ಡಿಕೆಶಿ ಮಗಳಿಗೆ ಮದ್ವೆ ಫಿಕ್ಸ್ – ಹುಡುಗ ಯಾರು ಗೊತ್ತಾ?

1 Star2 Stars3 Stars4 Stars5 Stars (No Ratings Yet)
Loading...

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯಾಗೆ ಮದುವೆ ಫಿಕ್ಸ್ ಆಗಿದೆ. ಕೊರೊನ ಎಫೆಕ್ಟ್ ಕಡಿಮೆ ಆದ್ಮೇಲೆ ಅದ್ದೂರಿಯಾಗಿ ಬೆಂಗಳೂರಿನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಈ ಬಗ್ಗೆ ಒಂದು ಹಂತದ ಮಾತುಕತೆಗಳು ಈಗಾಗಲೇ ನಡೆದಿದ್ದು, ಬಿಜೆಪಿ ನಾಯಕ ಎಸ್ ಎಂ ಕೃಷ್ಣ ನೇತೃತ್ವದಲ್ಲಿ ಎಲ್ಲವೂ ನಡೆಯುತ್ತಿವೆ.

ಕರ್ನಾಟಕ ಕಾಂಗ್ರೆಸ್ ನ ಹೆಬ್ಬುಲಿ ಎಂದೇ ಖ್ಯಾತಿ ಪಡೆದಿರೋ ಡಿಕೆಶಿ ಮಗಳಿಗೆ ಮದುವೆ ನಡೆಯಲಿದೆ. ಹಿರಿಯ ಪುತ್ರಿ ಐಶ್ವರ್ಯರನ್ನು ತಮ್ಮ ರಾಯಕೀಯ ಗುರುವಿನ ಕುಟುಂಬಕ್ಕೆ ಧಾರೆ ಎರೆದು ಕೊಡಲು ಡಿಕೆಶಿ ತೀರ್ಮಾನಿಸಿದ್ದಾರೆ. ಕೃಷ್ಣಾ ಅಳಿಯ ಕಾಫೀ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ ಹೆಗ್ಡೆ ಹಿರಿಯ ಪುತ್ರ ಅಮರ್ಥ್ಯ ಹೆಗ್ಡೆಗೆ ಮದುವೆ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ೧೫ ದಿನಗಳ ಹಿಂದೆ ಕೃಷ್ಣಾ ನೇತೃತ್ವದಲ್ಲಿ ಉಭಯ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿದ್ದಾರೆ.

ಡಿಕೆಶಿ ಮತ್ತು ಸಿದ್ದಾರ್ಥ್ ಆತ್ಮೀಯರಾಗಿದ್ದರು ಅಲ್ಲದೆ ಉದ್ಯಮದಲ್ಲಿ ಪಾಲುದಾರರು ಆಗಿದ್ದರು. ಇದೀಗ ಈ ಸ್ನೇಹವನ್ನು ಸಂಭಂದವಾಗಿ ಬೆಳೆಸಲು ಡಿಕೆಶಿ ತೀರ್ಮಾನಿಸಿದ್ದಾರೆ.

Add Comment