ಬೆಂಗಳೂರು: ಬಿಜೆಪಿ ಸ್ಥಾಪನೆಯಾದ ದಿನದಂದೇ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡ ಕರಿಸಂದ್ರ ವಾರ್ಡ್ ಬಿಜೆಪಿ ಮುಖಂಡ ಲಕ್ಷ್ಮೀಕಾಂತ್

ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕರಿಸಂದ್ರ ವಾರ್ಡಿನ ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್ ಅವರ ಹುಟ್ಟುಹಬ್ಬವನ್ನು ಅವರ ಪತ್ನಿಯಾದ ಬಿಜೆಪಿ ಕಾರ್ಪೊರೇಟರ್ ಯಶೋಧಾ ಲಕ್ಷ್ಮೀಕಾಂತ್ ಅವರು ಕೊರೊನಾ ವೈರಸ್ ಸೋಂಕಿನ ಕಾರಣ ಈ ಬಾರಿ ಸರಳವಾಗಿ ಅಚರಿಸಲು ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್ ಅವರು “ಕೊರೊನಾ ಸೋಂಕಿನ ಕಾರಣ ಈ ಬಾರಿ ನಾನು ಸರಳವಾಗಿ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. ಈ ದಿನ ಬಿಜೆಪಿ ಪಕ್ಷವು 1980ರಲ್ಲಿ ರಾಷ್ಟ್ರದಲ್ಲಿ ಸ್ಥಾಪನೆಯಾದ ಶುಭ ದಿನವಾಗಿದೆ. ಇದೇ ಶುಭ ದಿನದಂದು ನನ್ನ ಹುಟ್ಟುಹಬ್ಬ ಇರುವುದು ನನಗೆ ಬಹಳ ಸಂತೋಷ ತಂದಿದೆ. ಈ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ನನಗೆ ಬೆಂಬಲಕ್ಕಿರುವ ನನ್ನ ಧರ್ಮಪತ್ನಿ ಬಿಜೆಪಿ ಕಾರ್ಪೊರೇಟರ್ ಯಶೋಧಾ ನೇತೃತ್ವದಲ್ಲಿ ಈ ಭಾಗದ ಸ್ಥಳೀಯ ಬಿಜೆಪಿ ಮುಖಂಡರು,ಕಾರ್ಯಕರ್ತರು ಬಂದು ನನಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.
ನಾನು ಕರಿಸಂದ್ರ ವಾರ್ಡಿನಲ್ಲಿ ಬಿಜೆಪಿ ಮುಖಂಡನಾಗಿ ನನ್ನ ಪತ್ನಿ ಬಿಜೆಪಿ ಕಾರ್ಪೊರೇಟರ್ ಳನ್ನಾಗಿ ಗೆಲ್ಲಿಸಿಕೊಳ್ಳಲು ಸಚಿವ ಆರ್.ಅಶೋಕ್ ಅವರ ನಾಯಕತ್ವದಲ್ಲಿ ನಾವು ಪಕ್ಷವನ್ನು ಸಂಘಟಿಸಿ ಬಿಬಿಎಂಪಿ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು ಕಾರಣವಾಗಿದೆ,ಇದಕ್ಕಾಗಿ ನಾನು ಕಂದಾಯ ಸಚಿವರಾದ ನಮ್ಮ ನಾಯಕ ಆರ್.ಅಶೋಕ್ ಅವರ ಸಹಕಾರ,ಬೆಂಬಲವನ್ನು ಯಾವತ್ತೂ‌ ಮರೆಯುವಂತಿಲ್ಲ, ಜೊತೆಗೆ ನನ್ನ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿರುವ ಎಲ್ಲರಿಗೂ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದೆ ಬಿಜೆಪಿ ಮುಖಂಡನಾಗಿ ಕರಿಸಂದ್ರ ವಾರ್ಡಿನಲ್ಲಿ ಮತ್ತಷ್ಟು ಉತ್ತುಂಗ ಸ್ಥಾನಕ್ಕೆ ಬೆಳೆಯಲು ಮತದಾರರ ಆಶೀರ್ವಾದವನ್ನು ನಾನು ಬೇಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಲಕ್ಷ್ಮಿಕಾಂತ್ ಅವರು ತಮ್ಮ ಹುಟ್ಟುಹಬ್ಬದ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಜನಸ್ತೋಮಕ್ಕೆ ಧನ್ಯವಾದಗಳನ್ನು ಹೇಳಿದರು.
ಬಿ.ಸೌಮ್ಯ
KTVKANNADA
ಕರಿಸಂದ್ರ

Add Comment