ಸಿಂಧನೂರು: ಅಬಕಾರಿ ಪೊಲೀಸರ ಮಿಂಚಿನ ದಾಳಿ-60 ಲೀ. ಕಲಬೆರಕೆ ಸೇಂದಿ-2 ಬೈಕ್ ಸೀಸ್-ಮೂವರು ಅರೆಸ್ಟ್

ದಿನಾಂಕ: 07-04-2021 ರಂದು 2021ನೇ ಸಾಲಿನ ಮಸ್ಕಿ ವಿಧಾನ ಸಭಾ ಉಪಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ, ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಕಲಬುರಗಿ ವಿಭಾಗ,ಕಲಬುರಗಿ ರವರ ಮಾರ್ಗದರ್ಶನದಲ್ಲಿ , ಮಾನ್ಯ ಅಬಕಾರಿ ಉಪಆಯುಕ್ತರು, ರಾಯಚೂರು ಜಿಲ್ಲೆ ರವರ ಆದೇಶದಂತೆ, ಮಾನ್ಯ ಅಬಕಾರಿ ಉಪ ಅಧೀಕ್ಷಕರು,ಉಪವಿಭಾಗ-ರಾಯಚೂರು ರವರ ನಿರ್ದೇಶನದಲ್ಲಿ ಹಾಗೂ ಸಿಂಧನೂರು ವಲಯ ಅಬಕಾರಿ ನಿರೀಕ್ಷಕರಾದ ಸಿದ್ಧಾರೂಢ ಲಕ್ಕಶಟ್ಟಿ ರವರ ನೇತೃತ್ವದಲ್ಲಿ ಅಬಕಾರಿ ಉಪನಿರೀಕ್ಷರಾದ ನಾಗಣ್ಣ ಬಿರಾದಾರ ಮತ್ತು ಪೂಜಾ ಖರ್ಗೆ ರವರು ಆಯನೂರು ಗ್ರಾಮದಲ್ಲಿ ಗಸ್ತು ಮಾಡುತ್ತಿರುವ ಸಮಯದಲ್ಲಿ ಬಂದ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅಂದಾಜು 60 ಲೀಟರ್ ನಷ್ಟು ಕಲಬೆರಕೆ ಸೇಂದಿಯನ್ನು ಮತ್ತು 2 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳಾದ ಬಸವಲಿಂಗಪ್ಪ ತಂದೆ ಈರಪ್ಪ, ಅಮರೇಶ ತಂದೆ ವಿರೂಪಣ್ಣ ಮತ್ತು ದೇವರಾಜ ತಂದೆ ಮುರುಳಿಪ್ಪ ಎಂಬುವವರನ್ನು ದಸ್ತಗಿರಿ ಮಾಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಸದರಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ದಾಳಿ ವೇಳೆ ಅಬಕಾರಿ ಪೇದೆ ದೇವರಾಜ
ಮತ್ತು ಅಬಕಾರಿ ಮಹಿಳಾ ಪೇದೆಯವರಾದ ವಿಜಯಲಕ್ಷ್ಮೀ ಅವರು ಹಾಜರಿದ್ದರು.
ಮಂಜುನಾಥ ಗಾಣಗೇರ
KTVKANNADA
ಸಿಂಧನೂರು

Add Comment