ಮಸ್ಕಿ: ಪಾರದರ್ಶಕ ಚುನಾವಣೆ ನಡೆಸಿ ಬಿಜೆಪಿ ಸೋಲಿಸಿ-ಆರ್.ಮಾನಸಯ್ಯ

ಪಾರದರ್ಶಕ ಚುನಾವಣೆ ನಡೆಸಿ,ಬಿಜೆಪಿ ಸೋಲಿಸಿ: ಆರ್ ಮಾನಸಯ್ಯ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸುಮಾರು 5 ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವಂತಹ ಸುಮಾರು 58ಕ್ಕೂ ಹೆಚ್ಚು ಹಳ್ಳಿಗಳ ರೈತರ ಜೀವನಾಡಿ ಆಗಿರುವ ಎನ್.ಆರ್.ಬಿ.ಸಿ 5A ಕಾಲುವೆ ಯೋಜನೆ ಜಾರಿಗೆ ತರುವಂತೆ ರೈತರು ಸುಮಾರು 140 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಆಡಳಿತಾರೂಢ ಬಿಜೆಪಿ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದೆ ರೈತರನ್ನು ಕಡೆಗಣಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆರ್.ಮಾನಸಯ್ಯ ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ ರೈತ ವಿರೋಧಿ ಪ್ರತಾಪಗೌಡ ಪಾಟೀಲನನ್ನು ಈ ಉಪಚುನಾವಣೆಯಲ್ಲಿ ಒಮ್ಮತದಿಂದ ಸೋಲಿಸಬೇಕು ಎಂದು ಕರೆ ನೀಡಿದರು.

ಈ ಕ್ಷೇತ್ರದ ರೈತಾಪಿ ವರ್ಗಕ್ಕೆ,ದಲಿತ,ಅಲ್ಪಸಂಖ್ಯಾತರಿಗೆ ,ಯುವಜನರಿಗೆ,ಮಹಿಳೆಯರಿಗೆ ಅನ್ಯಾಯ ಮಾಡುತ್ತಾ ನಮ್ಮ ಭಾಗದ ಜನರ ಗುಳೇ ಹೋಗುವುದು ತಪ್ಪಿಸಿ ಆರ್ಥಿಕವಾಗಿ,ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಸುವರ್ಣಾವಕಾಶವನ್ನು ಹಾಳುಮಾಡಿದ ಪ್ರತಾಪ ಗೌಡ ಪಾಟೀಲನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಅದಕ್ಕಾಗಿ ನಾವೆಲ್ಲರೂ ಒಕ್ಕೊರಲಿನಿಂದ ಬಿಜೆಪಿ ಸೋಲಿಸಬೇಕು ಎಂದು ಕರೆ ನೀಡಿದರು.

ನಮ್ಮ 5A ಕಾಲುವೆ ಹೋರಾಟಕ್ಕೆ ಕಲ್ಲು ಹಾಕಿ ತನಗೆ ಲಾಭದ ಯೋಚನೆ ಮಾಡಿ ನಂದವಾಡಗಿ ಏತನೀರಾವರಿ ಯೋಜನೆ ಜಾರಿಗೆ ತರಲು ಮುಂದಾಗಿದೆ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಈ ಬಗ್ಗೆ ಘೋಷಣೆ ಮಾಡಿದೆ. ಆದರೆ ರೈತರಿಗೆ ಮೋಸ ಮಾಡಿದ ಭ್ರಷ್ಟರು,ರೈತ ವಿರೋಧಿ ಬಿಜೆಪಿ ಮುಖ್ಯಮಂತ್ರಿಗಳು 5A ಯೋಜನೆ ಜಾರಿಗೆ ತರಲು ಸಾದ್ಯವೇ ಇಲ್ಲ ಎಂದು ತಮ್ಮನ್ನು ತಾವೇ ರೈತ ವಿರೋಧಿಗಳೇ ಎಂದು
ರಾಜಾರೋಷವಾಗಿ ತೋರಿಸಿಕೊಟ್ಟಿದ್ದಾರೆ. ಅಲ್ಲದೆ 470 ಕೋಟಿ ರೂ. ಮಸ್ಕಿ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಪಡಿಸಲು ಘೋಷಿಸುವ ಮೂಲಕ ಬಿಜೆಪಿ ನಾಯಕರ ಖಜಾನೆ ತುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನಾವು ಪಾಮನಕಲ್ಲೂರಿನಲ್ಲಿ ನಡೆಸುತ್ತಿರುವ 140 ದಿನಗಳ ಅನಿರ್ದಿಷ್ಟ ಅವಧಿ ಧರಣಿಯನ್ನು ಪ್ರತಾಪ ಗೌಡ ಪಾಟೀಲ ಸೇರಿದಂತೆ ಬಿಜೆಪಿ ನಾಯಕರು ಹೋರಾಟಗಾರರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ನಮ್ಮ ಹೋರಾಟದ ಮೂಲಕ 5A ಯೋಜನೆ ಅಲೆ ಏಳುತ್ತಿದಂತಲೇ ರಾಗ ಬಲಾಯಿಸಿ 5A ಪರ ನಾಟಕ ಶುರುಮಾಡಿದ್ದಾರೆ.
ಮತ ಖರೀದಿ ಕೇಂದ್ರಗಳನ್ನು ಮುಚ್ಚಿ-ಆರ್.ಮಾನಸಯ್ಯ ಗಂಭೀರ ಆರೋಪ

ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ತಂತ್ರ ರಾಜಕಾರಣದಿಂದ ಕೂಡಿಲ್ಲ,ಇವರ ಚುನಾವಣಾ ಪ್ರಚಾರ ಜನಪರವಾಗಿ ಮಾಡುತ್ತಿಲ್ಲ,ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 250 ವಾಹನಗಳು,1000 ಕಾರ್ಯಕರ್ತರ ಸಮೇತ ರಾತ್ರೋರಾತ್ರಿ ಹಳ್ಳಿ-ಹಳ್ಳಿ ಸುತ್ತಿ ಮತದಾರರಿಗೆ ಆಮಿಷ ಒಡ್ಡುವ ಮೂಲಕ ಮತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಏಜೆಂಟರು ಇದ್ದು ಅವರ ಮೂಲಕ ಹಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಮತ್ತು ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎನ್.ಆರ್.ಬಿ.ಸಿ 5A ಕಾಲುವೆ ಸಂಯುಕ್ತ ವೇದಿಕೆಯ ಅಧ್ಯಕ್ಷ ಮಾನಸಯ್ಯ,ಸಂತೋಷ ಹಿರೇದಿನ್ನಿ,ಮಾರುತಿ ಜಿನ್ನಾಪುರ,ಶಿವನಗೌಡ ವಟಗಲ್, ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು.

ಚನ್ನಬಸವ ಹಿರೇಮಠ
KTVKANNADA
ಮಸ್ಕಿ

Add Comment