು ತಮ್ಮ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಬಹುದಾಗಿದೆ. ಇದು ರೈತರಿಗೆ ಹೆಚ್ಚು ಆದಾಯ ಪಡೆಯಲು ನೆರವಾಗಲಿದೆ.

Add Comment