ಬಂಗಾರಪೇಟೆ: ಚಿಗುರೊಡೆದ ಜಾತ್ಯಾತೀತ ಜನತಾದಳದ ಸಂಘಟನಾ ಕಾರ್ಯ

ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯಾತೀತ ಜನತಾದಳ ಪಕ್ಷವು ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದೊಂದಿಗೆ ಹಾಗೂ ಇತರ ಪಕ್ಷಗಳಿಗಿಂತ ಒಂದು ಹೆಜ್ಜೆ ಮುನ್ನುಗ್ಗಿ ಗ್ರಾಮ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಮಾಡುತ್ತಿದೆ.
ಇಂದು ಮಾವಹಳ್ಳಿ ಮತ್ತು ಹುನಕುಂದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಮಲ್ಲೇಶ್ ಬಾಬುರವರು ಮಾತನಾಡಿ “ನಮ್ಮ ಕ್ಷೇತ್ರವು ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಮತ್ತು ದಿವಾಳಿಯಾಗಿರುವ ಕ್ಷೇತ್ರವಾಗಿದೆ. ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿಪೂರಕ ಕೆಲಸಗಳು ಆಗದೆ ಕ್ಷೇತ್ರವು ಅಭಿವೃದ್ಧಿಯಿಂದ ಕುಂಠಿತಗೊಂಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ಹಾವಳಿಯಿಂದ ರಾಜ್ಯವೇ ತತ್ತರಿಸಿದ್ದು ರಾಜ್ಯವನ್ನು ರಾಮರಾಜ್ಯ ಮಾಡಬೇಕಾದರೆ, ರಾಜ್ಯಕ್ಕೆ ಹೊಸ ಹುರುಪನ್ನು ಕೊಡಬೇಕಾದರೆ, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕಾದರೆ ಮತ್ತು ಮರುಭೂಮಿಯಂತೆ ಬರಡಾಗಿರುವ ನಮ್ಮ ಜೀವನವು ಹಚ್ಚಹಸಿರು ಆಗಬೇಕಾದರೆ ಕುಮಾರಣ್ಣನನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬೇರೆ ಬೇರೆಯಾಗಿದ್ದರೂ ರಾಜ್ಯಕ್ಕೆ ಒಬ್ಬರೇ ಅಭ್ಯರ್ಥಿ ಅದು ಕುಮಾರಣ್ಣನವರು ಮಾತ್ರ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಮುಂಬರುವ ದಿನಗಳಲ್ಲಿ ಅವರೇ ಶಾಸಕರು ಮತ್ತು ಮುಖ್ಯಮಂತ್ರಿಗಳು. ಆದ್ದರಿಂದ ಅವರ ಕೈ ಬಲಪಡಿಸುವ ಕಾರ್ಯವನ್ನು ನಾವು ನೀವು ಎಲ್ಲರೂ ಸೇರಿ ಸಂಘಟನೆ ಮಾಡುವ ಮೂಲಕ ಶಕ್ತಿಯನ್ನು ತುಂಬಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಹರಟಿ ಬಾಬು, ವಿಶ್ವನಾಥ್, ಮರಗಲ್ ಮುನಿಯಪ್ಪ, ರಾಮಚಂದ್ರ, ಪ್ರವೀಣ್, ಆಕಾಶ ಗೌಡ, ಕಾಮಂಡಹಳ್ಳಿ ಬಾಬು ಇನ್ನಿತರರು ಭಾಗವಹಿಸಿದ್ದರು.
ಜಿ.ಆರ್.ಆಕಾಶ್
KTVKANNADA
ಬಂಗಾರಪೇಟೆ

Add Comment