ನಟ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿಗೆ ಕೊರೋನಾ ಪಾಸಿಟಿವ್

ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಅವರು ಬರೆದುಕೊಂಡಿದ್ದು, ನನಗೂ, ನನ್ನ ಪತ್ನಿಗೂ ಕೋವಿಡ್ ಸೋಂಕು ತಗುಲಿದ್ದು, ವೈದ್ಯರು ಸೂಚಿಸಿರುವ ಔಷಧಿಯನ್ನ ತೆಗೆದುಕೊಳ್ಳುತ್ತಿದ್ದೇವೆ. ಹಾಗೆ ಕೊರೋನಾಗೆ ಸಂಬಂಧಿಸಿದ ಪರೀಕ್ಷೆಗೂ ಒಳಗಾಗಿದ್ದೇವೆ. ಇಬ್ಬರು ಜೊತೆಯಾಗಿದ್ದು, ಯಾರೂ ಅತಂಕಕ್ಕೊಳಗಾಗೋದು ಬೇಡ. ನಿಮ್ಮ ಪ್ರೀತಿ ಮತ್ತು ಕಾಳಜಿ ನಮ್ಮ ಮೇಲಿದೆ. ಧನ್ಯವಾದಗಳು ಎಂದು ಪ್ರಜ್ವಲ್ ಬರೆದುಕೊಂಡಿದ್ದಾರೆ.

 

Add Comment