ನರ್ಸಿಂಗ್ ಕಾಲೇಜು ಪರಿಶೀಲನೆಗೆ ವಿಧಾನಪರಿಷತ್ ಉಪ ಸಮಿತಿ ರಚಿಸಿರುವುದಲ್ಲಿ ತಪ್ಪಿಲ್ಲ: ಹೈಕೋರ್ಟ್

0

ಬೆಂಗಳೂರು: ನರ್ಸಿಂಗ್ ಕಾಲೇಜು ಪರಿಶೀಲನೆಗೆ ವಿಧಾನಪರಿಷತ್ ಉಪ ಸಮಿತಿ ರಚಿಸಿರುವುದಲ್ಲಿ ತಪ್ಪಿಲ್ಲ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಹೇಳಿದೆ. ವಿಧಾನಪರಿಷತ್ ರಚನೆ ಮಾಡಿದ್ದ ಉಪ ಸಮಿತಿಯನ್ನು ಎತ್ತಿ ಹಿಡಿದಿದ್ದ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಸ್ಟೇಟ್ ಆಸೋಸಿಯೇಷನ್ ಆಫ್ ಮ್ಯಾನೇಜ್‌ಮೆಂಟ್ ಆಫ್ ನರ್ಸಿಂಗ್ ಮತ್ತು ಅಲ್ಲೈಡ್ ಹೆಲ್ತ್ ಸೈನ್ಸ್ ಇನ್‌ಸ್ಟಿಟ್ಯೂಷನ್ ಮೇಲ್ಮನವಿ ಸಲ್ಲಿಸಿದ್ದವು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ,

ವಿಧಾನಪರಿಷತ್ ಉಪ ಸಮಿತಿ ರಚನೆ ಮಾಡಿರುವ ಪ್ರಕ್ರಿಯೆಯಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ವಿಧಾನ ಪರಿಷತ್ ನರ್ಸಿಂಗ್ ಕಾಲೇಜುಗಳ ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚನೆ ಮಾಡಿಲ್ಲ. ಅದಕ್ಕೆ ಬದಲಾಗಿ ಕಾಲೇಜುಗಳ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದಕ್ಕಾಗಿ ರಚಿಸಲಾಗಿದೆ. ಈ ಉಪ ಸಮಿತಿಗೆ ಕಾಲೇಜುಗಳಲ್ಲಿನ ಮೂಲಸೌಕರ್ಯ ಸೇರಿದಂತೆ ಇತರ ಸಮಸ್ಯೆಗಳ ಪರಿಶೀಲನೆ ನಡೆಸಿ ವರದಿ ನೀಡುವ ಅಧಿಕಾರ ಮಾತ್ರವಿದೆ. ಆದರೆ, ಆ ವರದಿಯಲ್ಲಿರುವ ಅಂಶಗಳನ್ನು ಪರಿಗಣಿಸಿ ಕ್ರಮಕ್ಕೆ ಮುಂದಾಗುವ ಅಧಿಕಾರ ಇಲ್ಲ ಎಂದು ತಿಳಿಸಿದೆ. ಜೊತೆಗೆ, ಏಕಸದಸ್ಯ ಪೀಠ ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಈ ಆದೇಶವನ್ನು ನೀಡಿದೆ.

About Author

Leave a Reply

Your email address will not be published. Required fields are marked *

You may have missed