WAR BREAKING -ಯುದ್ಧ ಘೋಷಿಸಲು ರೆಡಿ -ಕಾಶ್ಮೀರ ಜನತೆಗೆ ಮೋದಿ ಆದೇಶ -EXCLUSIVE

ಕಾಲು ಕೆರೆದು ಜಗಳಕ್ಕೆ ಬಂದಿರೋ ಚೀನಾದ ಸೊಂಟ ಮುರಿಯಲು ಮೋದಿ ರೆಡಿಯಾಗಿದ್ದಾರಾ ? ಇನ್ನೆಂದೂ ಭಾರತದ ತಂಟೆಗೆ ಬಾರದಂತೆ ಮೋದಿ ಮಾಡಿ ಬಿಡ್ತಾರಾ? KTV KANNADAಕ್ಕೆ ಸಿಕ್ಕಿರೋ ಮೋದಿ ಸರಕಾರದ ಆದೇಶ ಪ್ರತಿಯೊಂದು ಭಾರತ ಯುದ್ಧ ಘೋಷಿಸುವ ಮುನ್ಸೂಚನೆ ನೀಡುತ್ತಿದೆ. ಕನ್ನಡದ ಯಾವ ಮಾಧ್ಯಮಗಳಿಗೂ ದೊರಕದ exclusive ಆದೇಶ ಪ್ರತಿಗಳನ್ನು ಕೆಟಿವಿ ನ್ಯೂಸ್ ಬಹಿರಂಗಪಡಿಸುತ್ತಿದೆ.

ಜಮ್ಮುಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟನಂಟ್ ಗವರ್ನರ್ ಅಂದರೆ ಲಡಾಕ್ ಗವರ್ನರ್ ಹೊರಡಿಸಿರೋ ಆದೇಶದ ೨ ಪ್ರತಿಗಳು ಯುದ್ಧದ ಮುನ್ಸೂಚನೆ ನೀಡುತ್ತಿವೆ. ಮೊದಲನೇ ಆದೇಶವು ನಾಗರಿಕರನ್ನು ಉದ್ದೇಶಿಸಿ ಹೊರಡಿಸಲಾಗಿದೆ. ಜಮ್ಮು ಕಾಶ್ಮೀರದ ಇತಿಹಾಸದಲ್ಲಿಯೇ ಮೊದಲಬಾರಿಗೆ ಎರಡು ತಿಂಗಳಿಗಾಗುವಷ್ಟು ಗ್ಯಾಸ್ ಸಿಲಿಂಡರ್ ಸ್ಟಾಕ್ ಮಾಡಿ ಇಟ್ಟಿಕೊಳ್ಳುವಂತೆ ಆದೇಶಿಸಲಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ಬಗೆಯ ಆದೇಶ ಹೊರಡಿಸಲಾಗುತ್ತಿತ್ತು. ಭಾರೀ ಹಿಮಪಾತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಾಗ ತೊಂದರೆಯಾಗದಿರಲಿ ಎಂದು ಪ್ರತಿವರ್ಷ ಈ ಆದೇಶ ನೀಡಲಾಗುತ್ತಿತ್ತು. ಆದರೆ ಈ ಬಾರಿ, ಬೇಸಿಗೆಯಲ್ಲಿಯೇ ಸಿಲಿಂಡರ್ ಸ್ಟಾಕ್ ಮಾಡಿಕೊಳ್ಳಿ ಎಂದು ಆದೇಶ ನೀಡಲಾಗಿದೆ. ಅಷ್ಟೇ ಅಲ್ಲ, ಎರಡು ತಿಂಗಳಿಗಾಗುವಷ್ಟು ಇಂಧನ ಮತ್ತು ಅನಿಲವನ್ನು ಗೋಡೌನ್ ಮತ್ತು ಫಿಲ್ಲಿಂಗ್ ಪ್ಲಾಂಟ್ ಗಳಲ್ಲಿ ಕಡ್ಡಾಯವಾಗಿ ಸ್ಟಾಕ್ ಮಾಡಬೇಕೆಂದು ಅನಿಲ ಮತ್ತು ತೈಲ ಪೂರೈಕೆ ಕಂಪನಿಗಳಿಗೆ ಸರಕಾರ ಆದೇಶ ನೀಡಿದೆ.

ಮತ್ತೊಂದು ಆದೇಶದಲ್ಲಿ, ಲಡಾಖ್ ಭಾಗದ ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಕ್ಷಣವೇ ಶಾಲಾ ಕಾಲೇಜುಗಳನ್ನು ತೊರೆಯಬೇಕು ಮತ್ತು, ಕಟ್ಟಡವನ್ನು ಸೇನೆಯ ಸುಪರ್ದಿಗೆ ನೀಡಬೇಕು ಎಂದು ತುರ್ತು ಆದೇಶ ಹೊರಡಿಸಲಾಗಿದೆ. ಸೇನಾಪಡೆಗಳ ಜಮಾವಣೆಗಾಗಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಸರಕಾರದ ಎರಡು ಆದೇಶಗಳ ಬೆನ್ನಲ್ಲೇ ಕಾಶ್ಮೀರ ಮತ್ತು ಲಡಾಕ್ ನಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಮೋದಿ ಸಾಮರ್ಥ್ಯದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿರೋ ಲಡಾಕ್ ಜನರಂತೂ ಚೀನಾ ತಂಟೆಯಿಂದ ಶಾಶ್ವತ ಮುಕ್ತಿ ಸಿಗಲಿ ಅಂತ ಪ್ರಾರ್ಥಿಸ್ತಿದ್ದಾರೆ. ಆದ್ರೆ, ಜೀವದ ಭಯವಂತೂ ಎಲ್ಲರನ್ನು ಕಾಡತೊಡಗಿದೆ. ಸರಕಾರದ ಸಿದ್ಧತೆಗಳನ್ನು ಗಮನಿಸಿದರೆ, ಮೋದಿ ಚೀನಾದ ಮೇಲೆ ಯುದ್ಧಕ್ಕೆ ರೆಡಿಯಾಗ್ತಿದ್ದಾರಾ ಅನ್ನೋ ಪ್ರಶ್ನೆ ಕಾಡತೊಡಗಿದೆ.

Add Comment