ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇಗೆ ಬಹುಭಾಷಾ ಚಿತ್ರ ‘ಪುಷ್ಪ’ ಟೀಸರ್ ಗಿಫ್ಟ್ ನೀಡಿದ ಮೈತ್ರಿ ಮೂವೀಸ್

ಟಾಲಿವುಡ್ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಇಂದು ಡಬಲ್‌ ಧಮಾಕಾ.
ಏಪ್ರಿಲ್‌ 8ರಂದು ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಬರ್ತ್‌ಡೇ.
ಇದೇ ವೇಳೆ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌ ಸೇರಿದಂತೆ ಸಿನಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್‌ ಇಂಡಿಯಾ ಮೂವಿ ‘ಪುಷ್ಪʼ ಟೀಸರ್‌ ರಿಲೀಸ್‌ ಆಗಿದೆ.
ಮೈತ್ರಿ ಮೂವೀಸ್‌ ಬ್ಯಾನರ್‌ನಲ್ಲಿ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು ಸುಕುಮಾರ್‌ ನಿರ್ದೇಶನದ ‘ಪುಷ್ಪʼ ಸಿನಿಮಾ 2021 ರ ಆಗಸ್ಟ್‌ 13 ರಂದು ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.
ಈ ಚಿತ್ರದಲ್ಲಿ ದಕ್ಷಿಣದ ಪ್ರತಿಭಾವಂತ ನಟರಾದ ಫಹದ್‌ ಫಸಲ್‌, ಧನಂಜಯ ಸಹ ಅಭಿನಯಿಸಿದ್ದಾರೆ.
ಅಲ್ಲು ಅರ್ಜುನ್‌ ಮತ್ತು ಸುಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದಿದ್ದ ಆರ್ಯ, ಆರ್ಯ-2 ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ಇದೀಗ ಇದೇ ಕಾಂಬಿನೇಶನ್‌ನಲ್ಲಿ ವಿಭಿನ್ನ ಕಥಾಹಂದರದ ಜೊತೆ ಬರ್ತಿರೋ ‘ಪುಷ್ಪʼ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.
ಒಟ್ಟಾರೆ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಬರ್ತ್‌ಡೇಗೆ ‘ಪುಷ್ಪʼ ಟೀಸರ್‌ ಗಿಫ್ಟ್‌ ನೀಡಿದ ಮೈತ್ರಿ ಮೂವೀಸ್‌ ದೊಡ್ಡ ನಿರೀಕ್ಷೆಯಲ್ಲಿದೆ.
KTVKANNADA
ಹೈದರಾಬಾದ್

Add Comment