ಕ್ರೇಜಿ ಕ್ವೀನ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಚಾಲೆಂಜಿಂಗ್ ಸ್ಟಾರ್

ಕ್ರೇಜಿ ಕ್ವೀನ್ ನಟಿ ರಕ್ಷಿತಾ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಸಿಕೊಳ್ಳುತ್ತಿದ್ದಾರೆ. ಇವರು 31 ಮಾರ್ಚ್ 1983ರಲ್ಲಿ ಜನಿಸಿದ್ದು, 2002ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ‘ಅಪ್ಪು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ದರ್ಶ್‍ನ್, ಉಪೇಂದ್ರ, ಸುದೀಪ್, ಅದಿತ್ಯ ಹೀಗೆ ಹಲವಾರು ನಟರ ಜೊತೆ ತಮ್ಮ ಸ್ಕ್ರೀನ್ ಶೇರ್ ಮಾಡಿರುವ ಕ್ರೇಜಿ ಕ್ವೀನ್ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬದ ಪ್ರಯುಕ್ತ ರಕ್ಷಿತಾ ಅವರಿಗೆ ವಿಶ್ ಮಾಡಿದ್ದಾರೆ.

ಕೆ.ಟಿವಿ ಕನ್ನಡ

Add Comment